Article Image

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Article Image

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಾಹುಬಲಿ ಅರ್ಥ್ ಮೂವರ್ಸ್ ಮಾಲಕ ಅಶೋಕ್ ಎಚ್. ಎಂ., ಕಾರ್ಯದರ್ಶಿಯಾಗಿ ವಕೀಲ ವಿಖ್ಯಾತ್ ಜೈನ್ ಆಯ್ಕೆಯಾಗಿದ್ದಾರೆ. ಎ. 7ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅರ್ಥ್ ಮೂವರ್ಸ್ ಯೂನಿಯಾನ್ ಕಾರ್ಯದರ್ಶಿಯಾಗಿರುವ ಅಶೋಕ್ ಅವರು ಈ ಹಿಂದೆ ಜೈನ್ ಮಿಲನ್ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ವಿಖ್ಯಾತ್ ಅವರು ಜೈನ್ ಯುವ ಬ್ರಿಗೇಡ್ ಸಂಚಾಲಕರಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮತ್ ಕುಮಾರ್ ಬಂಗ ಹಾಗೂ ಖಜಾಂಚಿಯಾಗಿ ಸುರೇಶ್ ಇಂದ್ರ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜೈನ ಜೀರ್ಣೋದ್ದಾರ ಸಂಘದ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಕಾರ್ಯದರ್ಶಿ ಎಂ. ಕೆ. ವಿಜಯ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಜಿತೋ ಸಂಸ್ಥೆ ವತಿಯಿಂದ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಉಚಿತ ತರಬೇತಿ

Article Image

ಜಿತೋ ಸಂಸ್ಥೆ ವತಿಯಿಂದ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಉಚಿತ ತರಬೇತಿ

ಬೆಳಗಾವಿ, ಏ.6: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ್ ಜಿತೋ ಸಂಸ್ಥೆಯ ವತಿಯಿಂದ ಕಳೆದ 11 ವರ್ಷಗಳಿಂದ ಜೈನ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನ್ನು ನೀಡುತ್ತ ಬಂದಿದೆ. ಈ ವರ್ಷವೂ ಸಹ ಜಿತೋ ಸಂಸ್ಥೆಯ ವತಿಯಿಂದ ಯುಪಿಎಸ್‌ಸಿ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನ್ನು ನೀಡಲಿದೆ. ವಿದ್ಯಾರ್ಥಿಗಳು ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಹೆಸರು ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹೆಸರು ನೋಂದಣಿ ಮಾಡುವ ಕೊನೆಯ ದಿನಾಂಕ 24-04-2024 ಆಗಿದ್ದು, ಈ ಅವಧಿಯೊಳಗೆ ಹೆಸರು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕುಂತಿನಾಥ ಕಲಮನಿ ಮೊ: 94804-48108 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

Article Image

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿ ಭಗವಾನ್ ೧೦೦೮ ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ 09-04-2024ನೇ ಮಂಗಳವಾರ ಮೊದಲ್ಗೊಂಡು 15-04-2024ನೇ ಸೋಮವಾರ ಪರ್ಯಂತ ನಡೆಯಲಿದೆ. 14-04-2024ನೇ ಭಾನುವಾರ ಮಹಾರಥಯಾತ್ರಾ ಮಹೋತ್ಸವ ಜರಗಲಿರುವುದು.

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ ಪ್ರಬಂಧ ಸ್ಪರ್ಧೆ

Article Image

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ 'ಪ್ರಾತಃಸ್ಮರಣೀಯ ಪ.ಪೂ. ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು, ಭ. ಮಹಾವೀರ ಸ್ವಾಮಿಯವರ ಅಹಿಂಸಾ ಪರಮೋ ಧರ್ಮ ಸಂದೇಶವನ್ನು ಜಗತ್ತಿಗೆ ಪಂಚಮಕಾಲದಲ್ಲಿ ಪರಿಚಯಿಸಿದ ಮಹಾಸಂತರು' ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ವಂತ ಕೈ ಬರಹದಲ್ಲಿ ಬರೆದ ಪ್ರಬಂಧ 2 ಪುಟ ಮೀರದಂತಿರಬೇಕು. ಪ್ರಬಂಧವನ್ನು ದಿನಾಂಕ 10-04-2024ರ ಒಳಗಾಗಿ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವೈ.ಡಿ. ರತ್ನಾಕರ್ : ದೂ. 9886589725, 7892159744 ಇವರನ್ನು ಸಂಪರ್ಕಿಸಬಹುದು.

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

Article Image

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಬಜಿರೆ ಗ್ರಾಮದ ಸುರಭಿ ಮನೆ ನಿವಾಸಿ, ಬಿ. ರತ್ನವರ್ಮ ಇಂದ್ರರ ಧರ್ಮಪತ್ನಿ ಶ್ರೀಮತಿ ವಸಂತಿ (76ವ) ಇವರು ಇಂದು (ಎ.1) ನಿಧನ ಹೊಂದಿದರು. ಇವರು ಮಕ್ಕಳಾದ ಪ್ರಮೋದ್ ಕುಮಾರ್, ಶುಭ, ಮತ್ತು ಪೂರ್ಣಿಮಾ, ಸವಿತ, ಸುಧೀರ್ ಕುಮಾರ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

Article Image

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ ಮತ್ತು ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಎ. 1 ರಂದು ಪ್ರಾರಂಭಗೊಂಡು ಎ.3ರ ತನಕ ನೆರವೇರಲಿರುವುದು.

