ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ
Published Date: 03-Aug-2026
ದಿನಾಂಕ 02.08.2026ರಂದು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ' ಅತ್ಯಂತ ಯಶಸ್ವಿಯಾಗಿ ಎಸ್.ಡಿ.ಎಂ.ಲಾ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿ ವಹಿಸಿದ್ದರು. ಪ್ರಸನ್ನ ವಿನಯ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸುಮಾರು 65ಕ್ಕೂ ಮಿಕ್ಕಿ ಖಾದ್ಯಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು.