Article Image

ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ

Article Image

ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ

ಕಡಬ : ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ 2024 ನೇ ಸಾಲಿನ ಚಂದನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ 20ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಗಸ್ಟ್ 03 ರಂದು ಸುಳ್ಯ ದಲ್ಲಿ ನಡೆದಿದ್ದು, ಸಾಹಿತ್ಯ ಕೃಷಿಗಾಗಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇವರು ಕಡಬ ತಾಲೂಕಿನ ಹೊಸಂಗಡಿ ಬಸದಿ ನೂಜಿಬಾಳ್ತಿಲದ ಧರಣೇoದ್ರ ಇಂದ್ರ ಮತ್ತು ಮಂಜುಳಾರವರ ಸುಪುತ್ರರಾಗಿರುತ್ತಾರೆ.

ರಾಜಸ್ಥಾನದ, ಜೈಪುರ: ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಲಾಸ್ಯರಾಜ್

Article Image

ರಾಜಸ್ಥಾನದ, ಜೈಪುರ: ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಲಾಸ್ಯರಾಜ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ಲಾಸ್ಯರಾಜ್ ಇವಳು ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾಳೆ. ಇವಳು ವೀರವನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್. ಬಿ. ನರೇಂದ್ರ ಕುಮಾರ್ ಇವರ ಮೊಮ್ಮಗಳು ಹಾಗೂ ಸಿದ್ಧಾಂತ್ ಕೀರ್ತಿರಾಜ್ ಮತ್ತು ಸೌಭಾಗ್ಯ ಇವರ ಪುತ್ರಿ. ಇವರಿಗೆ ಎಸ್. ಡಿ.ಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾ ಕಾರ್ಯದರ್ಶಿಗಳು ಹಾಗೂ ವಾಲಿಬಾಲ್ ತರಬೇತುದಾರರಾದ ರಮೇಶ್ ಹೆಚ್ ಇವರು ಸಹಕರಿಸಿ ಮಾರ್ಗದರ್ಶನವನ್ನು ನೀಡಿದರು.

ನವನಗರ ಸೇವಾ ಸಂಘಕ್ಕೆ ಕಾರ್ಯಧ್ಯಕ್ಷರ ನೇಮಕ

Article Image

ನವನಗರ ಸೇವಾ ಸಂಘಕ್ಕೆ ಕಾರ್ಯಧ್ಯಕ್ಷರ ನೇಮಕ

ಹುಬ್ಬಳ್ಳಿ ನವನಗರದ ಅಲ್ಪಸಂಖ್ಯಾತ ಜೈನ ಸೇವಾ ಸಂಘದ ಕಾರ್ಯಧ್ಯಕ್ಷರಾಗಿ ಅಶೋಕ ಯೋಗಪ್ಪನವರ ಇವರನ್ನು ಸಂಘದ ಅಧ್ಯಕ್ಷರಾದ ಶಾಂತರಾಜ ಮಲ್ಲಸಮುದ್ರ ಇವರು ನೇಮಕ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸರ್ವಸಾದಾರಣ ಸಭೆಯಲ್ಲಿ ಸರ್ವನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಅಶೋಕ ಯೋಗಪ್ಪನವರ ಇವರು ಎರಡು ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 37 ವರ್ಷ ದಕ್ಷ ಪ್ರಾಮಾಣಿಕವಾಗಿ ಸುದೀರ್ಘ ಸೇವೆ ಸಲ್ಲಿಸಿ ಸಹಾಯಕ ನಿರ್ದೇಶಕರಾಗಿ ವಯೋನಿವೃತ್ತಿ ಹೊಂದಿದರು. ಕಳೆದ 12 ವರ್ಷಗಳಿಂದ ಸಮಾಜದ ಎಲ್ಲ ಕಾರ್ಯಗಳಲ್ಲಿ ಸಂಘದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು ಧಾರ್ಮಿಕ ಚಟುವಟಿಕೆಯಲ್ಲಿ ಕ್ರೀಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಸ್ ಆರ್ ಮಲ್ಲಸಮುದ್ರ