ಉಜಿರೆ : “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

Article Image

ಉಜಿರೆ : “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ 8ನೇ ತರಗತಿ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಛಿಸುವ ಬಡ, ಹಿಂದುಳಿದ ಹಾಗೂ ಕೃಷಿಕ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ನಮ್ಮ ಆಯ್ಕೆ ಪರೀಕ್ಷೆಗೆ ಹಾಜರಾಗಿ ಮೂರು ದಿನ ರತ್ನಮಾನಸದಲ್ಲಿ ಉಳಿದು ಇಲ್ಲಿನ ಪರಿಸರ ಹಾಗೂ ಶಿಸ್ತಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಹೈಸ್ಕೂಲ್ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ ಅಂಗವಾಗಿ ಕೃಷಿ, ಹೈನುಗಾರಿಕೆ, ಸಮಾಜಸೇವೆ ಮುಂತಾದ ವೃತ್ತಿಪರ ಹಾಗೂ ಸ್ವ-ಉದ್ಯೋಗ ತರಬೇತಿಯನ್ನು ನೀಡಲಾಗುವುದು. ಇಲ್ಲಿನ ಜೀವನ ಶಿಕ್ಷಣ ಕ್ರಮದ ಮಾಹಿತಿಯನ್ನು ಪಡೆದ ಬಳಿಕ ಅಭ್ಯರ್ಥಿಗೆ ಒಪ್ಪಿಗೆಯಾದಲ್ಲಿ 8ನೇ ತರಗತಿಯ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಛಿಸುವ ಅರ್ಹ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ದಿನಾಂಕ 05-04-2024ರಿಂದ ಅರ್ಜಿಗಳನ್ನು ನೀಡಲಾಗುವುದು ಮತ್ತು 25-04-2024ರಂದು ಅರ್ಜಿ ನೀಡಲು ಕೊನೆಯ ದಿನಾಂಕವಾಗಿರುತ್ತದೆ. ವಿ.ಸೂ. : ಆಂಗ್ಲಮಾಧ್ಯಮ, 9ನೇ ಮತ್ತು 10ನೇ ತರಗತಿ ದಾಖಲಾತಿಗೆ ಅವಕಾಶವಿರುವುದಿಲ್ಲ. ಹಾಗೂ ಹುಡುಗಿಯರಿಗೆ ದಾಖಲಾತಿ ಇರುವುದಿಲ್ಲ. ಅರ್ಜಿಯನ್ನು ರತ್ನಮಾನಸ ವಸತಿ ನಿಲಯದಲ್ಲಿಯೇ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 08023901791, 9480351201, 9449244425, 9901546846

ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವಾರ್ಷಿಕ ರಥಯಾತ್ರಾ ಮಹೋತ್ಸವ

ನರಸಿಂಹರಾಜಪುರ, ಶ್ರೀಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮಾ.31ರಂದು ಪ್ರಾರಂಭಗೊಂಡು ಎ. 4ರವರೆಗೆ ಜರಗಲಿದೆ.

ಹೊಂಬುಜ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ಹೊಂಬುಜ: ವಾರ್ಷಿಕ ರಥಯಾತ್ರಾ ಮಹೋತ್ಸವ

ಶ್ರೀ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ. ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದಿನಿಂದ (ಮಾ. 29) ಮೊದಲ್ಗೊಂಡು ಏ.3ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು.

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ, ಮಂಡ್ಯ ಶ್ರೀ ಕ್ಷೇತ್ರ ಆರತಿಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯೊಂದಿಗೆ ಮಾ.28ರಿಂದ ಮೊದಲ್ಗೊಂಡು ಮಾ.30ರವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು.

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಸಂತೆ ಆಯೋಜನೆ

Article Image

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಸಂತೆ ಆಯೋಜನೆ

ಬೆಂಗಳೂರಿನ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಜಯನಗರದಲ್ಲಿ ಮಾ.31 ರಂದು ಸಂತೆ ಆಯೋಜನೆ ಮಾಡಲಾಗಿದೆ. ಈ ಸಂತೆಯಲ್ಲಿ ಕರಕುಶಲ ವಸ್ತುಗಳು, ರುಚಿಕರವಾದ ತಿಂಡಿ ತಿನಿಸುಗಳು (ಜೈನ ತಿಂಡಿ ತಿನಿಸುಗಳು), ವಿವಿಧ ವಸ್ತುಗಳು, ಸೀರೆಗಳು, ಇತರ ಯಾವದಾದರೂ ವಸ್ತುಗಳನ್ನು ಮಾರಾಟ ಮಾಡಲು ಮಳಿಗೆಯನ್ನು ಹಾಕಬಹುದು. ಒಂದು ಮಳಿಗೆಗೆ 200 ರೂಪಾಯಿ ಆಗಿರುತ್ತದೆ. ನೊಂದಾಯಿಸಲು ಕೊನೆಯ ದಿನಾಂಕ 29-03-2024. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9008817766, 9980875624

