Article Image

ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜನೆ

Article Image

ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಮಂಗಳೂರು: ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ವತಿಯಿಂದ ದಶಲಕ್ಷಣ ಪರ್ವ ಆಚರಣೆಯ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವು ಮುನಿರಾಜ ರೆಂಜಾಳ ಅವರಿಂದ ಮಂಗಳೂರಿನ ಲಾರ್ಡ್ ಮಹಾವೀರ ಬೋರ್ಡಿಂಗ್‌ನ ವರ್ಧಮಾನ ಸಿದ್ಧಾರ್ಥ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಗೆ ದಶಲಕ್ಷಣ ನಿಮಿತ್ತ ಸ್ಪರ್ದೆಗಳ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಮಂಗಳೂರು ಜೈನ್ ಮಿಲನ್ ಅಧ್ಯಕ್ಷರಾದ ಸಚಿನ್ ರವರು ಉಪಸ್ಥಿತರಿದ್ದರು. ಸಂಧ್ಯಾ ಗುಣಪಾಲ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಎಲ್ಲರನ್ನು ಸ್ವಾಗತಿಸಿ ,ವಂದಿಸಿದರು.

ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿ - ಆಯ್ಕೆ

Article Image

ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿ - ಆಯ್ಕೆ

ಮೈಸೂರು: ಖ್ಯಾತ ಶಿಕ್ಷಣ ತಜ್ಞರು, ವಿದ್ಯಾರ್ಥಿ ಪೋಷಕರು, ಆಪ್ತ ಸಮಾಲೋಚಕರಾದ ವಿದ್ಯಾ ವಾಚಸ್ಪತಿ ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿರವರು ಅಂತರ್ ರಾಷ್ಟ್ರೀಯ ಶಿಕ್ಷಕ ದಿನಾಚರಣೆ ನಿಮಿತ್ತ "ಇಂಟರ್ನ್ಯಾಷನಲ್ ಟೀಚರ್ಸ್ ಎಕ್ಸಲೆಂಟ್ ಅವಾರ್ಡ್ " ಪ್ರಶಸ್ಥಿಗೆ ಭಾಜನರಾಗಿದ್ದಾರೆ.

ಶಿರಗುಂಜಿ: ಪೂಜಾ ಮಹೋತ್ಸವ

Article Image

ಶಿರಗುಂಜಿ: ಪೂಜಾ ಮಹೋತ್ಸವ

ಅಂಕೋಲಾ: ನಾಗರವಳ್ಳಿ ಕ್ಷೇತ್ರ ಶಿರಗುಂಜಿಯಲ್ಲಿರುವ ಭ| ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಜೋಡಿ ಪದ್ಮಾವತಿ ದೇವಿ ಜಿನ ಮಂದಿರದಲ್ಲಿ ದಿನಾಂಕ 11-10-2026 ರಿಂದ 20-10-2026 ರವರೆಗೆ ನಡೆಯಲಿರುವ ಶರನ್ನವರಾತ್ರಿ ಹಾಗೂ ವಿಜಯದಶಮಿಯ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ 10 ದೇವಿಯರ ಪೂಜೆ ನಡೆಯಲಿದೆ. ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಜೋಡಿ ಪದ್ಮಾವತಿ ದೇವಿ ಹಾಗೂ ಕ್ಷೇತ್ರಪಾಲ ನಾಗದೇವತೆಗಳಿಗೆ ಪಂಚಾಮೃತ ಅಭಿಷೇಕ, ಆರಾಧನೆ, ನವಗ್ರಹಶಾಂತಿ, ಅಲಂಕಾರ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ಜೋಡಿ ಪದ್ಮಾವತಿ ದೇವಿಗೆ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮಗಳು ನಡೆಯಲಿದೆ.

ಎನ್.ಆರ್ ಪುರ: ಪೂಜಾ ಕಾರ್ಯಕ್ರಮ

Article Image

ಎನ್.ಆರ್ ಪುರ: ಪೂಜಾ ಕಾರ್ಯಕ್ರಮ

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರ ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ ಸಿಂಹನಗದ್ದೆ ಬಸ್ತಿಮಠ, ನರಸಿಂಹರಾಜಪುರದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಪೂಜಾ ಮಹೋತ್ಸವವು ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ದಿನಾಂಕ 11/10/2026 ರಿಂದ 21/10/2026 ರವರೆಗೆ ಜರಗಲಿದೆ. ಪ್ರತಿನಿತ್ಯ ಬೆಳಿಗ್ಗೆ 8-00 ರಿಂದ ಶ್ರೀ ಕ್ಷೇತ್ರದ ಎಲ್ಲಾ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ಸಂಜೆ 6-00 ರಿಂದ ಅಮ್ಮನವರಿಗೆ ಶೋಡಷೋಪಚಾರ ಪೂಜೆ, ಧರ್ಮೋಪದೇಶ, ಮಹಾ ಮಂಗಳಾರತಿ ನೆರವೇರಲಿದೆ. ವಿಜಯ ದಶಮಿಯಂದು ಪೂರ್ವ ಪಟ್ಟಾಧೀಶರ ನಿಷಿದಿಯ ಪಾದುಕೆ ಪೂಜೆ ಮತ್ತು ಪೂರ್ವಾಚಾರ್ಯರ ಪಾದುಕೆಗಳ ಪೂಜೆ ಮತ್ತು ನಂತರ ಸರಿಯಾಗಿ ಮಧ್ಯಾಹ್ನ 3-40ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಸ್ವಸ್ತಿಶ್ರೀಗಳ ಪರಂಪರಾಗತ ಸದ್ಧರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ, ಶ್ರೀ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ವಿ.ಸೂ: ದಿನಾಂಕ 21-10-2026ನೇ ಬುಧವಾರ ಸಂಜೆ 5-00 ಘಂಟೆಗೆ ರಾಜಬೀದಿಯಲ್ಲಿ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಉತ್ಸವ.

ಜೈನ್ ಮಿಲನ್ ಮಾಸಿಕ ಸಭೆ ಹಾಗೂ “ಗುರುವಂದನಾ” ಕಾರ್ಯಕ್ರಮ

Article Image

ಜೈನ್ ಮಿಲನ್ ಮಾಸಿಕ ಸಭೆ ಹಾಗೂ “ಗುರುವಂದನಾ” ಕಾರ್ಯಕ್ರಮ

ಮಂಗಳೂರು: ಜೈನ್ ಮಿಲನ್ ಮಾಸಿಕ ಸಭೆಯನ್ನು “ಗುರುವಂದನಾ” ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ವರ್ಧಮಾನ ಸಿದ್ಧಾರ್ಥ ಭವನ, ಮಹಾವೀರ್ ಜೈನ್ ಬೋರ್ಡಿಂಗ್‌ನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಗುರುವಂದನಾ ಕಾರ್ಯಕ್ರಮದಲ್ಲಿ 46ಕ್ಕೂ ಹೆಚ್ಚು ಶಿಕ್ಷಕರನ್ನು ಆಹ್ವಾನಿಸಿ, ಫಲ ಹಾಗೂ ತಂಬೊಲ ನೀಡಿ ಗೌರವಿಸಲಾಯಿತು. ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ಅವರ ಸಮಾಜ ಮತ್ತು ವಿದ್ಯಾರ್ಥಿಗಳ ಜೀವನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ವೈವಾಹಿಕ ದಿನಾಚರಣೆ ,ಹುಟ್ಟುಹಬ್ಬದ ಆಚರಣೆ ಹಾಗೂ ಉಡುಗೊರೆ ಸಮಾರಂಭವನ್ನು ಅನ್ವಿತಾ ಅವರು ನಡೆಸಿಕೊಟ್ಟರು. ಸಂಘಟನೆಯ ಸದಸ್ಯರು ಹಾಗೂ ಸದಸ್ಯೆಯರ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು ಹಾಗೂ ಹೊಸ 8 ಸದಸ್ಯರನ್ನು ಸೇರ್ಪಡೆಗೋಳಿಸಲಾಯಿತು. ಸಭೆಯಲ್ಲಿ ಇತ್ತೀಚೆಗೆ ಅಗಲಿದ ಐ. ಆ. ಬಲ್ಲಾಳ್ ಅವರಿಗೆ ಪಂಚ ನಮಸ್ಕಾರದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಮಕ್ಕಳೇ ನಿರ್ವಹಿಸಿದರು. ನಂತರ ಮಕ್ಕಳ ತಂಡದಿಂದ ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಕುಮಾರ್ ಜೈನ್, ಅಧ್ಯಕ್ಷರು, ಭಾರತೀಯ ಜೈನ ಮಿಲನ್, ಮಂಗಳೂರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶ್ರುತಿಕೀರ್ತಿ ರಾಜಾ, ನಿರ್ದೇಶಕರು, ಶೃತ ಅಕಾಡೆಮಿ, ಮಂಗಳೂರು ಹಾಗೂ ವಿಶೇಷ ಅತಿಥಿಗಳಾಗಿ ಪುಷ್ಪರಾಜ್ ಜೈನ್, ರಾಷ್ಟ್ರೀಯ ಉಪಾಧ್ಯಕ್ಷರು, ಭಾರತೀಯ ಜೈನ ಮಿಲನ್, ನವದೆಹಲಿ ಮತ್ತು ರಾಜೇಶ್ ಎಂ., ರಾಷ್ಟ್ರೀಯಸಂಯೋಜಕರು, ಭಾರತೀಯ ಜೈನ ಮಿಲನ್, ನವದೆಹಲಿ ಉಪಸ್ಥಿತರಿದ್ದರು. ಸನ್ನಿದಿ ಮತ್ತು ತಂಡದವರು ಸ್ವಾಗತಿಸಿದರು. ಶ್ರವಣ್‌ರವರು ಸ್ವಾಗತ ಭಾಷಣ ಮಾಡಿದರು. ಅಕ್ಷಯ ಕುಮಾರ್‌ರವರು ಮಾಸಿಕ ವರದಿಯನ್ನು ಮಂಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಸಮ್ಮೇದ್ ಜೈನ್‌ರವರು ನೆರವೇರಿಸಿದರು. ಬಳಿಕ ನಡೆದÀ ಲಕ್ಕಿ ಗೇಮ್ ಕಾರ್ಯಕ್ರಮವನ್ನು ಶಾಶ್ವತಿ ಜೈನ್ ನಡೆಸಿಕೊಟ್ಟರು. ಗಹನ ಜೈನ್‌ರವರು ಕಾರ್ಯಕ್ರಮವನ್ನು ನಿರ್ವಹಿಸಿದರು ಸಮರ್ಥ್ ಜೈನ್‌ರವರು ವಂದನಾರ್ಪಣೆ ಸಲ್ಲಿಸಿದರು. ಡಾ. ಸೌಮ್ಯರವರು ಶಾಂತಿ ಮಂತ್ರವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.