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

Article Image

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

ಮಂಗಳೂರು: ಏಪ್ರಿಲ್ 2025ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಾರ್ಷಿಕ ಯುರೊಲಿಥಿಯಾಸಿಸ್ ಸಮ್ಮೇಳನದಲ್ಲಿ ಸಲಹೆಗಾರರ ರಸಪ್ರಶ್ನೆಯಲ್ಲಿ ಮಂಗಳೂರಿನ ಮೂತ್ರ ಶಾಸ್ತ್ರತಜ್ಞ ಡಾ. ಅಭೀಷ್ ಹೆಗ್ಡೆರವರು ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀ ಯ ಕಾಲೇಜಿನ ಮೂತ್ರ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುತ್ತಾರೆ.

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

Article Image

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಮೂಹ ಮಾಧ್ಯಮಗಳು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ. ನಿರಂಜನ್ ಕುಮಾರ್ ಅವರ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಜಾಗತಿಕ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿವೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಡಾ. ನಿರಂಜನ್ ಕುಮಾರ್ ಅವರ ಪರವಾಗಿ ಈ ಪ್ರತಿಷ್ಠಿತ ಜಾಗತಿಕ ಶ್ರೇಷ್ಠತೆಯ ಗೌರವವನ್ನು ಮಲೇಷ್ಯಾದ ಮ್ಯಾಪ್ಸ್ ಗ್ರುಪ್‌ನ ಸಂಸ್ಥಾಪಕರಾದ ದಾತುಕ್ ಎಂ.ಎ.ಪಿ. ಸಿಗರನ್ ಮತ್ತು ಇತರ ಗಣ್ಯರಿಂದ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಜುಲೈ 13, 2025 ರಂದು ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲಾನ್‌ನಲ್ಲಿ ನಡೆದ ಕರ್ನಾಟಕ ಜಾಗತಿಕ ಸಾಧಕರ ಅಂತರರಾಷ್ಟ್ರೀಯ ಆಚರಣೆಯ ಸಂದರ್ಭದಲ್ಲಿ ನೀಡಲಾಯಿತು.

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Article Image

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್. ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 2017-2020 ನೇ ಸಾಲಿನ ಬಿಕಾಂ ವಿದ್ಯಾರ್ಥಿನಿ ರಚನಾ ಎಸ್.ಡಿ. ತೇರ್ಗಡೆಯಾಗಿದ್ದಾರೆ. ಇವರು ಮೂಡಬಿದ್ರೆಯ ಧೀರಜ್ ಎಸ್.ಎಮ್. ಮತ್ತು ಪದ್ಮಜಾ ಶೆಟ್ಟಿಯವರ ಪುತ್ರಿ, ರಚನಾ ಎಸ್.ಡಿ. ಮಂಗಳೂರಿನ ಕೆಎನ್‌ಡಿಸಿ ಆಂಡ್ ಅಸೋಸಿಯೆಶನ್‌ನಲ್ಲಿ ಸಿಎ ಪ್ರಾಯೋಗಿಕ ತರಬೇತಿಯನ್ನು ಪಡೆದಿರುತ್ತಾರೆ.