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Article Image

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ತೇರದಾಳ ಶ್ರೀ ವಾಸುಪೂಜ್ಯ ವೀತರಾಗ ದಿಗಂಬರ ಜೈನ ಮಂದಿರದ ವತಿಯಿಂದ ಭಗವಾನ ಶ್ರೀ 1008 ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ಪ.ಪೂ. ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಜೀವನ, ತಪ, ತ್ಯಾಗ ಮತ್ತು ಪ್ರೇರಣಾ ಕಾರ್ಯಗಳು ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಒಳಗೊಂಡಿರುತ್ತದೆ. ಸೂಚನೆಗಳು:- * ಪ್ರಬಂಧವನ್ನು A4 ಸೀಟ್‌ನಲ್ಲಿ ಒಂದೇ ಮಗ್ಗುಲಿನಲ್ಲಿ ಬರೆಯಬೇಕು. 10 ಪುಟ ಮೀರದಂತೆ ಇರಬೇಕು. * ಶುದ್ಧ ಕೈ ಬರಹ ಅಥವಾ ಟೈಪ್ ಮಾಡಬಹುದು. * ಪ್ರಬಂಧ ಬರೆಯಲು ವಯಸ್ಸಿನ ಮಿತಿ ಇಲ್ಲ. * ಪ್ರಬಂಧ ಬರೆಯುವವರ ಹೆಸರು, ವಿಳಾಸ, ವಾಟ್ಸ್ಆಪ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. * ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು. * ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. * ಪ್ರಬಂಧ ಕಳುಹಿಸುವ ಕೊನೆಯ ದಿನಾಂಕ 16-04-2024 * ಪ್ರಬಂಧ ಕಳುಹಿಸುವ ವಿಳಾಸ- ಸಂತೋಷ ಶೆಟ್ಟಿ, ಗುರುಕುಲ ರೋಡ್, ಟೀಚರ್ ಕಾಲೋನಿ, A/Po ತೇರದಾಳ, 587315 ತಾ: ರಬಕವಿ-ಬನಹಟ್ಟಿ ಜಿ: ಬಾಗಲಕೋಟ * ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 9164896108, 7019326565, 8951742543 * ಪ್ರಬಂಧದಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ನೀಡಲಾಗುವುದು.

ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರಾಗಿ ಪದೋನ್ನತಿ

Article Image

ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರಾಗಿ ಪದೋನ್ನತಿ

ಮೂಡುಬಿದಿರೆಯ 52 ವರ್ಷಗಳ ಇತಿಹಾಸವನ್ನು ಹೊಂದಿರುವ ಜೈನ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಪ್ರಭಾತ್ ಬಲ್ನಾಡು ಪೇಟೆಯವರು ಪದೋನ್ನತಿ ಹೊಂದಿದ್ದಾರೆ. 1999ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಇವರು ಕಳೆದ 22 ವರ್ಷಗಳಿಂದ ಜೈನ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಆಕಾಶವಾಣಿ ಹಾಗೂ ಟಿವಿ ಮಾಧ್ಯಮಗಳ ಸಂಪನ್ಮೂಲ ವ್ಯಕ್ತಿಯಾಗಿ, ಇತಿಹಾಸ ಸಂಶೋಧಕರಾಗಿ, ಲೇಖಕರಾಗಿ, ಜೆಸಿಐ ತರಬೇತುದಾರರಾಗಿ, ಅಧ್ಯಕ್ಷರಾಗಿ ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಇವರು ಹಿರಿಯ ಯಕ್ಷಗಾನ ಸಂಘಟಕ ಮರ್ಕಂಜದ ಯುವರಾಜ ಜೈನ್ ಮತ್ತು ಪ್ರಸನ್ನ ದಂಪತಿಗಳ ಪುತ್ರ.

ಹಾಸನ: ಡಾ. ಎಸ್. ಎ. ನಿತಿನ್ ನೇಮಕ

Article Image

ಹಾಸನ: ಡಾ. ಎಸ್. ಎ. ನಿತಿನ್ ನೇಮಕ

ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರನ್ನಾಗಿ ಡಾ.ಎಸ್.ಎ ನಿತಿನ್ ಅವರನ್ನು ನೇಮಕ ಮಾಡಲಾಗಿದೆ. ಇವರು ಪ್ರಸ್ತುತ ನಗರದ ರಾಜೀವ್ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

Article Image

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಇತ್ತೀಚೆಗೆ ಸಂಪನ್ನಗೊಂಡಿದ್ದು, ಇದೀಗ ಮಾ. 25ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ದಿನವಾಗಿದ್ದು, ಆ ಪ್ರಯುಕ್ತ ನಾಳೆ (ಮಾ. 25)ರಂದು ಸಾಯಂಕಾಲ ಗಂಟೆ 6.00ರಿಂದ ಭ|| ಶ್ರೀ ಬಾಹುಬಲಿ ಸ್ವಾಮಿಗೆ ೫೪ ಕಲಶಗಳಿಂದ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆಯು ನೆರವೇರಲಿದೆ ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

Article Image

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

ದ.ಕ.ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೆಲ್ಲಪುತ್ತಿಗೆ- ದರೆಗುಡ್ಡೆ ಗ್ರಾಮದ ಭಗವಾನ್ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ ಮತ್ತು ಅಷ್ಟಮ ನಂದೀಶ್ವರದ ಐವತ್ತೆರಡು ನೂತನ ಜಿನ ಬಿಂಬಗಳಿಗೆ ಮಹಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆಶೀರ್ವಚನದೊಂದಿಗೆ ಮಾ.24 ರಂದು ನೆರವೇರಲಿರುವುದು.