ಜೈನ ಧಾರ್ಮಿಕ ಶಿಕ್ಷಣ ಶಿಬಿರ ಉದ್ಘಾಟನೆ

Article Image

ಜೈನ ಧಾರ್ಮಿಕ ಶಿಕ್ಷಣ ಶಿಬಿರ ಉದ್ಘಾಟನೆ

ಧಾರವಾಡ: ಇಂದಿನ ಆಧುನಿಕ ಜಗತ್ತಿನಲ್ಲಿ ಶ್ರಾವಕರಲ್ಲಿ ಜೈನ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಜೈನ ಧರ್ಮದ ತತ್ವ ಹಾಗೂ ಮಾನವೀಯತೆಯನ್ನು ಬೆಳೆಸಲು ಧಾರ್ಮಿಕ ಶಿಕ್ಷಣವು ಅತ್ಯಂತ ಮುಖ್ಯವಾಗಿದೆ ಎಂದು ಎಸ್ ಡಿ ಎಂ ವೈದ್ಯಕೀಯ ವಿಶ್ವವಿದ್ಯಾಲಯ ಧಾರವಾಡದ ಡಾ.ನಿರಂಜನ ಕುಮಾರಮತ್ತು ಪದ್ಮಲತಾ ನಿರಂಜನ್ ಕುಮಾರ ಇವರು ಸನ್ಮತಿ ಜಿನ ಮಂದಿರದ ಆಗಮನ ಭವನದಲ್ಲಿ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಅಜೀತ ಪ್ರಸಾದ ಕಾರ್ಯದರ್ಶಿಗಳು ಜನತಾ ಶಿಕ್ಷಣ ಸಮಿತಿ, ಧಾರವಾಡ ಇವರು ವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ಜೀವಂದರ ಕುಮಾರ ಕಾರ್ಯದರ್ಶಿಗಳು ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಧಾರವಾಡ ಹಾಗೂ ಧಾರವಾಡದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸನ್ಮತಿ ಸೇವಾ ಸಮಾಜದ ಅಧ್ಯಕ್ಷ ಅಶೋಕ ಬಾಗಿ ಹಾಗೂ ಹಿರಿಯರು ಮತ್ತು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಚಾಲನೆಗೊಳಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಅಜಿತಪ್ರಸಾದ ಶಿಬಿರದ ಮಹತ್ವಕಾಂಕ್ಷೆ ಮತ್ತು ಪರಿಕಲ್ಪನೆ ಮತ್ತು ಅಗತ್ಯತೆಯ ಬಗ್ಗೆ ಮಾತನಾಡಿ ಇದು ನನ್ನ ಬಹುದಿನಗಳ ಕನಸಾಗಿತ್ತು ಇನ್ನು ಮುಂದೆ ಇದನ್ನು ಮುಂದುವರಿಸಿಕೊಂಡು ಹೋಗುವ ಇಂಗಿತವನ್ನು ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಡಾ. ಅಜಿತಪ್ರಸಾದ ಇವರು ಪ್ರಕಟಿಸಿರುವ ಮತ್ತು ಶಿಬಿರದಲ್ಲಿ ಭೋದನೆಗೆ ಅಗತ್ಯವಿರುವ ಪುಸ್ತಕ ಬಿಡುಗಡೆ ಮಾಡಲಾಯಿತು. ಸುಮಾರು 200 ಕ್ಕೂ ಹೆಚ್ಚು ಜನ ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದರು. ದಿನಾಂಕ 04.10.2026 ರಿಂದ 8.10.2026 ರ ವರೆಗೆ ನಡೆಯುವ ಶಿಬಿರದ ಭೋದಕ ಮತ್ತು ಮಾರ್ಗದರ್ಶಕರಾಗಿ ಶಿರಗುಪ್ಪಿಯ ಪಂಡಿತ ಮಿಥುನ್ ಶಾಸ್ತ್ರೀ ಮತ್ತು ಉಗಾರದ ಡಾ. ಪಂಡಿತ್ ಅನೇಕಾಂತ ಶಾಸ್ತ್ರೀ ಇವರು ನೇತೃತ್ವ ವಹಿಸಿದ್ದರು. ಡಾ. ಭರಮಪ್ಪ ಭಾವಿ ಇವರು ಜೈನ ಸಿದ್ದಾಂತ ಮತ್ತು ತತ್ವಗಳ ಅರಿವಿಲ್ಲದೆ ಯುವಕರು ಧಾರ್ಮಿಕತೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಂಕಿಅಂಶಗಳ ಸಹಿತ ವಿವರಿಸಿ ಧಾರ್ಮಿಕ ಶಿಕ್ಷಣ ಅಗತ್ಯ ಕುರಿತಾಗಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊನೆಯಲ್ಲಿ ಡಾ. ರತ್ನಾಕರ ಹೋಳಿಗಿ ವಂದಿಸಿದರು. ಧಾರವಾಡ ಜೈನ ಮಿಲನ್ ಅಧ್ಯಕ್ಷ ಡಾ. ಜಿನ್ನಪ್ಪ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು. ಪ್ರಸ್ತುತ ಈ ಶಿಬಿರವು ಐದು ದಿನಗಳ ಕಾಲ ನಡೆಯಲಿದೆ. ವರದಿ : ಶಾಂತರಾಜ ಮಲ್ಲಸಮುದ್ರ

ಪದ್ಮಪ್ರಭ ಇಂದ್ರ ಶಾಸ್ತ್ರಿರವರಿಗೆ- ಪಂಡಿತ ರತ್ನ ಪ್ರಶಸ್ತಿ

Article Image

ಪದ್ಮಪ್ರಭ ಇಂದ್ರ ಶಾಸ್ತ್ರಿರವರಿಗೆ- ಪಂಡಿತ ರತ್ನ ಪ್ರಶಸ್ತಿ

ನಾರಾವಿ: "ಶ್ರಾವಕ ಷಡಾವಶ್ಯಕ ದರ್ಶನ" ಜಿನವಾಣಿ ಶಾಸ್ತ್ರದ ಲೋಕಾರ್ಪಣೆ ಮತ್ತು ಶ್ರೀ ಅನಂತನೋಂಪಿ ವ್ರತಧಾರಿಗಳ ಅಭಿನಂದನಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಶಾಸ್ತ್ರಿ, ಅಳದಂಗಡಿ ಜೈನ ಆಗಮ ಶಾಸ್ತ್ರದಲ್ಲಿ ಇವರ ಅಪಾರ ಪಾಂಡಿತ್ಯ, ಪ್ರತಿಷ್ಠಾ ವಿಧಾನದಲ್ಲಿ ಸೇವೆ ಮತ್ತು ಧರ್ಮ ಪ್ರಚಾರ ಕಾರ್ಯವನ್ನು ಗುರುತಿಸಿ "ಪಂಡಿತ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ ವಿ ವಿ ಜೈನ ಅಧ್ಯಯನ ಪೀಠ: ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ಕ ವಿ ವಿ ಜೈನ ಅಧ್ಯಯನ ಪೀಠ: ವಿಶೇಷ ಉಪನ್ಯಾಸ ಕಾರ್ಯಕ್ರಮ

ಧಾರವಾಡ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆ ಕನ್ನಡಕ್ಕೆ ಮತ್ತು ನಾಡಿನ ಸಂಸ್ಕೃತಿಗೆ ಜೈನ ಕವಿಗಳ ಕೊಡುಗೆ ಅಪಾರವಾಗಿದೆ. ರತ್ನತ್ರಯ ಕವಿಗಳೆಂದೇ ಹೆಸರಾದ ಪಂಪ, ರನ್ನ, ಪೊನ್ನ ಹಾಗೂ ಅಭಿನವ ಪಂಪ ಎಂದು ಹೆಸರಾದ ನಾಗಚಂದ್ರ, ಜನ್ನ, ನಯಸೇನ ಮುಂತಾದ ಹಲವಾರು ಜೈನ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರಲ್ಲದೆ ಅಹಿಂಸಾ ತತ್ವದ ಜೊತೆಗೆ ಸಮಾನತೆ, ಧಾರ್ಮಿಕ ಚಿಂತನೆ ಆಧ್ಯಾತ್ಮಿಕ ಮೌಲ್ಯಗಳನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಅಭಿಪ್ರಾಯಪಟ್ಟರು. ಅವರು ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ಧಸೇನ ಮುನಿಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆ ಎಸ್ ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ ಧಾರವಾಡ ಮತ್ತು ಸಮಸ್ತ ಜೈನ ಸಮಾಜ ಛಬ್ಬಿ ಇವುಗಳ ಸಹಯೋಗದಲ್ಲಿ ಜರುಗಿದ "ಸಾಹಿತ್ಯ-ಸಂಸ್ಕೃತಿ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾಗಿ ಖ್ಯಾತ ವಾಗ್ಮಿಗಳು ನಿವೃತ್ತ ಪ್ರಾಧ್ಯಾಪಕರು ಆದ ಡಾ. ವೈ. ಎಂ. ಭಜಂತ್ರಿ ಇವರು "ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ" ವಿಷಯ ಕುರಿತಾಗಿ ಅತ್ಯಂತ ಮಹತ್ವಪೂರ್ಣ ಮಾಹಿತಿ ನೀಡಿ ಅದ್ಭುತವಾದ ಉಪನ್ಯಾಸ ನೀಡಿದರು. ಅವರು ಜೈನ ಕವಿಗಳು ಹಳೆಗನ್ನಡ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯಗಳನ್ನು ರಚಿಸಿ ಅಂದಿಗೆ ಇಂದಿಗೂ ಮುಂದೆಯೂ ಸದಾ ಸ್ಮರಿಸುವಂತ ವಿಶಿಷ್ಟ ಕೊಡುಗೆಯನ್ನು ನೀಡಿ ಸಾಹಿತ್ಯ ಪ್ರಪಂಚದಲ್ಲಿ ಅಜರಾಮರರಾಗಿದ್ದಾರೆ. ಕನ್ನಡ ಸಾಹಿತ್ಯವನ್ನು ಜೈನ ಕವಿಗಳಿಂದ ರಚನೆಯಾದ ಕೃತಿಗಳಿಂದ ಬೇರ್ಪಡಿಸಿ ನೋಡಿದರೆ ಅದು ಮನುಷ್ಯನ ಶರೀರದ ಅಸ್ತಿಪಂಜರದಂತೆ, ಹೂರಣ ತೆಗೆದ ಹೋಳಿಗೆಯಂತೆ ಕಾಣುತ್ತದೆ ಎಂದರು. ಜೈನ ಕವಿಗಳ ಕೊಡುಗೆಯಿಂದ ಕನ್ನಡ ಭಾಷೆಗೆ ಶಕ್ತಿ ತುಂಬಿದ್ದರಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಕಾರಣವಾಗಿದೆ ಎಂದರು. ಜೈನ ಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಪೀಠ ನಡೆದು ಬಂದ ದಾರಿ ಮತ್ತು ಕಾರ್ಯಚಟುವಟಿಕೆಗಳನ್ನು ಹಾಗೂ ಮುಂದಿನ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಾನಿಧ್ಯ ವಹಿಸಿದ ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ದಸೇನ ಮುನಿಮಹಾರಾಜರು ತಮ್ಮ ಪ್ರವಚನದಲ್ಲಿ ಸಾಹಿತ್ಯ-ಸಂಸ್ಕೃತಿಯ ಉನ್ನತಿಗಾಗಿ ಶ್ರಮಿಸುತ್ತಿರುವ ಜೈನ ಪೀಠದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ತ್ಯಾಗಿಗಳಾದ ಸೋಮದೇವ ಬಯ್ಯಾಜಿ, ರಾಜೇಂದ್ರ ಬಯ್ಯಾಜಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ, ಧನಪಾಲ ಮುನ್ನೊಳ್ಳಿ, ಶಾಂತಿನಾಥ ಹೋತಪೇಟಿ, ಛಬ್ಬಿ ಜೈನ ಸಮಾಜದ ಅಧ್ಯಕ್ಷ ಅನಂತ ಕಲಘಟಗಿ, ಚಾತುರ್ಮಾಸ ಕಮಿಟಿ ಅಧ್ಯಕ್ಷ ರವಿ ಹುಲ್ಲಂಬಿ ಹಾಗೂ ಛಬ್ಬಿ ಗ್ರಾಮದ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಭರಮಪ್ಪ ಭಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವರದಿ : ಎಸ್ ಆರ್ ಮಲ್ಲಸಮುದ್ರ

ಕಾರ್ಕಳದಲ್ಲಿ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸಾಚರಣೆ

Article Image

ಕಾರ್ಕಳದಲ್ಲಿ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸಾಚರಣೆ

ವೇಣೂರು: ಕಾರ್ಕಳ ಶ್ರೀ ಮಠದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಿರುವ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ದರ್ಶನ ಪಡೆಯಲು ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸದಸ್ಯರೆಲ್ಲರೂ ಕಾರ್ಕಳಕ್ಕೆ ತೆರಳಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ದರ್ಶನ ಪಡೆದು, ಬಳಿಕ ಇತರ ಬಸದಿಗಳ ದರ್ಶನದ ನಂತರ ಮುನಿಮಹಾರಾಜರ ಬಳಿ ತೆರಳಿ ಅವರ ಆಶೀರ್ವಾದ ಪಡೆದು, ಸಂಜೆಯ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮೀ ಸಮಾಜದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುನಿಶ್ರೀ ಪ್ರಸಂಗ ಸಾಗರ ಮುನಿಮಹಾರಾಜರು 2017ರಲ್ಲಿ ವೇಣೂರಿನಲ್ಲಿ ಚಾತುರ್ಮಾಸವನ್ನು ಆಚರಿಸಿದ್ದರು.

ಸಾಗರ: 24ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

Article Image

ಸಾಗರ: 24ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಸಾಗರ/ಶಿವಮೊಗ್ಗ: ಜೈನ ಸಮುದಾಯದ ಶ್ರೀಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘ, ನಿಯಮಿತ, ಸಾಗರ ಸಹಕಾರಿ ಪ್ರಸಕ್ತ ವರ್ಷ 4 ಲಕ್ಷದ 70 ಸಾವಿರದ 473 ರೂಗಳ ನಿವ್ವಳ ಲಾಭಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಕೆ.ಜೆ.ಪದ್ಮರಾಜ್ ಭಾನುಕುಳಿ ಹೇಳಿದರು. ಅವರು ನೆಹರೂ ಮೈದಾನದಲ್ಲಿನ ಸರ್ವತೋಭದ್ರ ಶ್ರೀ 1008 ಆದಿನಾಥ ತೀರ್ಥಂಕರರ ಬಸದಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘ, ನಿಯಮಿತ, ಇದರ 24ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆವಹಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. 2002ರಲ್ಲಿ ಸಂಸ್ಥೆ ಸ್ಥಾಪನೆಗೊಂಡು ನಿರಂತರ ಜೈನ ಸಮುದಾಯದ ಕೃಷಿಕರುಗಳ ಅನುಕೂಲಕ್ಕೆ ಸಾಲಸೌಲಭ್ಯಗಳು ಕಲ್ಪಿಸುತ್ತಾ, ಠೇವಣಿಗಳು ಸಂಗ್ರಹಿಸುತ್ತಾ ಆರ್ಥಿಕ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ 815 ಜನ ಷೇರುದಾರ ಸದಸ್ಯರುಗಳಿದ್ದು, ಷೇರುಬಂಡವಾಳ 9,87,500 ರೂಗಳಾಗಿವೆ ಎಂದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರುದಾರ ಸದಸ್ಯರುಗಳಿಗೆ ವಿವಿಧ ಸಾಲಗಳ ವಿಭಾಗಗಳಿಂದ 53,67,132.00ರೂ ಸಾಲ ವಿತರಣೆ ಮಾಡಲಾಗಿದೆ. 47.43.390.00 ರೂಗಳು ವಸೂಲಿಯಾಗಿದ್ದು, 26.47.751.00 ರೂಗಳಿಗೆ ಚಾಲ್ತಿಸಾಲ ಬಾಕಿ ಉಳಿದಿರುತ್ತದೆ ಎಂದರು. ಸಾಲ ವಸೂಲಾತಿಯೊಂದಿಗೆ ಠೇವಣಿ ಸಂಗ್ರಹದಲ್ಲಿಯೂ ಸಹಕಾರಿ ಉತ್ತಮ ಗಣನೀಯ ಸಾಧನೆ ಮಾಡಿದ್ದು, ವಿವಿಧ 6 ಮಾದರಿಯ ಠೇವಣಿ ಸಂಗ್ರಹ ಮಾಡಿದ್ದು, 39.57.802.00 ರೂಗಳ ಮೊತ್ತ ಸಹಕಾರಿಯಲ್ಲಿ ಠೇವಣಿ ಇರುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸುವುದು, ಆಧಾರ ಸಾಲ, ವಾಹನ ಸಾಲಗಳ ಹೆಚ್ಚಿಸುವುದು, ಪಿಗ್ಮಿ ಸಂಗ್ರಹ ಕಾರ್ಯವನ್ನು ಹೆಚ್ಚಿಸುವುದು, ಸಾಲ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಕುರಿತು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಗರ ಜೈನ ಸಮಾಜದ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಎಸ್.ವಿ.ಹಿತಕರ ಜೈನ್ ಮತ್ತು ನಿಕಟಪೂರ್ವ ಗೌರವಾಧ್ಯಕ್ಷರಾದ ಹೋಯ್ಸಳ ಜೈನ್ ಇವರುಗಳನ್ನು ಸನ್ಮಾನಿಸಲಾಯಿತು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿತಕರ್ ಜೈನ್‌ರವರು ಸಮುದಾಯದ ಆರ್ಥಿಕ ಸಹಕಾರಿ ಸಂಸ್ಥೆಯನ್ನು ಸದೃಡವಾಗಿ ಆರೋಗ್ಯಕರವಾಗಿ ಬೆಳೆಸುವಲ್ಲಿ ಸರ್ವರ ಸಹಕಾರ ಸಹಭಾಗಿತ್ವ ಅಗತ್ಯವಾಗಿದೆ. ಸಹಕಾರಿಗೆ ಅಗತ್ಯ ನಿವೇಶನ ಖರೀದಿಗೆ ಸಾಗರ ಜೈನ ಸಮಾಜದಿಂದ 3 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಲಾಗಿದ್ದು, ಶೀಘ್ರ ನಿವೇಶನ ಖರೀದಿಸಲು ಕ್ರಮವಹಿಸುವಂತೆ ಸಲಹೆ ನೀಡಿದರು. ಸಾಗರ ನಗರ ಪ್ರದೇಶದಲ್ಲಿರುವ ಸಹಕಾರಿ ವಹಿವಾಟನ್ನು ಡಿಜಿಟಲೀಕರಣಗೊಳ್ಳಬೇಕು. ಸಹಕಾರಿಯ ಆಡಳಿತಮಂಡಳಿ ಚುರುಕುಗೊಳ್ಳುವ ಮೂಲಕ ವಹಿವಾಟು ಹೆಚ್ಚಿಸಿಕೊಂಡು ಸೇವಾಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ಜೊತೆಗೆ ಲಾಭಗಳಿಕೆಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಬೇಕು ಎಂದು ಗಮನಸೆಳೆದರು. ಸಭೆಯಲ್ಲಿ ಸದಸ್ಯರುಗಳಾದ ಯಶೋಧರ ಇಂದ್ರ, ವೈ.ಜೆ.ಪದ್ಮರಾಜ್ ಜೈನ್, ಎಂಪಿ.ಲೋಕರಾಜ್ ಜೈನ್, ಹೊಯ್ಸಳ ಜೈನ್, ವಿ.ಟಿ.ಸ್ವಾಮಿ, ಮಂಜಯ್ಯ ಜೈನ್, ಗಜೇಂದ್ರ ಜೈನ್ ಮೊದಲಾದವರು ಪ್ರಶ್ನೆ ಹಾಗೂ ಸಲಹೆಗಳ ಮೂಲಕ ಸಭೆಯ ಗಮನಸೆಳೆದರು. ಈ ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷೆ ಸುಮತಿ ಎಂ.ಎನ್.ಪಾರ್ಶ್ವನಾಥ್, ನಿರ್ದೇಶಕರುಗಳಾದ ವಿ.ಸಿ.ವೀರರಾಜ್‌ಜೈನ್ ವಳಗೆರೆ, ಕೆ.ಎನ್.ಚೂಡಾರತ್ನ ಜೈನ್ ಕಾನೂರು, ಕೆ.ಬಿ.ಯೋಗರಾಜ್ ಜೈನ್ ಕೊರಲಕೈ, ಹೇಮಾ ಜೈನ್ ಸಾಗರ, ಹೆಚ್.ಬಿ.ಉದಯಕುಮಾರ್ ಜೈನ್ ಹಾಲೆಮನೆ, ಬಿ.ಎಂ.ಮಹಾವೀರ ಕುಪ್ಪಡಿ, ಪಿ.ಓಂಕಾರ್ ಜೈನ್ ಬಿದರೂರು, ಸದಸ್ಯರುಗಳಾದ ಪ್ರಭಾಕರ ಜೈನ್, ಸುನೀತ್‌ಕುಮಾರ್ ಜೈನ್, ಯೋಗರಾಜ್ ಜೈನ್, ಚಂದ್ರಕಾಂತ ಜೈನ್ ಕಾರ್ಗಲ್, ಎಸ್.ಆರ್.ನಾಗರಾಜ್ ಜೈನ್, ಸಂಸ್ಥೆಯ ಕಾರ್ಯದರ್ಶಿ ದೇವರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಜ್ಞಾನಶ್ರೀ ಜೈನ್ ಅವರಿಗೆ 2ನೇ ರ‍್ಯಾಂಕ್