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

Article Image

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಸಂಶೋಧಕ ನಾಡೋಜ, ಹಂ.ಪ ನಾಗರಾಜಯ್ಯ ಭಾಷಾ ವಿಜ್ಞಾನಿ, ಗ್ರಂಥ ಸಂಪಾದಕ, ಶ್ರೇಷ್ಠವಾಗ್ಮಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. 1936ರ ಅಕ್ಟೋಬರ್ 7ರಂದು ಕೋಲಾರ ಜಿಲ್ಲೆ (ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲೂಕಿನ ಹಂಪಸಂದ್ರದಲ್ಲಿ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಹಂಪಸಂದ್ರದಲ್ಲಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಗೌರಿಬಿದನೂರಿನಲ್ಲಿ, ಪಡೆದ ಇವರು ಕಲಾ ಪದವಿ ಹಾಗೂ ಕಲಾ ಸ್ನಾತಕೋತ್ತರ ಪದವಿಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಅಂದಿನಿಂದಲೂ ಮೈಸೂರು ದಸರಾ ಬಗ್ಗೆ ವಿಶೇಷವಾದ ಗೌರವ, ಪ್ರೀತಿ. ನಾಡೋಜ ಹಂ.ಪ ನಾಗರಾಜಯ್ಯ ಸಾಹಿತ್ಯ ಲೋಕದ ವಿಶೇಷ ಆಸ್ತಿ, ಹಂಪನ ಎಂಬ ಕಾವ್ಯ ನಾಮದಿಂದ ಹೆಸರಾಗಿರುವ ಇವರು, ನಾಡೋಜ ಎಂಬ ಕೀರ್ತಿ ಭಾಷಾ ವಿಜ್ಞಾನಿ, ಕಾದಂಬರಿ ಕಾರ, ಕಾವ್ಯ, ಇತಿಹಾಸ, ಭಾಷಾ ಶಾಸ್ತ್ರ, ಜೈನ ಸಾಹಿತ್ಯ ಇನ್ನಿತರ ಕೃತಿಗಳನ್ನು ರಚಿಸಿರುವವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. (ಜೆ.ರಂಗನಾಥ ತುಮಕೂರು)

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

Article Image

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತ್ರ ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ದಿನಾಂಕ 11 ಜುಲೈ 2025 ರಂದು ಪಿಎಚ್.ಡಿ ಪದವಿ ನೀಡಲಾಯಿತು. ಉಜಿರೆಯ ಲಲಿತನಗರದ ನಿವಾಸಿಯಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಧರ್ಮಪತ್ನಿ.

ಪರಾಗ್ ಜೈನ್ ರಾ ಹೊಸ ಮುಖ್ಯ

Article Image

ಪರಾಗ್ ಜೈನ್ ರಾ ಹೊಸ ಮುಖ್ಯ

ಹೊಸದಿಲ್ಲಿ: ‘ಆಪರೇಷನ್ ಸಿಂದೂರ’ ಸೇನಾ ಕಾರ್ಯಾಚರಣೆ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಗುಪ್ತಚರ ಸಂಸ್ಥ ‘ರಾ’ ಮುಖ್ಯಸ್ಥರನ್ನಾಗಿ ಕೇಂದ್ರ ಸರಕಾರ ನೇಮಿಸಿದೆ. ‘ರಾ’ ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರು ಜೂನ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಸದ್ಯ ‘ರಾ’ದ ವೈಮಾನಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವ ಪರಾಗ್ ಅವರು ಜುಲೈ 1ರಂದು ‘ರಾ’ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರ ಅವಧಿ ಎರಡು ವರ್ಷ ಇರಲಿದೆ. ಪರಾಗ್ 1989ನೇ ಸಾಲಿನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಗುಪ್ತಚರ ಇಲಾಖೆಯಲ್ಲಿ ಮಾನವ ಬುದ್ಧಿಮತ್ತೆ ಹಾಗೂ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಿ ಬಳಸುವಲ್ಲಿ ಪರಿಣತಿ ಹೊಂದಿದ್ದಾರೆ.

ವೈ. ಡಿ.ರತ್ನಾಕರವರಿಗೆ ಸನ್ಮಾನ

Article Image

ವೈ. ಡಿ.ರತ್ನಾಕರವರಿಗೆ ಸನ್ಮಾನ

ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯುವ ರತ್ನ ಪ್ರಶಸ್ತಿಯ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಪುಟ್ಟೇನ ಹಳ್ಳಿಯ ಸಿದ್ಧಾಂಥ ಧಾರ್ಮಿಕ ಪತ್ರಿಕೆಯ ಸಂಪಾದಕರಾದ ವೈ. ಡಿ.ರತ್ನಾಕರವರಿಗೆ ಸಂಘದ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿನ ಗಣ್ಯರು ಪ್ರಶಸ್ತಿನೀಡಿ ಸನ್ಮಾನಿಸಿದರು.