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

Article Image

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

ಮೂಡಿಗೆರೆ, ಮಾ. 22: ಹೊಯ್ಸಳ ಸಾಮ್ರಾಜ್ಯದ ನಾಡದ ಹಂತೂರು ವೈಭವದಿಂದ ಮೆರೆದ ನಾಡಾಗಿತ್ತು, ಶಿಲ್ಪಕಲೆಗೆ ಹೆಸರಾಗಿತ್ತು, ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಸಮೀಪದ ಅಂಗಡಿ ಗ್ರಾಮವೇ ಆಗಿತ್ತು, ಅಹಿಂಸಾ ವೈಭವದಿಂದ ಮೆರೆದ ನಾಡು, ಕಾಲಚಕ್ರಕ್ಕೆ ಸಿಲುಕಿ ಅವನತಿಯಾಯಿತು, ಸರ್ವಧರ್ಮ ಜನರ ಸಹಕಾರ, ಧಾರ್ಮಿಕ ಮನೋಭಾವ, ಶಾಂತಿ ಅಹಿಂಸೆ ಫಲವಾಗಿ ಇಂದು ಶಿಲ್ಪಕಲಾ ಬಸದಿಯ ಪುನರ್ ನಿರ್ಮಾಣದಿಂದ ಈ ಹಿಂದಿನ ಗತವೈಭವ ಮರುಕಳಿಸಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೇಳಿದರು. ಅವರಿಂದು ಹಂತೂರಿನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಧಾಮಸಂಪ್ರೋಕ್ಷಣಾಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಲ್ಲಿನ ಜನ, ಧರ್ಮ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ತಪ್ಪು ಒಪ್ಪುಗಳಿಗೆ ಜಟ್ಟಿಂಗರಾಯನ ಆಶ್ರಯಿಸುತ್ತಾರೆ. ಇಂತಹ ಧರ್ಮಭೂಮಿಯಲ್ಲಿ ಬಿಟ್ಟಿದೇವ, ಶಾಂತಲೆ, ಹರಿಯಲೇ, ಶಿಲ್ಪಕಲಾ ಬಸದಿ ಕಟ್ಟಿಸಿದರು, ಈ ಬಸದಿ ಸಂರಕ್ಷಣೆಯಲ್ಲಿ ಸ್ಥಳೀಯ ಗ್ರಾಮಸ್ಥರ ಕೊಡುಗೆ ಅಪಾರ. ಸ್ಥಳೀಯ ಜನರು ಹಾಗೂ ಕಳಸ ಭಾಗದ 8 ಸೀಮೆಯ ಜನರ ಸಹಕಾರದಿಂದ ಈ ಬಸದಿ ಜೀರ್ಣೋದ್ಧಾರಗೊಂಡಿದೆ ಎಂದರು. ಇಲ್ಲಿಯ ಜನ ಶ್ರೀಮಂತಿಕೆ ಜನರು ಇಲ್ಲಿನ ಪದ್ಮಾವತಿ ಮೂರ್ತಿ ಮನಮೋಹಕವಾಗಿದೆ. ಈ ಗತ ವೈಭವಕ್ಕೆ ಜನಸಾಗರವೇ ಹರಿದು ಬರುತ್ತಿದೆ ಎಂದು ಹೇಳಿದರು. ಬಳಿಕ ಕಂಬದಹಳ್ಳಿ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಏನ್.ಸುಬ್ಬೆ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಿಗೆರೆ ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾನಾಗರಾಜ್, ಮಾಜಿ ಶಾಸಕ ಬಿ. ಬಿ. ನಿಂಗಯ್ಯ, ಅಶೋಕ್ ಗೌಡ, ಕೆ. ಸಿ. ಧರಣೇಂದ್ರಯ್ಯ, ವಿಮಲ್ ತಾಳಿಕೋಟೆ, ಶ್ರೀಪಾಲಯ್ಯ, ಎಚ್. ಕೆ. ಸುದರ್ಶನ್, ಪ್ರಶಾಂತ್ ಚಿತ್ರಗುತ್ತಿ, ತೇಜು ಕುಮಾರ್ ಕಟೋರಿಯ, ಪಾಶ್ವನಾಥ, ಜಿ. ಬಿ. ಸನ್ಮತಿ ಕುಮಾರ್, ಶೈಲಾ ಹರೀಶ್, ಭರತ್‌ರಾಜು, ಎಳನೀರು ಕೀರ್ತಿ ಜೈನ್, ಬಿ. ಎಲ್. ಜಿನರಾಜ ಇಂದ್ರ, ಬ್ರಹ್ಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಏಳಿಗೆಗೆ ಸಹಕರಿಸಿದ ಸ್ಥಳೀಯರನ್ನು, ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಹೊರನಾಡು ಅರ್ಕಕೀರ್ತಿರವರು ಪ್ರಾರ್ಥಿಸಿದರು. ಎಚ್. ಸಿ. ಅಣ್ಣಯ್ಯ ಸ್ವಾಗತಿಸಿದರು. ಪ್ರದೀಪ್ ಕುಮಾರ್ ತಡಪಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. -ಜೆ. ರಂಗನಾಥ, ತುಮಕೂರು