Article Image

ಜ್ಞಾನಶ್ರೀ ಜೈನ್ ಅವರಿಗೆ 2ನೇ ರ‍್ಯಾಂಕ್

ಮೈಸೂರು: ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT Mysore) ಕಾಲೇಜಿನ ವಿದ್ಯಾರ್ಥಿನಿ ಎಸ್. ಬಿ . ಜ್ಞಾನಶ್ರೀ ಜೈನ್ ರವರು 'ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ - ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' [CSE (AI)] ವಿಭಾಗದಲ್ಲಿ 9.46 CGPA ಪಡೆದು VTU( Visvesvaraya Technological University) ರಾಜ್ಯ ಮಟ್ಟದಲ್ಲಿ 2 ನೇ ರ‍್ಯಾಂಕ್ (Rank 2) ಪಡೆದಿರುತ್ತಾರೆ. ದಿನಾಂಕ 26/09/2026 ರಂದು ಬೆಳಗಾವಿಯ VTUನಲ್ಲಿ ನಡೆದ 26 ನೇ ಘಟಿಕೋತ್ಸವದಲ್ಲಿ (VTU Convocation) ಇವರು 2 ನೇ ರ‍್ಯಾಂಕ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ಸರಗೂರಿನ ದೀಪ್ತಿ ಜುವೆಲರ್ಸ್ ಮಾಲೀಕರಾದ S.D. ಬ್ರಹ್ಮ ದೇವ್ ಮತ್ತು S.N. ಸುಪ್ರೀತದೇವ್ ರವರ ಪುತ್ರಿ.

ವಿದುಷಾ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Article Image

ವಿದುಷಾ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುದುಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2026ರಲ್ಲಿ ಅಂಡರ್-18 ಮಹಿಳೆಯರ 3000 ಮೀಟರ್ ರೇಸ್ ವಾಕ್ ವಿಭಾಗದಲ್ಲಿ ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೂಷಾ ಜೈನ್ ರವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದು, ರಾಷ್ಟ್ರಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಕಳಸಾದ ಕೆಳಂಗಡಿ ನಿವಾಸಿಯಾದ ಸತ್ಯೇಂದ್ರ ಜೈನ ಹಾಗೂ ವೀಣಾ ಚೈನ್ ದಂಪತಿಗಳ ಪುತ್ರಿ.

ಹಳಬಳ್ಳಿ ಕುಟುಂಬದ ಪುನರ್ಮಿಲನ ಕಾರ್ಯಕ್ರಮ

Article Image

ಹಳಬಳ್ಳಿ ಕುಟುಂಬದ ಪುನರ್ಮಿಲನ ಕಾರ್ಯಕ್ರಮ

ಸಾಗರ: ಇತ್ತೀಚಿನ ವರ್ಷಗಳಲ್ಲಿ ಜೈನ ಮಿಲನ, ಜಿನಸಮ್ಮಿಲನ, ಮುಂತಾದ ಕಾರ್ಯಕ್ರಮಗಳನ್ನು ನಾವು ನೋಡುತ್ತಿದ್ದೇವೆ. ಆದರೆ ಕುಟುಂಬ ಪುನರ್ಮಿಲನ ಎಂಬುದು ಒಂದು ಹೊಸ ಪರಿಕಲ್ಪನೆ. ಇದನ್ನು ರೂಪಿಸಿ ಸಾಧ್ಯವಾಗಿಸಿ ತೋರಿಸಿ ಕೊಟ್ಟಿದ್ದು ಸಾಗರ ತಾಲೂಕು ಭಾರಂಗಿ ಹೋಬಳಿಯ ಹಳಬಳ್ಳಿ ಕುಟುಂಬದವರು. ಇಂತಹ ಒಂದು ಹೊಸ ಮಾದರಿಯ ಕಾರ್ಯಕ್ರಮವನ್ನು ಹಳಬಳ್ಳಿ ಕುಟುಂಬದವರು ಕಾರ್ಗಲ್ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು. ಮೊದಲಿಗೆ ವೇದಿಕೆಯಲ್ಲಿ ಹಳಬಳ್ಳಿ ಕುಟುಂಬದ ಪೂರ್ವಜರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. ಬಾಹುಬಲಿ ಎಂ ಎಂ ಇವರು ಕುಟುಂಬ ಪುನರ್ ಮಿಲನದ ಕಾರ್ಯಕ್ರಮದ ಪರಿಕಲ್ಪನೆ ತಿಳಿಸಿಕೊಡುತ್ತಾ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ ಸುಂದರಪ್ರಭು ಇವರು ಹಳಬಳ್ಳಿ ಕುಟುಂಬದ ಇತಿಹಾಸದ ಪರಿಚಯ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಹಾವೀರ ಜೈನ ಇಚಲಂಪಾಡಿ ಅವರು ಅವಿಭಕ್ತ ಕುಟುಂಬದ ಹಿರಿಮೆ ಹಾಗೂ ಪ್ರಸ್ತುತ ಸಮಾಜದಲ್ಲಿ ಕುಟುಂಬಗಳ ಸಾಮರಸ್ಯದ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಹಳಬಳ್ಳಿ ವಂಶದ 21 ಕುಟುಂಬಗಳ 32 ಹಿರಿಯರನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು. ಕುಟುಂಬದ ಅನೇಕ ಸದಸ್ಯರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಹಿರಿಯರನ್ನು ನೆನಪಿಸಿಕೊಂಡರು. ಹಳಬಳ್ಳಿ ಕುಟುಂಬದ ಚಂದ್ರಪ್ರಭ (ಬಾಲು) ಎಲ್ಲರನ್ನು ಸ್ವಾಗತ ಮಾಡಿದರು. ತಾರಾನಾಥ್ ಜೈನ್‌ರವರು ವಂದಿಸಿದರು. ಕವಿತಾ ಜೈನ್ ಆಯನೂರು ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ನಂತರ ಹಿರಿಯರಿಗೆ ಮತ್ತು ಕಿರಿಯರಿಗೆ ಆಟಗಳು ಸಂಗೀತ ಕೋಲಾಟ ನೃತ್ಯ ಮುಂತಾದ ಅನೇಕ ಮನರಂಜನೆ ಕಾರ್ಯಕ್ರಮಗಳು ನಡೆದವು. (ಸುಂದರಪ್ರಭು)

ಪ್ರಜ್ಞಾಶ್ರೀ ಜೈನ್‌ರವರಿಗೆ ದ್ವಿತೀಯ ರ‍್ಯಾಂಕ್

Article Image

ಪ್ರಜ್ಞಾಶ್ರೀ ಜೈನ್‌ರವರಿಗೆ ದ್ವಿತೀಯ ರ‍್ಯಾಂಕ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 2025-26ನೇ ಶೈಕ್ಷಣಿಕ ವರ್ಷದ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾಶ್ರೀ ಜೈನ್‌ರವರು ದ್ವಿತೀಯ ರ‍್ಯಾಂಕನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆ, ಜಯನಿವಾಸದ ಜಯದೇವ್ ಕೆ ಮತ್ತು ಪ್ರಭಾವತಿ ದಂಪತಿಗಳ ಪುತ್ರಿ.

