Article Image

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

Article Image

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ ಆಹಾರ ಸುರಕ್ಷತಾ ದಿನವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆರಂಭದಲ್ಲಿ “ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎನ್ನುವುದನ್ನು ಪ್ರಸ್ತುತ ಪಡಿಸುವ ಕಿರುನಾಟಕ, ನಂತರದಲ್ಲಿ ನಮ್ಮ ಸುತ್ತಮುತ್ತಲು ಸುಲಭದಲ್ಲಿ ದೊರೆಯುವ ಅನೇಕ ಅಹಾರ ಪದಾರ್ಥಗಳಾದ ಮಾವಿನಕಾಯಿ, ಎಳನೀರು, ಒಂದೆಲಗ, ಪೇರಲೆಕಾಯಿ, ಬಾಳೆಹಣ್ಣು, ಈರುಳ್ಳಿ ಇತ್ಯಾದಿಗಳ ಉಪಯೋಗಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಸಾಗಿಬಂತು. ಕಾರ್ಯಕ್ರಮವನ್ನು ಕೊಬ್ಬರಿ-ಬೆಲ್ಲವನ್ನು ಅತಿಥಿಗಳಿಂದ ಮಕ್ಕಳಿಗೆ ನೀಡಿ ಆರಂಭಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಸಿದ್ದ-ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಡಾ. ಸ್ಮಿತಾ ಭಟ್ ಯು. ಎಸ್‌ರವರು- ಆಹಾರ ಕೇವಲ ಒಂದು ಜಡವಸ್ತುವಲ್ಲ ಅದು ನಮ್ಮ ದೇಹವನ್ನು ಪ್ರವೇಶಿಸಿ ದೇಹಕ್ಕೆ ಶಕ್ತಿ ತುಂಬುವ ಅಪರೂಪದ ವಸ್ತು. ನಮ್ಮ ದೇಹ ಕಸದ ಬುಟ್ಟಿಯಲ್ಲ. ಹಾಗಾಗಿ ಆಹಾರವೆಂದುಕೊಂಡು ಸಿಕ್ಕಿದನ್ನೆಲ್ಲ ತಿನ್ನದೇ ಸಮತೂಕದ ಆಹಾರವನ್ನು ಸೇವಿಸುವಂತೆ ಕರೆಯಿತ್ತರು. ಆಹಾರದ ಘಟಕಗಳು ಅವುಗಳ ಮೂಲಗಳು ಮತ್ತು ಅವುಗಳ ಉಪಯುಕ್ತತೆ ತಿಳಿಸಿಕೊಟ್ಟು, ಅದರ ಜೊತೆಗೆ ಸಿಕ್ಕಿದನ್ನೆಲ್ಲ ತಿನ್ನುತ್ತಾ ಹೋದರೆ, ನಾವು ತಿಂದ ಆಹಾರವೇ ಮುಂದೆ ವಿಷವಾಗಿ ನಮಗೆ ಅಪಾಯ ತರುತ್ತದೆ. ಜಂಕ್‌ಫುಡ್ ಎಂಬ ಮಾರಿಯನ್ನು ದೂರವಿಟ್ಟು, ಅತಿಯಾದ ಸಕ್ಕರೆ, ಉಪ್ಪು, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನು ತ್ಯಜಿಸಿ -ಉತ್ತಮ ಆರೋಗ್ಯವನ್ನು ನಮ್ಮದಾಗಿಸುವತ್ತ ಗಮನ ಕೊಡುವಂತೆ ಕರೆನೀಡಿದರು. ಯಾವುದೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಅದನ್ನು ತಯಾರಿಸಲು ಬಳಸುವ ಸಾಮಾಗ್ರಿಗಳ ಮಾಹಿತಿಯನ್ನು ತಪ್ಪದೇ ಓದಿಕೊಳ್ಳಿ. ಸದಾಕಾಲ ಸಮತೂಕದ ಆಹಾರವನ್ನು ಸೇವಿಸಿ ಎನ್ನುವ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಮುಖ್ಯಶಿಕ್ಷರಾದ ಶಿವಪ್ರಸಾದ್ ಭಟ್ ಮಾತಾನಾಡಿ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ಅದರ ಬಗ್ಗೆ ಮನಗೆ ಸ್ಪಷ್ಟ ಅರಿವಿರಬೇಕು- ಜಂಕ್‌ಫುಡ್ ಇವತ್ತಿನಿಂದಲೇ ದೂರಮಾಡಿ, ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ, ಅದನ್ನು ಕಾಪಾಡಿಕೊಳ್ಳಿ ಎಂಬ ಕರೆಯಿತ್ತರು. ಆಹಾರ ಸುರಕ್ಷತಾ ದಿನದ ಮಹತ್ವ ಸಾರುವ ವೀಡಿಯೊ ಸಂದೇಶವನ್ನು ಪ್ರಸ್ತುತ ಪಡಿಸಲಾಯಿತು. ಸಂಸ್ಥೆಯ ವಿಜ್ಞಾನ ವಿಭಾಗದ ಉಸ್ತುವಾರಿಯಲ್ಲಿ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಚ್ಚಿನ್ ನಾಯಕ್ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂನ್ 05ರಂದು “ವಿಶ್ವ ಪರಿಸರ ದಿನ”ವನ್ನು ಆಚರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಿಡಗಳಿಗೆ ನೀರುಣಿಸುವುದರ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು ಪರಿಸರವು ಮಾನವಕುಲಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ, ಅದನ್ನು ಸಂರಕ್ಷಿಸುವಂತೆ ತಿಳಿಯ ಹೇಳಿದರು. ಪರಿಸರ ದಿನಾಚರಣೆಯಲ್ಲಿ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ವಿಶ್ವವಿದ್ಯಾಲಯದ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕವು “ಭೂ ಮರುಸ್ಥಾಪನೆ, ಮರು ಭೂಮೀಕರಣ, ಬರ ಸ್ಥಿತಿಸ್ಥಾಪಕತ್ವ” ಎಂಬ ಧ್ಯೇಯದ ಕುರಿತು ತಜ್ಞ ಉಪನ್ಯಾಸವನ್ನು ಆಯೋಜಿಸಿದ್ದರು. ಧಾರವಾಡದ ಪ್ರಸಿದ್ಧ ವೈದ್ಯ ಮತ್ತು ಪರಿಸರವಾದಿ ಡಾ. ಚಿದಾನಂದ ರಾಮನಗೌಡರ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಲು ತಮ್ಮ ಸುತ್ತಮುತ್ತ ಸಸಿಗಳನ್ನು ನೆಡಬೇಕು ಮತ್ತು ಆಗಾಗ ನೀರುಣಿಸುತ್ತಿರಬೇಕು. ಶುದ್ಧ ಗಾಳಿ ಮತ್ತು ನೀರನ್ನೊಳಗೊಂಡ ಪರಿಸರವು ಮಾನವನಿಗೆ ಮೊದಲ ಮತ್ತು ಪ್ರಥಮ ಪ್ರಾಶಸ್ತ್ಯದ ಔಷಧವಾಗಿದೆ. ಪರಿಸರ ದಿನವನ್ನು ಆಚರಿಸುವುದರಿಂದ ನಾವು ಯುವ ಪೀಳಿಗೆಗೆ ಪರಿಸರದ ಅರಿವು ಮತ್ತು ಜಾಗೃತಿಯನ್ನು ಮೂಡಿಸಿದಂತಾಗುತ್ತದೆ. ಪರಿಸರದ ಅಸಮತೋಲನವು ತಾಪಮಾನ ಮತ್ತು ಹವಾಮಾನದ ವೈಪರಿತ್ಯತೆಗೆ ಕಾರಣವಾಗಿ ಮಾನವರ ಮೇಲೆ ಅತೀವ ಪರಿಣಾಮಗಳುಂಟು ಮಾಡುತ್ತದೆ. ದೇವರ ಕೊಡುಗೆಯಾದ ಹಸಿರು ಎಲೆಗಳು ಉತ್ತಮ ಆಮ್ಲಜನಕವನ್ನು ಕೊಡುವುದರಿಂದ ಅದರ ಸಂರಕ್ಷಣೆಯು ಆವಶ್ಯಕ. ಜನರಿಂದ ಪರಿಸರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹೊರತಾಗಿ ಪರಿಸರವೇ ನಮ್ಮನ್ನು ನಿಯಂತ್ರಿಸುತ್ತದೆ ಎಂಬ ಅರಿವಿರಬೇಕು ಎಂದು ಹೇಳಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ವಿಜಯ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ. ರಾಕೇಶ ನಾಯಕ, ವಿಶ್ವವಿದ್ಯಾಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಬಾಬಣ್ಣಾ ಶೆಟ್ಟಿಗಾರ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚರ್ಮರೋಗ: ಉಚಿತ ತಪಾಸಣಾ ಶಿಬಿರ