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

Article Image

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಕಾರ್ಕಳ : ಜಿನವಾಣಿ ಮಹಿಳಾ ಸಂಘ ದಾನಶಾಲೆ ಮತ್ತು ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾ. 24ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಕಳ ಜೈನ ಮಠದ ಬಳಿಯಿರುವ ಸಭಾಂಗಣದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ: 9880015655 (ಸುಮನಾಜಿ), 9844511211 (ಹರ್ಷ) ಅಥವಾ 9591918216 (ವಿಶುಕುಮಾರ್) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

Article Image

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

ಇತ್ತೀಚೆಗೆ ರಚಿತಗೊಂಡಿರುವ ಖ್ಯಾತ ಛಾಯಾಗ್ರಾಹಕ ಚಿತ್ತ ಜಿನೇಂದ್ರರವರ ಜೀವನ ಯಶೋಗಾಥೆಯಾದ "ಸವ್ಯಸಾಚಿ ಕಲಾವಿದ ಜಿನೇಂದ್ರ" ಎಂಬ ಕೃತಿ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ತುಮಕೂರಿನ ಹಿರಿಯ ಸಾಹಿತಿ ಡಾ. ಎಸ್. ಪಿ. ಪದ್ಮಪ್ರಸಾದ್ ಜೈನ್ ರವರಿಂದ ರಚಿತವಾದ ಈ ಕೃತಿಗೆ ಹಿರಿಯ ಸಾಹಿತಿ, ನಾಡೋಜ ಹಂಪ ನಾಗರಾಜಯ್ಯ (ಹಂಪನಾ) ಮುನ್ನುಡಿ ಬರೆದಿದ್ದು, ಈ ಕೃತಿಯನ್ನು ಬೆಂಗಳೂರಿನ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಹೊರತುರುತ್ತಿದ್ದು ವಿಶಿಷ್ಟ ಕಲ್ಪನೆಯಲ್ಲಿ ಮೂಡಿಬರುತ್ತದೆ. ಕೃತಿಯಲ್ಲಿ ಎಂ.ಎಂ. ಜಿನೇಂದ್ರ ಅವರ ಜೀವನ, ಸವೆಸಿದ ಹಾದಿ, ಬೆಳೆದ ನೋಟ, ಅವರು ರಚಿಸಿದ ಕಲಾಕೃತಿಗಳ ಗುಚ್ಛವೇ ಈ ಕೃತಿಯಲ್ಲಿ ಅಡಗಿದೆ. ಸಾಂಪ್ರದಾಯಿಕ ಚಿತ್ರಕಲೆ, ಶಿಲ್ಪಕಲೆ, ಜಲವರ್ಣ, ವರ್ಣ ಚಿತ್ರಗಳು, ರೇಖಾ ಚಿತ್ರಗಳು, ವ್ಯಕ್ತಿ ಚಿತ್ರಗಳು, ಸ್ತಬ್ಧಚಿತ್ರಗಳು, ಸೆರಾಮಿಕ ಕಲಾಕೃತಿಗಳು ಆಧುನಿಕ ತಂತ್ರಜ್ಞಾನದ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕಲಾವಿದ ಎಂ. ಎಂ. ಜಿನೇಂದ್ರ ಅವರ ಕಲಾ ನೈಪುಣ್ಯತೆ, ಚತುರತೆ, ಸೂಕ್ಷ್ಮತೆ, ಗ್ರಹಿಕೆ, ರಚನಾ ಶೈಲಿ, ರೇಖೆಗಳ ಮೋಡ, ಭಾವನಾ ಲಹರಿ, ವಿಸ್ಮಯಕಾರಿ ಆಲೋಚನೆಗಳು, ಬೃಹತ್ ಮೂರ್ತಿಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಅಲ್ಲದೆ ಸಮಾಜಕ್ಕೆ ಅವರ ಕೊಡುಗೆ, ಅವರಿಗೆ ಸಂದ ಗೌರವಗಳು ಅಡಕವಾಗಿವೆ. ಈ ಕೃತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರ ತರಲಾಗಿದೆ.