ಡಾ. ರಜತಾ ಪಿ. ಶೆಟ್ಟಿಯವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Article Image

ಡಾ. ರಜತಾ ಪಿ. ಶೆಟ್ಟಿಯವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

ಉಜಿರೆ: ಜ್ಞಾನಾರ್ಜನೆ, ಸಂಶೋಧನೆ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ, ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.), ಮಂಗಳೂರು ವಿಭಾಗದ ವತಿಯಿಂದ 2026ನೇ ಸಾಲಿನ ‘ಅಧ್ಯಾಪಕ ಭೂಷಣ ಪ್ರಶಸ್ತಿ’ ಉಡುಪಿಯ ಕಿದಿಯೂರಿನ ಮಾಧವ ಕೃಷ್ಣ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಗ್ರಂಥಪಾಲಕಿಯಾಗಿ ಡಾ. ರಜತಾ ಪಿ. ಶೆಟ್ಟಿಯವರ ಶೈಕ್ಷಣಿಕ ಸೇವೆ, ಗ್ರಂಥಾಲಯ ನಿರ್ವಹಣೆ, ಡಿಜಿಟಲೀಕರಣ, ಇ-ಸಂಪನ್ಮೂಲಗಳ ಬಳಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ರಜತಾ ಪಿ. ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಇ-ಸಂಪನ್ಮೂಲಗಳ ಕುರಿತು ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಎಸ್‌.ಡಿ.ಎಂ. ಕಾಲೇಜು, ಉಜಿರೆಯಲ್ಲಿ ಗ್ರಂಥಪಾಲಕರಾಗಿ ಹಾಗೂ ನಂತರ ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸುಮಾರು ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯದ ಅಭಿವೃದ್ಧಿ ಮತ್ತು ನಿರ್ವಹಣೆಯೊಂದಿಗೆ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಸ್‌.ಡಿ.ಎಂ. ಸಮೂಹ ಸಂಸ್ಥೆಗಳ ಗ್ರಂಥಾಲಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅಗತ್ಯವಾದ ಜ್ಞಾನ ಸಂಪನ್ಮೂಲಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ವಿವಿಧ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೂ ಕೊಡುಗೆ ನೀಡಿದ್ದಾರೆ.

ಪುಪ್ಪರಾಜ್ ಜೈನ್- ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ

Article Image

ಪುಪ್ಪರಾಜ್ ಜೈನ್- ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ

ಮಂಗಳೂರು: ಭಾರತೀಯ ಜೈನ್ ಮಿಲನಿನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪುಪ್ಪರಾಜ್ ಜೈನ್‌ರವರು ನೇಮಕಗೊಂಡಿರುತ್ತಾರೆ. ಇವರು ದಕ್ಷಿಣಕನ್ನಡ ಜಿಲ್ಲೆಯ ಬಿಲ್ಡರ್ಸ್ ಅಸೋಸಿಯೇಷನ್ (CREDAI MANGALORE) ಇದರ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ತದನಂತರ ರಾಜ್ಯಮಟ್ಟದಲ್ಲಿ ಕಾರ್ಯದರ್ಶಿಯಾಗಿ ತದನಂತರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಪುನಃ ಮಂಗಳೂರು CREDAIಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ CHAIRMAN ಆಗಿರುತ್ತಾರೆ. ಅಭೀಷ್ ಬಿಲ್ಡರ್ಸ್ ಮೂಲಕ ಈವರೆಗೆ ಅನೇಕ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಪುಷ್ಪರಾಜ್ ಜೈನ್ ಅವರು ಸಮಾಜ ಸೇವೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಅವರು ನಡೆಸಲ್ಪಡುವ ರಾಮೋತ್ಸವ ಸಮಿತಿಯಲ್ಲಿ ಸತತ 5 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ರೋಟರಿ, ಲಯನ್ಸ್, ಜೇಸಿಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. RED CROSS ದಕ್ಷಿಣಕನ್ನಡ ಜಿಲ್ಲಾ ಇದರ ಚುನಾಯಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. RED CROSS ಇದರ ಬಿಲ್ಡಿಂಗ್ ಕಮಿಟಿಯ CHAIRMAN ಆಗಿದ್ದು ಇವರ ಕಾಲಾವಧಿಯಲ್ಲಿ ಅತ್ಯಾಕರ್ಷಕ ಕಟ್ಟಡ ನಿರ್ಮಾಣವಾಗಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಿಂದ ಇದಕ್ಕಾಗಿ ಸನ್ಮಾನಗೊಂಡಿದ್ದಾರೆ. ಭಾರತೀಯ ಜೈನ್ ಮಿಲನ್‌ನ ವಿವಿಧ ಹುದ್ದೆಗಳನ್ನು ಅಲಂಕರಿಸಿ ವಲಯ -8 ರಾಜ್ಯದ ಅಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ಜೈನ್ ಸೊಸೈಟಿ ಸಂಘಟನೆಯ ಪ್ರಸ್ತುತ ಅಧ್ಯಕ್ಷರಾಗಿ ಧವಳ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪನೆ ಮಾಡುವಲ್ಲಿ ಮುಖ್ಯಸ್ಥರಾಗಿ, ಈಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಅಧ್ಯಕ್ಷರಾಗಿಯೂ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮತಸ್ಥಾಪನ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ 2027ರಲ್ಲಿ ಕಾರ್ಕಳದಲ್ಲಿ ಅತ್ಯಂತ ವೈಭವದಿಂದ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಿತಿಯ ಪ್ರದಾನ ಕಾರ್ಯದರ್ಶಿಯಾಗಿರುತ್ತಾರೆ.

ಸಾಗರ: ದಶಲಕ್ಷಣ ಮಹಾಪರ್ವ

Article Image

ಸಾಗರ: ದಶಲಕ್ಷಣ ಮಹಾಪರ್ವ

ಸಾಗರ: ಶ್ರೀ ಆದಿನಾಥ ತೀರ್ಥಂಕರ ಸರ್ವತೋಭದ್ರ ಬಸದಿಯಲ್ಲಿ ದಶಲಕ್ಷಣ ಮಹಾಪರ್ವವನ್ನು ಪ್ರತಿವರ್ಷದಂತೆ ಹೊಂಬುಜ ಶ್ರೀ ಜೈನ ಮಠದ ಪ.ಪೂ.ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ, ಆಶೀರ್ವಾದ ಪೂರ್ವಕವಾಗಿ ವೈಭವದಿಂದ ದಿನಾಂಕ 16-09-2026 ರಿಂದ 25-09-2026 ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9:30 ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ದಶಲಕ್ಷಣ ಮಹಾಪರ್ವದ ಪೂಜೆಗಳು ನೆರವೇರಲಿವೆ.

ಹುಬ್ಬಳ್ಳಿಯಲ್ಲಿ ದಶಲಕ್ಷಣ ಕಾರ್ಯಕ್ರಮಗಳು

Article Image

ಹುಬ್ಬಳ್ಳಿಯಲ್ಲಿ ದಶಲಕ್ಷಣ ಕಾರ್ಯಕ್ರಮಗಳು

ಹುಬ್ಬಳ್ಳಿ: ಪ್ರತಿವರ್ಷದಂತೆ ಹುಬ್ಬಳ್ಳಿ ದಿಗಂಬರ ಜೈನ ಸಮಾಜವು ದಶಲಕ್ಷಣ ಮಹಾಪರ್ವವನ್ನು ಸಂಭ್ರಮದಿಂದ ದಿನಾಂಕ 16-09-2026 ರಿಂದ 25-09-2026 ರವರೆಗೆ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಆಚರಿಸಲಿದೆ. ಪ್ರತಿದಿನ ಬೆಳಿಗ್ಗೆ 6.30ರಿಂದ ವಿಶೇಷ ಪಂಚಾಮೃತ ಅಭಿಷೇಕ ನಂತರ ಸಾಮೂಹಿಕ ದಶಲಕ್ಷಣ ಪೂಜಾ ವಿಧಾನ ನಡೆಯುತ್ತದೆ. ಸೆ. 16ರಂದು ಬೆಳಿಗ್ಗೆ ಎನ್. ಆರ್. ಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕರು ಕಾರ್ಯಕ್ರಮ ಉದ್ಘಾಟಿಸುವರು, ವಿವಿಧ ದಿನಗಳಲ್ಲಿ ಸೊಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು, ನವಗ್ರಹ ತೀರ್ಥದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಕೊಲ್ಲಾಪುರ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕರು ಸಾನಿಧ್ಯ ವಹಿಸಿ ಮಂಗಲ ಪ್ರವಚನ ಅನುಗ್ರಹಿಸುವರು. ಅಕ್ಟೋಬರ್ 7 ರಂದು ಕ್ಷಮಾವಳಿಯ ವಿಶೇಷ ಕಾರ್ಯಕ್ರಮವು ಬಾಲಾಚಾರ್ಯ ಶ್ರೀ ಸಿದ್ಧಸೇನ ಮಹಾರಾಜರು ಹಾಗೂ ಹೊಂಬುಜ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕರ ಸಾನಿಧ್ಯದಲ್ಲಿ ನಡೆಯುವುದು. ಅಧ್ಯಕ್ಷರು/ ಪದಾಧಿಕಾರಿಗಳು ದಿಗಂಬರ ಜೈನ ಸಮಾಜ ಹುಬ್ಬಳ್ಳಿ

ರಾಷ್ಟ್ರೀಯ ಚಾಂಪಿಯನ್ ತಂಡವನ್ನು ಪ್ರತಿನಿಧಿಸಿದ ಸಮಕಿತ ಸುಧೀರ ಕುರಕುರೆ

Article Image

ರಾಷ್ಟ್ರೀಯ ಚಾಂಪಿಯನ್ ತಂಡವನ್ನು ಪ್ರತಿನಿಧಿಸಿದ ಸಮಕಿತ ಸುಧೀರ ಕುರಕುರೆ

ಕಾನ್ಪುರದ ಐಐಟಿ ಆವರಣದಲ್ಲಿ ನಡೆದ 55ನೇ ಕೆ.ವಿ.ಎಸ್. ರಾಷ್ಟ್ರೀಯ ಕ್ರೀಡಾಕೂಟ 2026-27ರ ಬಾಲಕರ ಬಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಎಎಸ್‌ಸಿ ಸೆಂಟರ್, ಬೆಂಗಳೂರಿನ XI-B ತರಗತಿಯ ವಿದ್ಯಾರ್ಥಿ ಸಮಕಿತ ಸುಧೀರ ಕುರಕುರೆ ರವರು ಚಾಂಪಿಯನ್ ಪಟ್ಟ ಪಡೆದ ತಂಡದ ಸದಸ್ಯರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕೇಂದ್ರೀಯ ವಿದ್ಯಾಲಯ ಸಂಘಟನೆಯ ರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ತಂಡವು ಚಾಂಪಿಯನ್ ಟ್ರೋಫಿ ಗೆದ್ದು ಕೀರ್ತಿ ತಂದಿದೆ.

ಬೆಳ್ತಂಗಡಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆ

ಬೆಳ್ತಂಗಡಿ: ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ದಶಲಕ್ಷಣಪರ್ವ ಆಚರಣೆಯು ದಿನಾಂಕ 16-09-2026 ರಿಂದ 26-09-2026 ರವರೆಗೆ ನಡೆಯಲಿದೆ ಎಂದು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಏಳು ಗಂಟೆಯಿಂದ ಮೂರು ಬಸದಿಗಳಲ್ಲಿ ಕ್ಷೀರಾಭಿಷೇಕ, ಅಷ್ಟವಿಧಾರ್ಚನೆ ಪೂಜೆ ಬಳಿಕ ದಶಧರ್ಮಗಳ ಸ್ವಾಧ್ಯಾಯ, ಜಪ, ತಪ, ಧ್ಯಾನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿನಾಂಕ: 21-09-2026 ರಂದು ಹೊಂಬುಜ ಶ್ರೀ ಜೈನಮಠದ ಪ.ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರು, ಬೆಳ್ತಂಗಡಿ ಬಸದಿಗೆ ಆಗಮಿಸಲಿದ್ದು ಮಂಗಲ ಪ್ರವಚನ ನೀಡುವರು ಹಾಗೂ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ ಎಂದು ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.

ಪ್ರಾಚೀನ ಜೈನ ಕೇಂದ್ರವಾಗಿ ಕೊಪ್ಪಳ ಕುರಿತು ಸಂಶೋಧನಾ ಪ್ರಬಂಧ ಮಂಡನೆ

Article Image

ಪ್ರಾಚೀನ ಜೈನ ಕೇಂದ್ರವಾಗಿ ಕೊಪ್ಪಳ ಕುರಿತು ಸಂಶೋಧನಾ ಪ್ರಬಂಧ ಮಂಡನೆ

ರಾಯಚೂರು: ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಆಶ್ರಯದಲ್ಲಿ ಹಾಗೂ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯ, ರಾಯಚೂರು ಇವರ ಸಹಯೋಗದಲ್ಲಿ, “ಅವಿಭಜಿತ ರಾಯಚೂರು ಜಿಲ್ಲೆಯ ಜೈನ ಮತ-ಪಂಥದ ಸಾಂಸ್ಕೃತಿಕ ಕೊಡುಗೆಗಳು: ಸಂಶೋಧನಾ ಸಾಧ್ಯತೆ ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ಆಯೋಜಿಸಲಾಗಿತ್ತು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ “ಪ್ರಾಚೀನ ಜೈನ ಕೇಂದ್ರವಾಗಿ ಕೊಪ್ಪಳ” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಜೈನ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ.ರವರು ಮಂಡಿಸಿದರು. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ - www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಿತಿನ್‌ರವರು 1,300 ವರ್ಷಗಳ ಕೊಪ್ಪಳದ ಜೈನ ಇತಿಹಾಸದ ಕುರಿತು ವಿಸ್ತೃತವಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಶ್ರವಣಬೆಳಗೊಳವೂ ಸೇರಿದಂತೆ ಹಲವು ಸ್ಥಳಗಳಲ್ಲಿ ಕಂಡು ಬರುವ ಶಾಸನಗಳಲ್ಲಿ "ಆದಿತೀರ್ಥ" ಹಾಗೂ "ಮಹಾತೀರ್ಥ" ಎಂದು ಕರೆಯಲ್ಪಡುವ ಕೊಪ್ಪಳದ ವಿಶೇಷತೆ, ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದಲ್ಲಿ ಕೊಪ್ಪಳಕ್ಕೂ ಶ್ರವಣಬೆಳಗೊಳಕ್ಕೆ ಸಮನಾದ ವಿಶಿಷ್ಠವಾದ ಸ್ಥಾನವಿದೆ ಎಂಬುದನ್ನು ಶಾಸನಾಧಾರಗಳಿಂದ ನಿರೂಪಿಸಿದರು. ಕರ್ನಾಟಕದಾದ್ಯಂತದಿಂದ ಆಗಮಿಸಿದ್ದ 20 ಸಂಶೋಧಕರು ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಿದರು.

ದಾವಣಗೆರೆ: ದಶಲಕ್ಷಣ ಮಹಾಪರ್ವ

Article Image

ದಾವಣಗೆರೆ: ದಶಲಕ್ಷಣ ಮಹಾಪರ್ವ

ಸಮಸ್ತ ದಿಗಂಬರ ಜೈನ ಸಮಾಜ, ದಾವಣಗೆರೆ ಹಾಗೂ ಶ್ರೀ ಮಹಾವೀರ ಸಂಘ (ರಿ.) ದಾವಣಗೆರೆ ಮತ್ತು ಆದಿನಾಥ ಜೈನ್ ಮಿಲನ್, ದಾವಣಗೆರೆ, ಇವರುಗಳ ಸಂಯುಕ್ತಾಶ್ರಯದಲ್ಲಿ ದಶಲಕ್ಷಣ ಮಹಾಪರ್ವವು ಭಗವಾನ್ 1008 ಶ್ರೀ ಕಲ್ಪದ್ರುಮ ಆದಿನಾಥ ಜಿನಮಂದಿರದಲ್ಲಿ ದಿನಾಂಕ 16-09-2026 ರಿಂದ 26-09-2026 ರವರೆಗೆ ಪ್ರತಿದಿನ ಸಂಜೆ: 6-45 ರಿಂದ 8-00 ರವರೆಗೆ ನಡೆಯಲಿದೆ.

ಜೈನರಲ್ಲಿ ಗೌರಿ ನೊಂಪಿ

Article Image

ಜೈನರಲ್ಲಿ ಗೌರಿ ನೊಂಪಿ

"ಶ್ರೀಯೋ ಜಿನೇಂದ್ರಂ ಚಂದ್ರಸ್ಯ ಚರಣಾಂಭೋರುಹ ಧ್ವಯಂ|ನತ್ವಾ ಗೌರೀ ಕಥಾಂ ವಕ್ಪೈ ಶುಭ ಸೌಭಾಗ್ಯದಾಯಿನಿ/" ಜಂಬೂದ್ವೀಪದಲ್ಲಿ ಅಮರಾವತಿಗೆ ತಿಲಕನಾಗಿದ್ದ ಸಿಂಹಪುರ ಎಂಬ ಪಟ್ಟಣವನ್ನು ಆಳುತ್ತಿದ್ದ ಇಕ್ಷಾಕು ವಂಶದ ವಿಷ್ಣುವರ್ಧನ ಮಹಾರಾಜ ಧರ್ಮ ಕರ್ಮ ಪುಣ್ಯಾಭಿವೃದ್ಧಿಯನ್ನು ಹೆಚ್ಚಿಸುವ ನಂದಾ ಮಹಾದೇವಿ ಇತರೆ ಸ್ತ್ರೀ ರತ್ನಗಳೊಡನೆ ಕೂಡಿ ರಾಜ್ಯವಾಳುತ್ತಿದ್ದ. ಅವನ ಮಗನು ರಾಜ್ಯದ ಭವ್ಯಜನಗಳಿಗೆ ಶ್ರೇಯಸ್ಸನ್ನು ಕೊಡುವ ಶ್ರೇಯಾಂಸ ಜಿನೇಶ್ವರರ ಆರಾಧಿಸಿ ನಮಸ್ಕರಿಸಿ ಅವರ ಯಕ್ಷಿ ಗೌರಿದೇವಿಯ ನೊಂಪಿಯ ವಿಧಾನ ಮಾಡುವ ಬಗೆಯನ್ನು ತಿಳಿಸಲು ಕೇಳಿದಾಗ ನೊಂಪಿಯ ಆಚರಣೆ ಬಗ್ಗೆ ಒಂದು ಕಥೆಯನ್ನು ಹೇಳುತ್ತಾನೆ. ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕಾಂಭೋಜ ಎಂಬ ನಾಡಿನಲ್ಲಿ ಉಜ್ಜೇಯಿನಿ ಎಂಬ ನಗರವನ್ನು ಆಳುತ್ತಿದ್ದ ಶ್ರೇಯೋರಾಜ ಎಂಬ ಅರಸ ಮತ್ತು ಅವನ ಪತ್ನಿ ಶ್ರೇಯೋಮತಿ ಸುಖದಿಂದ ಬಾಳ್ವೆ ನಡಸುತ್ತಿರಬೇಕಾದರೆ ಕುಂಥುನಾಥ ಎಂಬ ಮುನಿಗಳು ಬಂದಾಪುರದ ಉದ್ಯಾನದಲ್ಲಿ ವಿಹಾರ ನಿಮಿತ್ತವಾಗಿ ಬಂದು ತಂಗಿದ್ದರು ಇವರ ಇರುವಿಕೆಯನ್ನು ತಿಳಿದು ಪುರಜನರೊಂದಿಗೆ ಅಲ್ಲಿಗೆ ತೆರಳಿದ ರಾಣಿ ಮುನೀಂದ್ರರಿಗೆ ನಮಸ್ಕರಿಸಿ ಕೈಮುಗಿದು ನಮಗೆ ಯಾವುದಾದರೂ ಒಂದು ನೊಂಪಿಯ ವಿಧಾನದ ಬಗ್ಗೆ ತಿಳಿಸಲು ಕೇಳಿಕೊಂಡಾಗ ಮುನೀಂದ್ರರು ಹನ್ನೊಂದನೇ ತೀರ್ಥಂಕರರಾದ ಶ್ರೇಯಾಂಸನಾಥರ ಯಕ್ಷಿ ಗೌರಿದೇವಿಯ ನೊಂಪಿಯ ವಿಧಾನವನ್ನು ತಿಳಿಸಿದರು. ಭಾದ್ರಪದ ಶುದ್ಧ ತೆದಿಗೆಯಂದು ಶುಚಿರ್ಭೂತರಾಗಿ, ಶುದ್ಧ ವಸ್ತ್ರ ತೊಟ್ಟು, ದಿವ್ಯಾಭರಣಗಳನ್ನು ಧರಿಸಿ ಪೂಜಾದ್ರವ್ಯಗಳ ಸಹಿತವಾಗಿ ಜಿನಾಲಯಕ್ಕೆ ಬಂದು ಈಶ್ವರ ಯಕ್ಷ ಗೌರಿಯಕ್ಷಿದೇವಿ ಸಹಿತವಾಗಿ ಇರುವ ಶ್ರೇಯಾಂಸ ಜಿನೇಶ್ವರರಿಗೆ ಪಂಚಾಮೃತ ಅಭಿಷೇಕ ಮತ್ತು ಅಷ್ಟವಿಧಾರ್ಚನೆಯನ್ನು ಮಾಡಿ ನಂತರ ಶಾಸ್ತ್ರ ಗುರು ಶ್ರುತದೇವಿಯರಿಗೆ ಪೂಜೆಯನ್ನು ಸಲ್ಲಿಸಿ, ಯಕ್ಷಿಯಾದ ಗೌರಿದೇವಿಗೆ ಬಾಗಿನ, ಬೆಲ್ಲದ ಅಚ್ಚು, ಬಾಳೆಹಣ್ಣು, ತೆಂಗಿನಕಾಯಿ ಕಡಲೆ, ಹೊಙಗುನೂಲು, ಕರಿಮಣಿ, ಗಂಧ ಚಂದ್ರ ಚಿಗುಳಿ ತಂಬಿಟ್ಟು, ಅಲ್ಲದೇ ಹದಿನಾರು ಭಕ್ಷ, ಹದಿನಾರು ಅಡಕೆ, ಹದಿನಾರು ಎಲೆ, ಫಲಗಳು, ಅಕ್ಷತೆ, ಪುಷ್ಟ ಸಹಿತವಾಗಿ ಹೊಸಮೊರದಲ್ಲಿ ಇಟ್ಟು ಮೂರು ನೂಲನ್ನು ಸುತ್ತಿ ಗೌರಿದೇವಿಗೆ ಬಾಗಿನ ಅರ್ಪಿಸಬೇಕು. ಹೀಗೆ ಬಾಗಿನ ಅರ್ಪಿಸುವಾಗ ಈ ಮಂತ್ರ ಭಕ್ತಿಯಿಂದ ಶುದ್ಧ ಭಾವನೆಯಿಂದ ಹೇಳಬೇಕು" "ಓಂ ಹ್ರೀಂ ದಾತೃಭಿರಭೀಪ್ಸಿತ ಫಲದೇಭ್ಯಃ ಸ್ವಾಹ". ಎಂದು ಅರ್ಘ್ಯ ಕೊಟ್ಟು ಗೌರಿದೇವಿ ಮತ್ತು ಶ್ರುತದೇವಿಯರನ್ನು ಪೂಜಿಸಬೇಕು. ಬಾಗಿನಗಳಲ್ಲಿ ಗೌರಿದೇವಿ, ಶ್ರುತದೇವಿಯರಿಗೆ ನೀಡಿ ಮೂರು/ಎರಡು/ಒಂದು ಬಾಗಿನವನ್ನಾದರೂ ಮುತ್ತೈದೆಯರಿಗೆ ನೀಡಿ ನಮಸ್ಕಾರ ಮಾಡಬೇಕು. ಆನಂತರ ಕ್ಷೇತ್ರದಲ್ಲಿ ಮುನಿಗಳಿದ್ದರೆ ಅಹಾರ ಧಾನ ಮಾಡಬೇಕು. ಮರುದಿನ ಶ್ರೇಯಾಂಸ ತೀರ್ಥಂಕರರ ಅಭಿಷೇಕ ಪೂಜೆ ಮಾಡಿ, ಅಷ್ಟವಿಧಾರ್ಚನೆ ಮಾಡಿ, ಬ್ರಹ್ಮಯಕ್ಷ, ಈಶ್ವರ ಯಕ್ಷ, ಪದ್ಮಾವತಿ, ಶ್ರುತದೇವಿಯರಿಗೆ ಹಾಗೂ ಗೌರಿದೇವಿಯರಿಗೆ ಅನೇಕ ಫಲಪುಷ್ಪ ನೈವ್ಯೇದ್ಯಗಳಿಂದ ಪೂಜಿಸಬೇಕು. ಆ ದಿನ ಒಂದು ಹೊತ್ತು ಆಹಾರ ಸೇವಿಸಬೇಕು. ಹಾಗೂ ಯಥಾಶಕ್ತಿ ಧಾನ ಮಾಡಬೇಕು. ಅನಂತರ ಯಥಾಶಕ್ತಿ ಅನುಸಾರ ಉದ್ಯಾಪನೆ ಮಾಡಬೇಕು. ಇದರಿಂದಾಗಿ ಮನೆಯಲ್ಲಿ ಮತ್ತು ಮನದಲ್ಲಿ ಎಲ್ಲಾ ರೀತಿಯ ದೋಷ ನಿವಾರಣೆಯಾಗಿ ಸಕಲ ಪಾಪಗಳು ದೂರವಾಗಿ ಕುಟುಂಬ, ಮನೆ, ನಾಡು, ರಾಜ್ಯದಲ್ಲಿ ಸಮೃದ್ಧತೆ ಉಂಟಾಗುತ್ತದೆ. ಎಂದು ಮುನೀಂದ್ರರು ಹೇಳಲು ಅದರಿಂದ ಪ್ರೇರಿತರಾದ ರಾಣಿ ಶ್ರೇಯೋಮತಿ ತಾನು ಕೈಗೊಂಡು ತನ್ನ ರಾಜ್ಯದಲ್ಲಿ ಗೌರಿ ನೊಂಪಿಯ ಮಗನು ಮಾಡಲು ಆಜ್ಞೆಯನ್ನು ನೀಡಲು ಉಜ್ಜಯಿನಿ ತುಂಬಾ ಸಂಭ್ರಮದಿಂದ ಗೌರಿನೊಂಪಿಯನ್ನು ಎಲ್ಲರೂ ಆಚರಿಸಿ ಸಮೃದ್ಧತೆಯನ್ನು ಕಂಡರು. ಹೀಗೆ ಗೌರಿ ನೊಂಪಿಯು ಜೈನರಲ್ಲಿ ಆಚರಣೆಗೆ ಬಂತು.