ಮಹಾವೀರ ಜೈನ್‌ ಇಚ್ಲಂಪಾಡಿ ಇವರಿಗೆ ಪಿ.ಹೆಚ್.ಡಿ ಪದವಿ

Article Image

ಮಹಾವೀರ ಜೈನ್‌ ಇಚ್ಲಂಪಾಡಿ ಇವರಿಗೆ ಪಿ.ಹೆಚ್.ಡಿ ಪದವಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್‌ ಇಚ್ಲಂಪಾಡಿ ಇವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಉಜಿರೆಯ ಡಾ. ಹಾಮಾನಾ ಸಂಶೋಧನಾ ಕೇಂದ್ರದ ಮೂಲಕ ಡಾ.ಬಿ.ಪಿ ಸಂಪತ್ ಕುಮಾರ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಲ್ಲಿಸಿದ "ಕನ್ನಡ ಜೈನ ಸಾಹಿತ್ಯದಲ್ಲಿ ಕರ್ಮಸಿದ್ಧಾಂತದ ಸ್ವರೂಪ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ನೀಡಿದೆ. ಇವರು ಧಾರ್ಮಿಕ ಉಪನ್ಯಾಸಕ, ಅನೇಕ ಶಾಸ್ತ್ರದಾನ ಪುಸ್ತಕಗಳ ಸಂಪಾದಕರು, ಚಾವಡಿ ಚರ್ಚೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ನೆಲ್ಯಾಡಿ ಜೇಸಿಐ ಇದರ ಪೂರ್ವಾಧ್ಯಕ್ಷರು ಹಾಗೂ ಭಾರತೀಯ ಜೈನ್‌ ಮಿಲನ್ ಇದರ ಇಚ್ಲಂಪಾಡಿ ಶಾಖೆಯ ಪೂರ್ವಾಧ್ಯಕ್ಷರು ಆಗಿದ್ದರು.

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

Article Image

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

ಅಮೇರಿಕಾದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ಧಾರವಾಡದ ಲೇಖಕ ಶಾಂತರಾಜ ಮಲ್ಲಸಮುದ್ರ ಇವರ ಮೊಮ್ಮಗಳಾದ *ಕುಮಾರಿ ಸಾನ್ವಿ ಸೂರಜ ಮಲ್ಲಸಮುದ್ರ* ಇವಳಿಗೆ 2024 ಶೈಕ್ಷಣಿಕ ವರ್ಷದಲ್ಲಿ "President's award for educational excellence" ದೊರೆತಿದೆ. ಶಿಕ್ಷಣದಲ್ಲಿ ಸರ್ವಾ0ಗೀಣ ಉತ್ತಮ ಪ್ರಗತಿ ಮತ್ತು ಹಿರಿಮೆಯನ್ನು ಗುರುತಿಸಿ ಕೊಡುತ್ತಿರುವ ಈ ಪ್ರತಿಷ್ಠಿತ ಅವಾರ್ಡ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದಿನಾಂಕ 23-5-2024 ರಂದು ಪ್ರದಾನ ಮಾಡಲಾಯಿತು. ಇವಳು ಶಿಕ್ಷಣದಲ್ಲಿ ಮಾತ್ರವಲ್ಲ ಅತ್ಯಂತ ಸಾಹಸದ ಕ್ರೀಡೆಯಾದ "ಈಜು" (swimming ) ನಲ್ಲೂ ಓಲಂಪಿಕ್ ಆಯ್ಕೆಗಾಗಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾಳೆ. ಈಗಾಗಲೇ ಈ ಕ್ರೀಡೆಯಿಂದ ಹಲವು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾಳೆ. ಭಾರತ ದೇಶದ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿದ ಕು. ಸಾನ್ವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ನಿಮ್ಮೆಲ್ಲರ ಪ್ರೋತ್ಸಾಹ ಶುಬೇಚ್ಚೆ ಆಶೀರ್ವಾದ ಇರಲೆಂದು ಅಪೇಕ್ಷಿಸುತ್ತೇವೆ.