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

Article Image

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಲೆನಾಡ ಮಡಿಲಿನ ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ಥಂಭೋಪರಿ ಚತುರ್ಮುಖ ಬಿಂಬದ ಪ್ರತಿಷ್ಠಾಪನೆಯು ನರಸಿಂಹರಾಜಪುರ, ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ಸಮಸ್ತ ಭಟ್ಟಾರಕ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದಿನಾಂಕ 22.03.2024 ರಿಂದ ಪ್ರಾರಂಭಗೊಂಡು 24.03.2024 ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಉಪಾಧ್ಯಕ್ಷರಾಗಿ ಸೂರಜ್ ಜೈನ್ ಮಾರ್ನಾಡ್ ಆಯ್ಕೆ

Article Image

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಉಪಾಧ್ಯಕ್ಷರಾಗಿ ಸೂರಜ್ ಜೈನ್ ಮಾರ್ನಾಡ್ ಆಯ್ಕೆ

ಕಳೆದ ಅನೇಕ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸೂರಜ್ ಜೈನ್ ಅವರು ಇದೀಗ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿಯು ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅದೇ ರೀತಿ ಅನೇಕ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಮೂಡುಬಿದಿರೆ ತಾಲೂಕಿನ ಮಾರ್ನಾಡಿನವರು

ಮೂಡುಬಿದ್ರೆ: ಗುರುಗಳ ಬಸದಿಯ ಎಂಟನೇಯ ವಾರ್ಷಿಕೋತ್ಸವ

Article Image

ಮೂಡುಬಿದ್ರೆ: ಗುರುಗಳ ಬಸದಿಯ ಎಂಟನೇಯ ವಾರ್ಷಿಕೋತ್ಸವ

ಮೂಡುಬಿದ್ರೆ ಗುರುಗಳ ಬಸದಿ ಭಗವಾನ್ ಶ್ರೀ 1008 ಪಾರ್ಶ್ಶ್ವನಾಥ ಸ್ವಾಮಿ ತೀರ್ಥಂಕರ ಬಸದಿಯ ಎಂಟನೇಯ ವಾರ್ಷಿಕೋತ್ಸವವು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ, ಪಾವನ ಸಾನಿಧ್ಯದಲ್ಲಿ ಮಾ.16 ಜರುಗಿತು. ಕಾರ್ಯಕ್ರಮದ ಅಂಗವಾಗಿ ತೋರಣ ಮಹೂರ್ತ, ನಾಗ ಕ್ಷೇತ್ರಪಾಲ ಪೂಜೆ, ಶ್ರೀ ಸರಸ್ವತಿ ಪೂಜೆ, ಪದ್ಮಾವತಿ ಯಕ್ಷಿ ಷೋಡಶೋಪಚಾರ ಪೂಜೆ, ಬ್ರಹ್ಮ ದೇವರ ಪೂಜೆ, ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿತು. ಆಶೀರ್ವಚನ ನೀಡಿದ ಪ.ಪೂ ಸ್ವಾಮೀಜಿಗಳವರು ಇಂದಿನಿಂದ ಜೈನರ ಎಂಟು ದಿನಗಳ ಪಾಲ್ಗುಣ ಮಾಸದ ಪರ್ವ ಅಷ್ಟಮ ನಂದಿಶ್ವರ ದ್ವೀಪಗಳ ಐವತ್ತ ಎರಡು ಜಿನಲಾಯಗಳ ಅಕೃತಿಮ ಜಿನ ಮಂದಿರ ಪೂಜೆ ನೆರವೇರಲಿದೆ. ಪ್ರಾರಂಭದ ದಿನ ಗುರು ಬಸದಿ ವಾರ್ಷಿಕೋತ್ಸವದ ನಿಮಿತ್ತ ಜಿನ ಭಗವಂತರ ಕೇವಲ ಜ್ಞಾನದಿಂದ ಪಡೆದ ದಿವ್ಯ ಸಂದೇಶ ತಿಳಿದುಕೊಳ್ಳಲು ಪ್ರಯತ್ನ ಮಾಡುವ ದಿನ ಲೋಕಕಲ್ಯಾಣ ಭಾವನೆಯಿಂದ ಜಿನ ಭಗವಂತ ನೀಡಿದ ಸಂದೇಶ ಅಳವಡಿಸಿ ಜೀವನ ಪಾವನವಾಗುವುದು ಎಂದರು ಹಾಗೂ ಪೂಜಾ ಸೇವಾದಾತರನ್ನು ಹರಸಿ ಆಶೀರ್ವಾದ ಮಾಡಿದರು. ಬಸದಿ ಮೋಕ್ತೆಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಮಂಜುಳಾ ಅಭಯ ಚಂದ್ರ ಜೈನ್, ವೀಣಾ ರಘುಚಂದ್ರ ಶೆಟ್ಟಿ, ಬಿ.ವಿಮಲ್ ಕುಮಾರ್, ವೀರೇಂದ್ರ ಕುಮಾರ್, ವೀರೇಂದ್ರ ಇಂದ್ರ, ಶ್ರೀನಾಥ್ ಬಲ್ಲಾಳ್, ಎಸ್. ಪಿ. ವಿದ್ಯಾಕುಮಾರ್, ಜ್ಞಾನ ಚಂದ್ರ, ಅಜಿತ್ ಪ್ರಸಾದ್, ನವೀನ್ ಲಂಡನ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸಂಜಯಂತ ಕುಮಾರ್ ವಂದಿಸಿದರು.