ದಶಲಕ್ಷಣ ಪರ್ವ ಸಮಾರಂಭ

Article Image

ದಶಲಕ್ಷಣ ಪರ್ವ ಸಮಾರಂಭ

ಕಾರ್ಕಳ/ಹಿರಿಯಂಗಡಿ: ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದ ಜಿನಮಂದಿರದ ಪ್ರಾಂಗಣದಲ್ಲಿ ದಶಲಕ್ಷಣ ಪರ್ವ ಸಮಾರಂಭವು ಪರಮಪೂಜ್ಯ ಏಲಾಚಾರ್ಯ ೧೦೮ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಮತ್ತು ಪರಮಪೂಜ್ಯ ೧೦೮ ಶ್ರೀ ಮಹಿಮಾಸಾಗರ ಮುನಿಮಹಾರಾಜರ ಆಶೀರ್ವಾದಪೂರ್ವಕ ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯ ಮಂಗಲ ಪ್ರವಚನದೊಂದಿಗೆ ದಿನಾಂಕ 16-09-2026ನೇ ಬುಧವಾರದಿಂದ 25-09-2026ನೇ ಶುಕ್ರವಾರದ ಪರ್ಯಂತ ಪ್ರತಿನಿತ್ಯ ಸಂಜೆ ಗಂಟೆ 6-00ರಿಂದ ಪೂಜೆ, ಭಜನೆ ವಿದ್ವಾಂಸರ ಹಾಗೂ ವಿದ್ಯಾರ್ಥಿಗಳ ಉಪನ್ಯಾಸ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ದಶಲಕ್ಷಣ ಪರ್ವ ಮತ್ತು ಬೃಹತ್ ಋಷಿಮಂಡಲ ಮಹಾ ಆರಾಧನೆ

Article Image

ದಶಲಕ್ಷಣ ಪರ್ವ ಮತ್ತು ಬೃಹತ್ ಋಷಿಮಂಡಲ ಮಹಾ ಆರಾಧನೆ

ಬೆಂಗಳೂರು: ದಶಲಕ್ಷಣ ಮಹಾಪರ್ವ ಆಚರಣೆಯು ಆಚಾರ್ಯ ಶ್ರೀ ೧೦೮ ಅನೇಕಾಂತ ಸಾಗರ ಮುನಿ ಮಹಾರಾಜರು ಹಾಗೂ ಚತುರ್ವಿಧ ಸಂಘದ ಪರಮ ಪಾವನ ಸಾನ್ನಿಧ್ಯದಲ್ಲಿ ದಿನಾಂಕ 16-09-2026 ಬುಧವಾರದಿಂದ 26-09-2026 ಶನಿವಾರದವರೆಗೆ ನಡೆಯಲಿದೆ. ಬೃಹತ್ ಋಷಿಮಂಡಲ ಮಹಾ ಆರಾಧನೆಯು ದಿನಾಂಕ 16-09-2026 ಬುಧವಾರದಿಂದ 23-09-2026 ಬುಧವಾರದ ವರೆಗೆ ಜರಗಲಿದೆ. ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮುನಿಮಹಾರಾಜರ 71ನೇ ಪುಣ್ಯತಿಥಿ ಕಾರ್ಯಕ್ರಮವು ದಿನಾಂಕ 20-09-2026 ಭಾನುವಾರದಂದು ನಡೆಯಲಿದೆ. ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹುಕ್ಕೇರಿ: Tr. ಸುಭಾಷಬಾಬು ಬಸ್ತವಾಡ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Article Image

ಹುಕ್ಕೇರಿ: Tr. ಸುಭಾಷಬಾಬು ಬಸ್ತವಾಡ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಗಾಂಧಿನಗರ ಶಾಲೆ ಹುಕ್ಕೇರಿಯ ಕನ್ನಡ ಶಿಕ್ಷಕರಾದ Tr. ಸುಭಾಷಬಾಬು ಬಸ್ತವಾಡ ಅವರ ಶಿಕ್ಷಣ ಕ್ಷೇತ್ರದಲ್ಲಿ 27 ವರ್ಷಗಳ ಸುದೀರ್ಘ ಸೇವೆ, ತಮ್ಮ ಅವಿರತ ಶ್ರಮ, ನಿಸ್ವಾರ್ಥ ಸೇವೆಯನ್ನು ಗುರುತಿಸಿ ಚಿಕ್ಕೊಡಿಯ ವಾರಿ ನಾಗಲಿಂಗೇಶ್ವರ ಕಲ್ಯಾಣ ಮಂಟಪದ ಭವ್ಯ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾದ ಗಣೇಶ್ ಹುಕ್ಕೇರಿರವರು ಗಣ್ಯಾತೀಗಣ್ಯರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸ್ಮರಣಿಕೆ, ಪ್ರಶಸ್ತಿ ಶಾಲು, ಹಾರ ಹಾಕಿ ಗೌರವಿಸಿದರು.

ಶೋಡಶಕಾರಣ ಮಹಾಪರ್ವ

Article Image

ಶೋಡಶಕಾರಣ ಮಹಾಪರ್ವ

ಸೋಂದಾ: ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ ಜೈನ ಶೋಡಶಕಾರಣ ಮಹಾಪರ್ವ (ಹದಿನಾರು ದಿನಗಳ ಪವಿತ್ರ ಪರ್ವ)ವು ಪ.ಪೂ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಸೆ. 12 ರಿಂದ 27 ರವರೆಗೆ ಜರುಗಲಿದೆ.

ರಾಜ್ಯ ಉಚ್ಛನ್ಯಾಯಾಲಯದ ಮಹಿಳಾ ನ್ಯಾಯಮೂರ್ತಿಯಾಗಿ ಉಷಾರಾಣಿಯವರು ನೇಮಕ

Article Image

ರಾಜ್ಯ ಉಚ್ಛನ್ಯಾಯಾಲಯದ ಮಹಿಳಾ ನ್ಯಾಯಮೂರ್ತಿಯಾಗಿ ಉಷಾರಾಣಿಯವರು ನೇಮಕ

ಮೈಸೂರಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾರಾಣಿ ಇವರನ್ನು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಇವರು ಉಚ್ಛನ್ಯಾಯಾಲಯದ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ. ಮೂಲತಃ ಬೆಳ್ತಂಗಡಿ ತಾಲೂಕಿನವರಾದ ಇವರು ಹಿರಿಯ ವಕೀಲರು ಹಾಗೂ ಸಮಾಜಸೇವಾಕರ್ತರಾಗಿ ಚಿರಪರಿಚಿತರಾಗಿದ್ದ ದಿವಂಗತ ನೇಮಿರಾಜ ಶೆಟ್ಟಿರವರ ಪುತ್ರಿ.

ವೇಣೂರಿನಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ

Article Image

ವೇಣೂರಿನಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ

ಇತಿಹಾಸ ಪ್ರಸಿದ್ಧ ವೇಣೂರು ಭಗವಾನ್ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವತಿಯಿಂದ ದಶಲಕ್ಷಣ ಮಹಾಪರ್ವ ಆಚರಣೆಯು ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ 'ಪದ್ಮವಿಭೂಷಣ' ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ತಾ. 16-09-2026ನೇ ಬುಧವಾರದಿಂದ ತಾ. 25-09-2026ನೇ ಶುಕ್ರವಾರದವರೆಗೆ ಪ್ರತಿದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ಜರಗಿಸಲಾಗುವುದು. ಪ್ರತೀ ದಿನ ಅಪರಾಹ್ನ ಗಂಟೆ 4-30ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ, ಬಳಿಕ ಉಪಹಾರ ಜರಗಲಿದೆ.

ಮಂಗಳೂರು: ಆಗಸ್ಟ್ ತಿಂಗಳ ಮಾಸಿಕ ಸಭೆಯ ವರದಿ

Article Image

ಮಂಗಳೂರು: ಆಗಸ್ಟ್ ತಿಂಗಳ ಮಾಸಿಕ ಸಭೆಯ ವರದಿ

ಭಾರತೀಯ ಜೈನ್ ಮಿಲನ್ ಮಂಗಳೂರು ವತಿಯಿಂದ ಆಗಸ್ಟ್ ತಿಂಗಳ ಮಾಸಿಕ ಸಭೆಯನ್ನು "ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ" ಕಾರ್ಯಕ್ರಮದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಕುಮಾರ್ ಜೈನ್, ಅಧ್ಯಕ್ಷರು, ಭಾರತೀಯ ಜೈನ್ ಮಿಲನ್ ಮಂಗಳೂರು, ಇವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಮಂತ್ ಕುಮಾರ್ ಜೈನ್, ಅಧ್ಯಕ್ಷರು, ಎಕ್ಸೆಲ್ ಸಮೂಹ ಸಂಸ್ಥೆ, ಗುರುವಾಯನಕೆರೆ, ಹಾಗೂ ಅತಿಥಿಗಳಾಗಿ ಶೋಭಾಕರ್ ಬಳ್ಳಾಲ್, ರತ್ನಾಕರ್ ಜೈನ್, ಮಾಲಿನಿ ವಿದ್ಯಾಧರ್ ರವರುಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ 19 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ 3 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲಾಯಿತು. ನಂತರ ಹುಟ್ಟುಹಬ್ಬ ಹಾಗೂ ವೈವಾಹಿಕ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅದೃಷ್ಟಶಾಲಿ ಸದಸ್ಯ, ಅದೃಷ್ಟಶಾಲಿ ಸದಸ್ಯೆ, ಅದೃಷ್ಟಶಾಲಿ ಯುವ ಸದಸ್ಯ ಹಾಗೂ ಅದೃಷ್ಟಶಾಲಿ ದಂಪತಿ ಆಯ್ಕೆ ಮಾಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಜಿತೇಶ್ ಜೈನ್, ACE, ಬಿಲ್ಡರ್ಸ್, ಮಂಗಳೂರು ಇವರು ವಹಿಸಿಕೊಂಡಿದ್ದರು. ವೃಷಭರಾಜ್ ಜೈನ್ ರವರು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಿಂದು ಬಳ್ಳಾಲ್, ರವರು ನಿರ್ವಹಿಸಿದರು. ಸಿದ್ಧಾರ್ಥ್ ಅಜ್ರಿ ಅವರು ಧನ್ಯವಾದ ಸಮರ್ಪಿಸಿದರು. ಕೊನೆಯದಾಗಿ ಯಶೋಧರ್ P K ಅವರು ಶಾಂತಿಮಂತ್ರವನ್ನು ಹೇಳಿ ಕಾರ್ಯಕ್ರಮವನ್ನು ಸಮಪಾನಗೊಳಿಸಲಾಯಿತು.

First Previous

Showing 1 of 24 pages

Next Last