Article Image

ಚರ್ಮರೋಗ: ಉಚಿತ ತಪಾಸಣಾ ಶಿಬಿರ

ಉಜಿರೆ: ಇಲ್ಲಿಯ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಚರ್ಮರೋಗ ಉಚಿತ ತಪಾಸಣಾ ಶಿಬಿರವನ್ನು ಇದೇ ಬರುವ ಮೇ.26 ರಂದು ಭಾನುವಾರ ಬೆಳಿಗ್ಗೆ ಗಂಟೆ 9 ರಿಂದ ಅಪರಾಹ್ನ 1 ಗಂಟೆವರೆಗೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಸಂಪರ್ಕಿಸಿ: 8073349216 / 7760397878

ಬೆಳ್ತಂಗಡಿ: ಸುದರ್ಶನ ಕ್ರಿಯಾ ಯೋಗ ಶಿಬಿರ

Article Image

ಬೆಳ್ತಂಗಡಿ: ಸುದರ್ಶನ ಕ್ರಿಯಾ ಯೋಗ ಶಿಬಿರ

ಗುರುದೇವ್ ಶ್ರೀ ರವಿಶಂಕರ್ ಅವರ ಆನಂದೋತ್ಸವ ಸುದರ್ಶನ ಕ್ರಿಯಾ ಯೋಗ ಶಿಬಿರ ಉಜಿರೆಯ ಅರಿಪ್ಪಾಡಿ ಮಠ ಸಭಾಂಗಣದಲ್ಲಿ ಮೇ 15 ರಿಂದ 20ರ ವರೆಗೆ ಪ್ರತೀ ಸಂಜೆ 5.30 ರಿಂದ 8ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯಾ ಮತ್ತು ಜೀವನಕ್ಕೆ ಸಂಬಂಧಿಸಿದ ಜ್ಞಾನ ಒದಗಿಸಲಾಗುವುದು. ವಿಶ್ವದ ಮಿಲಿಯಾಂತರ ಜನರ ಜೀವನವನ್ನು ಪರಿವರ್ತಿಸಿದ ಸರಳವಾದ ಉಸಿರಾಟ ಪ್ರಕ್ರಿಯೆ ಸುದರ್ಶನ ಕ್ರಿಯೆ ಕಲಿಯುವ ಸುವರ್ಣಾವಕಾಶವಿದ್ದು ಒತ್ತಡ ರಹಿತ, ಶಾಂತವಾದ ಮನಸ್ಸು ಸಂತೋಷ ಉತ್ಸಾಹ ಮತ್ತು ಕ್ರಿಯಾಶೀಲತೆ, ಮಾನಸಿಕ ಖಿನ್ನತೆ, ಚಿಂತೆ ಮತ್ತು ಆತಂಕಗಳಿಂದ ಮುಕ್ತಿ, ಆರೋಗ್ಯಕರವಾದ ದೇಹ ಮತ್ತು ಉತ್ತಮ ನಿದ್ದೆಗೆ ಸುದರ್ಶನ ಕ್ರಿಯಾ ಯೋಗ ಉಪಯುಕ್ತವಾಗಿದ್ದು ಆಸಕ್ತರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನಿಂದ ದ .ಕ. ಜಿಲ್ಲೆಯಾದ್ಯಂತ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ

Article Image

ಇಂದಿನಿಂದ ದ .ಕ. ಜಿಲ್ಲೆಯಾದ್ಯಂತ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ

ಮಂಗಳೂರು: ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ದ.ಕ. ಜಿಲ್ಲೆಯಾದ್ಯಂತ ಎ. 1ರಿಂದ 30ರ ವರೆಗೆ ನಡೆಯಲಿದೆ. ಪ್ರತಿ ಬಾರಿಯಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೆಎಂಎಫ್‌ನ ಲಸಿಕೆದಾರರು ಪ್ರತೀ ಮನೆ ಮನೆಗೆ ತೆರಳಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕಾಲು ಬಾಯಿ ಜ್ವರ ರೋಗವು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಲಸಿಕೆ ನೀಡುವುದೊಂದೇ ಪರಿಣಾಮಕಾರಿಯಾದ ವಿಧಾನವಾಗಿದೆ. ಈ ಹಿಂದೆ ರೈತರು ತಮ್ಮ ಜಾನುವಾರುಗಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಪ್ರತಿ ಸುತ್ತಿನಲ್ಲಿ ಲಸಿಕೆ ಹಾಕುವುದು ಅವಶ್ಯವಾಗಿದೆ ಎಂದು ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ| ಅರುಣ್ ಕುಮಾರ್ ಶೆಟ್ಟಿ ಎನ್. ತಿಳಿಸಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2,50,569 ದನ, ಹಾಗೂ 1,832 ಎಮ್ಮೆ ಒಟ್ಟು 2,52,401 ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗದ ಲಸಿಕೆ ಹಾಕಿಸಲು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸನ್ನದ್ಧವಾಗಿದ್ದು, ರೈತರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆ/ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ನಿಗದಿತ ದಿನದಂದು ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿ ಹಾಕಿ, ಲಸಿಕೆ ಹಾಕಲು ಬರುವ ಸಿಬ್ಬಂದಿಯೊಡನೆ ಸಹಕರಿಸಬೇಕು ಎಂದು ಹೇಳಿದ್ದಾರೆ.

ಉಜಿರೆಯಲ್ಲಿ ಎರಡು ದಿನಗಳ ಪ್ರಾಣಿಕ್ ಹೀಲಿಂಗ್ ತರಬೇತಿ ‌ಶಿಬಿರ

Article Image

ಉಜಿರೆಯಲ್ಲಿ ಎರಡು ದಿನಗಳ ಪ್ರಾಣಿಕ್ ಹೀಲಿಂಗ್ ತರಬೇತಿ ‌ಶಿಬಿರ

ಉಜಿರೆಯ ಪೆರ್ಲ ರಸ್ತೆಯಲ್ಲಿರುವ ಪ್ರಾಣನೆಸ್ಟ್, ಪ್ರಾಣಿಕ್ ಹೀಲಿಂಗ್ ಮತ್ತು ಅರ್ಹಾಟಿಕ್ ಯೋಗ ಕೇಂದ್ರದಲ್ಲಿ ಎರಡು ದಿನಗಳ ಪ್ರಾಣಿಕ್ ಹೀಲಿಂಗ್ ತರಬೇತಿ ‌ಶಿಬಿರವನ್ನು ದಿನಾಂಕ ಫೆಬ್ರವರಿ 3 ಮತ್ತು 4 (ಶನಿವಾರ ಮತ್ತು ಭಾನುವಾರ)ರಂದು ಹಮ್ಮಿಕೊಳ್ಳಲಾಗಿದೆ. ಪ್ರಾಣಿಕ್ ಹೀಲಿಂಗ್ ಒಂದು ಪುರಾತನವಾದ ಕಲೆ ಮತ್ತು ವಿಜ್ಞಾನವಾಗಿದ್ದು, ಇದರಲ್ಲಿ ಸ್ಪಶಿ೯ಸದೆ, ಔಷಧಗಳನ್ನು ಕೊಡದೇ, ಕೇವಲ ಪ್ರಾಣ ಶಕ್ತಿಯಿಂದ ಖಾಯಿಲೆಗಳನ್ನು  ಗುಣಪಡಿಸುವ ಪೂರಕ‌ ಚಿಕಿತ್ಸಾ ವಿಧಾನವಾಗಿದೆ. 16 ವರ್ಷ ಮೇಲ್ಪಟ್ಟ ಎಲ್ಲಾ ಆಸಕ್ತರು ಇದನ್ನು ಕಲಿಯಬಹುದಾಗಿದೆ. ಶುಲ್ಕ, ಹೆಸರು ನೋಂದಾಯಿಸಲು ಮತ್ತು ‌ಇತರ ಮಾಹಿತಿಗೆ 8105023414 ಇವರನ್ನು ಸಂಪರ್ಕಿಸಬಹುದು.

ನೀವೇ ವೈದ್ಯರಾಗಿ, ಆಲೋಪತಿಯನ್ನು ದೂರವಿಡಿ.....

