Article Image

ಆಕರ್ಷಣಿ ಶೈಲೆಂದ್ರ ಕುಮಾರ್

Article Image

ಆಕರ್ಷಣಿ ಶೈಲೆಂದ್ರ ಕುಮಾರ್

ಅಜ್ಜಿಬೆಟ್ಟು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿರುವ ಆಕರ್ಷಣಿ ಶೈಲೆಂದ್ರ ಕುಮಾರ್ ಇವರು ಬಂಟ್ವಾಳ ತಾಲೂಕು ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವವು ಪರಮಪೂಜ್ಯ ಯುಗಳ ಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನಿಧ್ಯ-ಶುಭಾಶೀರ್ವಾದಗಳೊಂದಿಗೆ, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ʼರಾಜರ್ಷಿʼ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿದೆ.

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

Article Image

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

ಪಾವಗಡ: ಜೈನ ಧರ್ಮ ವಿಶ್ವಧರ್ಮವಾಗಿದೆ. ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಜೈನಪೀಠಗಳಿವೆ. ಇದೊಂದು ಶ್ರೇಷ್ಠ ಅಹಿಂಸಾ ಧರ್ಮವಾಗಿದೆ. ಹಿಂದಿನ ಜನಸಂಖ್ಯೆಗಿಂತ ಈಗ ಜೈನ ಧರ್ಮೀಯರ ಜನಸಂಖ್ಯೆ ಕ್ಷೀಣಿಸುತ್ತಿದೆ. ಧರ್ಮದ ಕಾಲಂನಲ್ಲಿ ಜೈನ ಎಂದು ಬರೆಯುವಂತೆ ಜೈನ ಸಮಾಜದ ಹಿರಿಯ ಮುಖಂಡ ಬ್ರಹ್ಮದೇವಯ್ಯ ಮನವಿ ಮಾಡಿದರು. ತಾಲ್ಲೂಕಿನ ನಿಡಗಲ್ ಬೆಟ್ಟದಲ್ಲಿ ಶ್ರೀಕೃಷ್ಣಹರಣ ಪಾರ್ಶ್ವನಾಥ ತೀರ್ಥಂಕರರ ಜನುಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಶಳ್ಳಕ್ಕಿರೆ ದಿಗಂಬರ ಜೈನ ಸಮಾಜದ ಅಧ್ಯಕ್ಷ, ಉದ್ಯಮಿ ಹಂಬಣ್ಣನವರು ಕಾರ್ಯಕ್ರಮ ಉದ್ಘಾಟಿಸಿದರು. ನಿಡಗಲ್ ಕಷ್ಟ ಹರಣ ಪಾರ್ಶ್ವನಾಥ ಜನುಮ ದಿನದ ಸಮಿತಿ ಅಧ್ಯಕ್ಷ ಪಿ.ಸುಂದರ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಆರ್. ಬಿ. ಜಯಣ್ಣ, ಗೌರಿಪುರ ಪಾರ್ಶ್ವನಾಥ್ ಕುಜ ನಾಗಭೂಷಣ್, ಟ್ರಸ್ಟಿ ಆರ್. ಎಸ್ ಕುಬೇರಪ್ಪ, ಭರತ್, ರಾಜು, ಪ್ರದೀಪ್, ಜೈನ್, ಶೈನ್ ಜೈನ್, ತುಮಕೂರು ಜೈನ ಸಮಾಜದ ನಿರ್ದೇಶಕರಾದ ಬ್ರಹ್ಮ ಪ್ರಕಾಶ್, ಮಂಡಿ ನಾಗರಾಜ್, ಸುನಿಲ್ ಅಮರಾಪುರ ಸೇರಿದಂತೆ ಜೈನ ಮಹಿಳಾ ಮಂಡಳಿಗಳು ಭಾಗವಹಿಸಿದ್ದವು. ನಂತರ ದ್ರವ್ಯ ಅಭಿಷೇಕ ಹರಾಜುಗಳ ಪ್ರಕ್ರಿಯೆ ನಡೆಯಿತು.

ಅರ್ಜಿ ಆಹ್ವಾನ

Article Image

ಅರ್ಜಿ ಆಹ್ವಾನ

ರಾಜಸ್ಥಾನ ಸಾಂಗನೇರದಲ್ಲಿರುವ ಶ್ರಮಣ ಸಂಸ್ಕೃತಿ ಸಂಸ್ಥಾನದಲ್ಲಿ ಸಂತ ಶಿರೋಮಣಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರ ಆಶೀರ್ವಾದ ಮತ್ತು ಮುನಿಪುಂಗವ 108 ಶ್ರೀ ಸುಧಾಸಾಗರ ಮಹಾರಾಜರ ಪ್ರೇರಣೆಯಿಂದ ನಡೆಯುತ್ತಿರುವ ದ್ವಾದಶ ವರ್ಷಿಯ ಕೋರ್ಸ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಉತ್ತಮ ಪಂಡಿತರಿಂದ ಗ್ರಂಥ ಸ್ವಾಧ್ಯಾಯ ಮತ್ತು ಪ್ರತಿ ವರ್ಷ ಪರೀಕ್ಷೆ ಬರೆಯ ಬೇಕಾಗುತ್ತದೆ. ಇಲ್ಲಿಯವರೆಗೂ ಹಿಂದಿಯಲ್ಲಿ ನಡೆಯುತ್ತಿದ್ದು, ಪ್ರಥಮ ಬಾರಿಗೆ ಮೈಸೂರಿನಲ್ಲಿ ಪಠ್ಯಕ್ರಮವನ್ನು ಕನ್ನಡಕ್ಕೆ ಅನುವಾದಿಸಿ, ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಎಲ್ಲರಿಗೂ ಈ ಪರೀಕ್ಷೆ ಬರೆಯುವ ಅವಕಾಶವಿದ್ದು, ಪರೀಕ್ಷೆಯನ್ನು ಬರೆಯಲು ಯಾವುದೇ ವ್ಯಾಸಂಗದ ಅರ್ಹತೆ ಮತ್ತು ವಯಸ್ಸಿನ ಮಿತಿ ಇರುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-01-2024 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಪ್ನ ಲಕ್ಷ್ಮೀಶ್ ಮೈಸೂರು: 9448254546 / 8660747004

ಡಾ. ಅಜಿತ ಮುರುಗುಂಡೆ

Article Image

ಡಾ. ಅಜಿತ ಮುರುಗುಂಡೆ

ಡಾ. ಅಜಿತ ಮುರುಗುಂಡೆ ಅವರ ಕೃತಿ ಕೆ. ಸಾ. ಪ. ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ. ಕನ್ನಡ ಸಾಹಿತ್ಯ ಪರಿಷತ್ತು ೨೦೨೦ ಎರಡನೇ ಸಾಲಿನ ವಿವಿಧ ದತ್ತಿ ಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಡಾ. ಅಜಿತ ಮುರಗುಂಡೆ ಇವರು ಬರೆದ ‘ರತ್ನಾಕರ ವರ್ಣಿಯ ಹಾಡುಗಳು, ಸಾಹಿತ್ಯ ಮತ್ತು ತಾತ್ವಿಕತೆ’ ಈ ಕೃತಿ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಸ್ತುತ ಇವರು ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

First Previous

Showing 23 of 23 pages

Next Last