ಹಂತೂರು ಜೈನ ಬಸದಿಯ ನೂತನ ಮಾನಸ್ತಂಭ ಸ್ಥಾಪನೆ

Article Image

ಹಂತೂರು ಜೈನ ಬಸದಿಯ ನೂತನ ಮಾನಸ್ತಂಭ ಸ್ಥಾಪನೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ನೂತನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಮಾನಸ್ಥಂಭ ಹಾಗೂ ಚತುರ್ಮುಖ ಜಿನಬಿಂಬ ಸ್ಥಾಪನ ಕಾರ್ಯಕ್ರಮವು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳರ ಪಾವನ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ಮಾ. 16ರಂದು ನೆರವೇರಿತು. ನೂತನ ಮಾನಸ್ತಂಭವು 31.4 ಅಡಿಗಳ ಎತ್ತರದಲ್ಲಿದೆ. ಇದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ, ಕೊಯ್ರಾ ಬಂಡೆಯಿಂದ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಮಾನಸ್ತಂಭದ ದಾನಿಗಳಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರಿಯ ಸವಿತಾ-ಗೌರಿಪುರ ಪಾರ್ಶ್ವನಾಥ ದಂಪತಿಗಳು, ಪುರೋಹಿತ ಬಿ. ಎಸ್. ಧರಣಿಂದ್ರ ಇಂದ್ರ, ಆರ್. ಕೆ. ಬ್ರಹ್ಮದೇವ್, ಬಸದಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಊರ-ಪರವೂರ ಜಿನ ಬಂಧುಗಳು, ಮತ್ತಿತರರು ಉಪಸ್ಥಿತರಿದ್ದರು.

ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

Article Image

ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

ಶಿಶಿಲದ ಚಂದ್ರಪುರ ಭಗವಾನ್ ಶ್ರೀ, ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ ನಡೆಯಿತು. ಕಾರ್ಕಳ ಜೈನಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು. ಶಶಿಪ್ರಭ ಉಜಿರೆ, ಚಂಚಲ ಕೃಷ್ಣರಾಜ ಧರ್ಮಸ್ಥಳ, ಶಕುಂತಲಾ ಡಾ. ಜಯಕೀರ್ತಿ ಜೈನ್, ಶೋಭಾ ಸಂತೋಷ್ ಜೈನ್, ಚಂದನ ವೃಷಭ, ವಿಮಲ ವಿಜಯ್ ಕುಮಾರ್, ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಪ್ರೇಮ ವಸಂತ್ ಕುಮಾರ್ ಉಜಿರೆ, ರೇಷ್ಮಾ ಫಣಿರಾಜ್, ಸುರಭಿ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಜಯಕುಮಾರ್ ಮತ್ತಿತರರು ಪೂಜೆ ನೆರವೇರಿಸಿದರು. ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ, ಅರಹಂತ ಇಂದ್ರ ಶಿಶಿಲ, ಕೀರ್ತಿ ಇಂದ್ರ ಬೈಲಂಗಡಿ, ಚಿತ್ತರಂಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

ಅಮೇರಿಕಾದ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರದೀಪ್ ಜೈನ್ ಬಲ್ನಾಡು ಪೇಟೆ

Article Image

ಅಮೇರಿಕಾದ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರದೀಪ್ ಜೈನ್ ಬಲ್ನಾಡು ಪೇಟೆ

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರೇಟೆಜಿಕ್ ಲೀಡರಶಿಪ್ ಪ್ರೋಗ್ರಾಮ್ ಗೆ (strategic Leadership ) ಸುಳ್ಯ ತಾಲೂಕು ಮರ್ಕಂಜದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ ಯಾಗಿದ್ದು ಇದರಲ್ಲಿ ಭಾಗವಹಿಸಲು ಶನಿವಾರ ಅಮೆರಿಕದ ಬೋಸ್ಟನ್ ಗೆ ತೆರಳಿದ್ದಾರೆ. ಇದೇ ಸಂದರ್ಭ ಅವರು ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನಿಗೂ ಭೇಟಿ ನೀಡಲಿದ್ದಾರೆ. ದೇಶದಾದ್ಯಂತ 25 ರಾಜ್ಯಗಳಲ್ಲಿ 750 ಶಾಖೆಗಳನ್ನು ಹೊಂದಿರುವ ಉಜ್ಜಿವನ್ ಬ್ಯಾಂಕ್ ಇದರ ಹೌಸಿಂಗ್ ಲೋನ್ ವಿಭಾಗದ ರಾಷ್ಟ್ರಮಟ್ಟದ ವ್ಯವಹಾರ ಮುಖ್ಯಸ್ಥರಾಗಿರುವ ಇವರು ಸುಳ್ಯ ತಾಲೂಕು ಬಲ್ನಾಡು ಪೇಟೆ ಬಸದಿಯ ಆಡಳಿತ ಮುಕ್ತೆಸರರಾದ ಮತ್ತು ಯಕ್ಷಗಾನ ಸಂಘಟಕರಾದ ಮರ್ಕಂಜ ಯುವರಾಜ ಜೈನ್ ಮತ್ತು ಪ್ರಸನ್ನ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ.

ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವಾರ್ಪಣೆ

Article Image

ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವಾರ್ಪಣೆ

SCDCC ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಮುಲ್ಕಿ ಅರಮನೆಯ ವತಿಯಿಂದ ಎಂ ಗೌತಮ್ ಜೈನ್ ಹಾಗೂ ಪವಿತ್ರೇಶ್ ಗೌರವಾರ್ಪಣೆ ಸಲ್ಲಿಸಿದರು.