Article Image

ನೀವೇ ವೈದ್ಯರಾಗಿ, ಆಲೋಪತಿಯನ್ನು ದೂರವಿಡಿ.....

ಮಲ್ಲಿಗೆ ಎಲೆಗಳನ್ನು ಕಿತ್ತು ಬಾಯಲ್ಲಿ ಹಿಡಿದುಕೊಂಡರೆ ಹಲ್ಲು ನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ. ಮಲ್ಲಿಗೆ ಎಲೆಗಳನ್ನು ಜಜ್ಜಿ ಹುಣ್ಣುಗಳ ಮೇಲೆ ಹಚ್ಚಬೇಕು. ಹಲ್ಲು ನೋಯುತ್ತಿದ್ದರೆ ಮಲ್ಲಿಗೆ ಎಲೆಯನ್ನು ಕಚ್ಚಿ ತಿನ್ನಿ. ಮಲ್ಲಿಗೆ ಎಲೆಗಳು ಗಾಯಗಳನ್ನು ವಾಸಿಮಾಡುವ ಉತ್ತಮವಾದ ಹುಣ್ಣು ನಿವಾರಕ. ಜಾಸ್ಮಿನ್ ಎಣ್ಣೆಯನ್ನು ಅನ್ವಯಿಸಿ. ಜಾಸ್ಮಿನ್ ಕುಷ್ಠರೋಗ ಮತ್ತು ಕಂಡುಘ್ನ ಎಂದು ಹೇಳಿದ್ದಾರೆ. ದೇಹದಲ್ಲಿ ತುರಿಕೆ ಅಥವಾ ಚರ್ಮ ರೋಗವಿದ್ದರೆ ಮಲ್ಲಿಗೆ ಎಲೆಯನ್ನು ಜಜ್ಜಿ ಲೇಪಿಸಿ. ತುರಿಕೆ ಕಡಿಮೆ ಮಾಡುತ್ತದೆ. ಅನೇಕ ಚರ್ಮ ರೋಗಗಳು, ಅಂದರೆ. ಎಸ್ಜಿಮಾ, ಫಂಗಲ್ ಸೋಂಕು ಇತ್ಯಾದಿ. ಇದರ ನಡುವೆ ಮಲ್ಲಿಗೆ ಎಲೆಯ ಎಣ್ಣೆ ಅಥವಾ ಎಲೆ ಬೇರಿನ ಪೇಸ್ಟ್ ಪ್ರಯೋಜನಕಾರಿ. ತಲೆನೋವು ಇದ್ದರೆ ಮಲ್ಲಿಗೆಯ ಬೇರನ್ನು ಕಿತ್ತು ಹಚ್ಚುತ್ತಾರೆ. ಮಲ್ಲಿಗೆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆತಿರುಗುವಿಕೆ ಅಥವಾ ಮಾನಸಿಕ ಖಿನ್ನತೆಯಿಂದ ಪರಿಹಾರ ದೊರೆಯುತ್ತದೆ. ನೀರಿನಲ್ಲಿ ಶೀತ ಅಥವಾ ನಿರಂತರ ಕೆಲಸದಿಂದ ಅಂಗೈಯು ಬಿರುಕು ಬಿಟ್ಟರೆ, ಮಲ್ಲಿಗೆ ಎಲೆಗಳನ್ನು ವಿಂಗಡಿಸಿ ಮತ್ತು ಬಿರುಕುಗಳನ್ನು ಮುಚ್ಚಿ ಹಚ್ಚಿದರೆ ಗಾಯಗಳು ಬೇಗ ವಾಸಿಯಾಗುತ್ತವೆ. ಮಲ್ಲಿಗೆ ಎಲೆಯ ಸಿದ್ಧ ಎಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಬೇಕು, ಇದರಿಂದ ದೇಹದ ಭಾಗವು ಮೃದು ಮತ್ತು ನೈಸರ್ಗಿಕವಾಗಿರುತ್ತದೆ. * ಕಿವಿ ನೋವು ಮತ್ತು ಕಿವಿಯಿಂದ ಸ್ರಾವದಂತಹ ದೂರುಗಳಿಗೆ ಎಲೆಗಳ ಸಿದ್ಧ ಎಣ್ಣೆ

First Previous

Showing 2 of 2 pages

Next Last