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

Article Image

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನ ಮಂಗಳ ಸ್ಟೇಡಿಯಮ್ ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 12 ಮಂದಿ ಶಿಕ್ಷಕಿಯರು ಆಯ್ಕೆಯಾಗಿದ್ದು ಬೆಳ್ತಂಗಡಿ ತಾಲೂಕಿನಿಂದ ಪದ್ಮಶ್ರೀ ಜೈನ್ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ದ.ಕ.ಜಿಲ್ಲಾ ಮಹಿಳಾ ಥ್ರೋಬಾಲ್ ತಂಡವು ಪದ್ಮಶ್ರೀ ಅವರ ನೇತೃತ್ವದಲ್ಲಿ ಭಾಗವಹಿಸಲಿದೆ.

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

Article Image

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಹೊಂಬುಜ ಜೈನ ಮಠದಿಂದ ನೀಡುವ 2025ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ, ಪ್ರೋ. ಪದ್ಮಾಶೇಖರ್ ಅವರಿಗೆ ವಾರ್ಷಿಕ ಮಹಾರಥೋತ್ಸವ ಮುನ್ನಾ ದಿನವಾದ ಮಾ.21 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ತಿಳಿಸಿದ್ದಾರೆ. ಈ ಪ್ರಶಸ್ತಿಯು 51 ಸಾವಿರ ರೂ. ನಗದು ಒಳಗೊಂಡಿದೆ. ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾ ಪರ ಹೋರಾಟಗಾರ್ತಿಯಾಗಿ ಪ್ರೊ. ಪದ್ಮಾ ಶೇಖರ್ ಬಹುಮುಖ ಸಾಧನೆ ಮಾಡಿದ್ದಾರೆ. ವಿಮರ್ಶೆ, ಸಂಶೋಧನೆ, ಕಾವ್ಯ, ಜೀವನಚರಿತ್ರೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪಿಎಚ್.ಡಿ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರಾಚೀನ ತಾಳೆಪತ್ರಗಳನ್ನು ಡಿಜಟಲೀಕರಣ ಮಾಡಲಾಗಿದೆ. ಈಗಾಗಲೇ ಇವರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಠಲಾನುಗ್ರಹ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಇವರು ಮೈಸೂರಿನಲ್ಲಿ ನೆಲೆಸಿರುತ್ತಾರೆ.

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

Article Image

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

ಸಮಾಜ ಸೇವಕಿ, ಮುನಿಗಳ ಚಾತುರ್ಮಾಸದ ರುವಾರಿ, ಪ್ರತಿಯೊಂದು ಮನೆ ಮನೆಯಲ್ಲಿ ಜಿನಭಜನೆಯ ಮುಖಾಂತರ ಮನೆ ಮಾತಾಗಿರುವ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್‌ರವರಿಗೆ ಬೆಂಗಳೂರಿನ ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ "ವೀರರಾಣಿ ಅಬ್ಬಕ್ಕ ಪ್ರಶಸ್ತಿ"ಯನ್ನು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ ಉತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

Article Image

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ (ಕೆ.ಆರ್.ನಗರ) ಸಂಸ್ಥೆಯು ತನ್ನ 40ನೇ ವಾಷಿ೯ಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದ ಅಂಗವಾಗಿ ಫೆ.23ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿನ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಭೂಮಿ ಕಲಾವಿದರು ಆಗಿರುವ ಡಾ. ಹೆಚ್.ಎ. ಪಾಶ್ವ೯ನಾಥ್ ಅವರಿಗೆ ಪ್ರೊ, ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಪ್ರದಾನಮಾಡಿ ಗೌರವಿಸಿದರು. ಇವರು‌ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.