ಇಂದು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಇಂದು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವೇಣೂರು [ರಿ]. ವತಿಯಿಂದ ಇಂದು ಸಂಜೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಜರಗಲಿರುವುದು. ಫೆ.22 ರಿಂದ ಮಾ. 01ರವರೆಗೆ ಜರಗಿದ ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಹಕರಿಸಿದ ಶ್ರಾವಕ ಶ್ರಾವಕಿಯರ ಅಭಿನಂದನಾ ಕಾರ್ಯಕ್ರಮವು ಮೂಡಬಿದ್ರೆ ಶ್ರೀ ಜೈನ ಮಠದ ಪರಮಪೂಜ್ಯ ‘ಭಾರತಭೂಷಣ' ಜಗದ್ಗುರು ಸ್ವಸಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ರವರ ಗೌರವ ಉಪಸ್ಥಿತಿಯಲ್ಲಿ, ಅಪರಾಹ್ನ ಗಂಟೆ 3-30 ಕ್ಕೆ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 5-00 ರಿಂದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕೊಡಮಣಿತ್ತಾಯ ದೈವ ಹಾಗೂ ಕಲ್ಕುಡ-ಕಲ್ಲುರ್ಟಿ ದೈವಗಳ ಭಂಡಾರಗಳ ಆಗಮನ. 6-00 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ಪ್ರಾರಂಭ. ರಾತ್ರಿ 7-00 ರಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗ ಪೂಜೆ, 7-30 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ, 8-00 ರಿಂದ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ನೇಮ. ಈ ಎಲ್ಲ ಕಾರ್ಯಕ್ರಮಗಳು ಜರಗಲಿದೆ. ವಿ.ಸೂ: ಶ್ರಾವಕ ಬಂಧುಗಳು ರೂ.3000. ರೂ.5000, ರೂ.10000 ಕಲಶಗಳನ್ನು ಪಡೆದು ಅಭಿಷೇಕ ಮಾಡಬಹುದು. ದ್ರವ್ಯಾಬಿಷೇಕ ಮಾಡಲಿಚ್ಚಿಸುವ ಬಂಧುಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು. ಮೊ: 9606356288

ನೂತನ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆ

Article Image

ನೂತನ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆ

ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ (ಮೂಡಾ) ನೂತನ ಅಧ್ಯಕ್ಷರಾಗಿ ನ್ಯೂ ಪಡಿವಾಳ್ ಮಾಲಕ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆಯಾಗಿದ್ದಾರೆ. ಕಳೆದ ಕೆಲ ಸಮಯಗಳಿಂದ ಅಧ್ಯಕ್ಷರಿಲ್ಲದೇ ಇದ್ದ ಮೂಡಾ ಕ್ಕೆ ಇದೀಗ ಹೊಸ ಸಾರಥಿಯ ನೇಮಕವಾಗಿರುತ್ತದೆ.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮಂದಿರಕ್ಕೆ ಪೂಜ್ಯ ಹೆಗ್ಗಡೆಯವರ ಭೇಟಿ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮಂದಿರಕ್ಕೆ ಪೂಜ್ಯ ಹೆಗ್ಗಡೆಯವರ ಭೇಟಿ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಜಿನಮಂದಿರದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ. ಕೆ. ಜಯಕೀರ್ತಿ ಜೈನ್, ವಿಜಯ ಕುಮಾರ್, ಯುವರಾಜ್ ಪೂವಣಿ, ಫಣಿರಾಜ್ ಜೈನ್, ಜಿನರಾಜ್ ಪೂವಣಿ, ರಾಜೇಂದ್ರ ಕುಮಾರ್, ಪಿ. ಏನ್. ರವಿರಾಜ್, ಸಂತೋಷ ಜೈನ್, ವೀರೇಂದ್ರ ಕುಮಾರ್, ಜಿತೇoದ್ರ, ಸುದೀಂದ್ರ ಗುಣವರ್ಮ ಜೈನ್, ಅಜಿತ್ ಕುಮಾರ್, ಶ್ರೀ ಪಾರ್ಶ್ವ ಹಾಗೂ ಶಿಶುಗಲಿ ರಾಣಿ ಕಾಳಲಾ ದೇವಿ ಜೈನ ಮಹಿಳಾ ಸಮಾಜದ ನಾಗಕನ್ನಿಕಾ, ಶಕುಂತಲಾ ಜೈನ್, ವತ್ಸಲಾ, ಅಪೂರ್ವ, ವಿಮಲಾ, ಮಂಜುಳಾ, ಶೋಭಾ, ಸುರಭಿ, ಚಂಪಾ ಮುಂತಾದವರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವ

Article Image

ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಮತ್ತು ರಾಜಸ್ಥಾನ ತೀಜಾರ ಸಂಸ್ಥಾನ ಮಠದ ಪ.ಪೂ. ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಪ್ರೇರಣೆ, ಮಾರ್ಗದರ್ಶನದೊಂದಿಗೆ ಮಾ.11ರಂದು ನೆರವೇರಲಿರುವುದು.

First Previous

Showing 20 of 23 pages

Next Last