ಹಂ.ಪ. ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

Article Image

ಹಂ.ಪ. ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

ಉಡುಪಿ, ಫೆ. 24: ಮಾಹೆ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡುವ ಟಿ. ವಿಮಲಾ ಪೈ ಪ್ರಾಯೋಜಿತ 2024ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ| ಹಂ.ಪ. ನಾಗರಾಜಯ್ಯ(ಹಂಪನಾ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲ. ರೂ., ಪಾರಿತೋಷಕ, ಪ್ರಶಸ್ತಿಪತ್ರ ಒಳಗೊಂಡಿದೆ. ಮಾ.23ರಂದು ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗದ ಬಿಡುಗಡೆ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿ ಸದಸ್ಯರಾದ ಡಾ| ತಾಳ್ತಜೆ ವಸಂತ ಕುಮಾರ್, ಡಾ| ಕೆ. ಚಿನ್ನಪ್ಪ ಗೌಡ, ಡಾ| ಪ್ರಭಾಕರ ಜೋಷಿ, ಡಾ| ಕಿಶೋರಿ ನಾಯಕ್‌, ಡಾ| ಎಸ್. ಪಾಡೀಗಾರ್ ಸಹಕರಿಸಿದ್ದಾರೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಪದವಿ ಪ್ರದಾನ

Article Image

ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಪದವಿ ಪ್ರದಾನ

ಜಮಖಂಡಿಯ ೧೦೦೮ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಮಂದಿರದ ಅರ್ಚಕರಾದ ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಜಿಂಜರ್ ವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಪಂಚಕಲ್ಯಾಣ ಪ್ರತಿಷ್ಠ ಮಹಾಮಹೋತ್ಸವದಲ್ಲಿ “ಸಾಧನ ರತ್ನ” ಪ್ರಶಸ್ತಿಯನ್ನು ಹಾಗೂ ಜೈನ್ ಇಂಡಿಯನ್ ಟಿ.ವಿ ವತಿಯಿಂದ “ಕರ್ನಾಟಕ ಪುರೋಹಿತ ರತ್ನ” ಎಂಬ ಪದವಿಯನ್ನು ನೀಡಿ ಗೌರವಿಸಲಾಗಿದೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ: ಪ್ರತಿಷ್ಠ ರತ್ನ, ಪ್ರತಿಷ್ಠ ಶಿರೋಮಣಿ, ಪ್ರತಿಷ್ಠ ಬಾಸ್ಕರ, ಪ್ರತಿಷ್ಠ ಪ್ರವೀಣ, ಪಂಡಿತರತ್ನ, ವಾಣಿಭೂಷಣ, ಪ್ರತಿಷ್ಠಾಚಾರ್ಯ.

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

Article Image

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

ಶ್ರೀ ಧ ಮಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಭಾರತ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯೂಷ್ ಸಚಿವರಾದ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಇವರಿಂದ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಇವರು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಹಾಗೂ ರತ್ನಶ್ರೀ ದಂಪತಿ ಪುತ್ರ. ಇವರು ಇದೇ ಕಾಲೇಜಿನಲ್ಲಿ ಎಮ್. ಡಿಗೆ (ಸ್ನಾತಕೋತ್ತರ ಪದವಿ) ಪ್ರವೇಶಾತಿಯನ್ನು ಪಡೆದಿದ್ದಾರೆ.

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

Article Image

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲಿಯೇ ಅತ್ಯಂತ ಅದ್ಬುತ ಪ್ರತಿಭಾವಂತ ಪುಟ್ಟ ಬಾಲಕ ಷಡ್ಜ ಹುಬ್ಬಳ್ಳಿಯಲ್ಲಿ ಎಜು ಸ್ಮಾರ್ಟ್ ಕೇರ್ "ಅಬ್ಯಾಕಸ್" ( ಅಂಕಗಣಿತದ ಕೌಶಲ್ಯ) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬೆಂಗಳೂರಿನಲ್ಲಿಯೂ ಪ್ರಥಮ ಬಹುಮಾನ ತನ್ನದಾಗಿರಿಸಿಕೊಂಡಿದ್ದಾನೆ. ಇದೀಗ ಮುಂಬೈಯಲ್ಲಿ ಕಳೆದ ವಾರ ನಡೆದ 17ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ಅಬ್ಯಾಕಸ್ ಮತ್ತು ಗ್ರೇಡಿಂಗ್ ಪರೀಕ್ಷೆಯಲ್ಲಿ "ಅಚೀವರ್ " ಪ್ರಶಸ್ತಿ ಪಡೆದ ಈ ಬಾಲಕ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ನ ಸದಸ್ಯರು ಧರ್ಮನುರಾಗಿಗಳೂ ಆದ ಶಿಲ್ಪಾ ವಿಜಯಕುಮಾರ ಕಾಶಿನ ಅವರ ಮೊಮ್ಮಗ, ಉಪನ್ಯಾಸಕಿ ಭಾಗ್ಯಶ್ರೀ ಮತ್ತು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ ಜೀವಂಧರ ಕಾಶಿನರವರ ಪುತ್ರ, ಪ್ರಭಾ ನಾಯಕ್ ಇವರು ಷಡ್ಜನಿಗೆ ಮಾರ್ಗದರ್ಶಕರಾಗಿ ಪ್ರೇರಣೆ ಪ್ರೋತ್ಸಾಹ ನೀಡಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

Article Image

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

ಇಂಡಿಯನ್ ವುಮೆನ್ ನೆಟ್‌ವಕ್‌೯ (ಸಿಐಐ-ಐಡಬ್ಲ್ಯುಎನ್) ಕರ್ನಾಟಕ, 2025-26ನೇ ಸಾಲಿನ ಅಧ್ಯಕ್ಷೆಯಾಗಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ ಪದ್ಮಿನಿ ಎಸ್. ನವಲಗೂಂದ ಅವರ ನೇಮಕವನ್ನು ಫೆಬ್ರವರಿ 5, 2025 ರಂದು ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಿದೆ. ಸ್ವೀಕಾರ ಭಾಷಣದಲ್ಲಿ, ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿ, ಮಹಿಳಾ ವೃತ್ತಿಪರರಿಗೆ ಬೆಂಬಲಾತ್ಮಕ ಪರಿಸರವನ್ನು ನಿರ್ಮಿಸಲು ತಮ್ಮ ಬದ್ಧತೆಯನ್ನು ವಿವರಿಸುತ್ತಾ, ಮುಂದಿನ ವರ್ಷದ ದೃಷ್ಟಿಕೋನವನ್ನು ಹಂಚಿಕೊಂಡರು. ಇವರು, ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ, ಪ್ರಸ್ತುತ ಬೋಶ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್‌ನಲ್ಲಿ ಉತ್ಪನ್ನ ಅನುಕೂಲತೆ ಅಧಿಕಾರಿ. ಡಿಟ್ರಾಯಿಟ್ನಲ್ಲಿ 2024ನೇ ಸಾಲಿನಲ್ಲಿ ಆಟೋಮೋಟಿವ್ ವುಮೆನ್ ಆಫ್ ದ ಇಯರ್ ಪ್ರಶಸ್ತಿಯನ್ನು ಪಡೆದಿರುವ ಪ್ರಥಮ ಭಾರತೀಯ ಮಹಿಳೆ. ಅವರು ಮಹಿಳಾ ನೆಟ್‌ವಕ್‌೯ಗೆ ಸಹಾಯ ಮಾಡುವ ಹಲವಾರು ಉಪಕ್ರಮಗಳನ್ನು ಚಲಾಯಿಸುವಲ್ಲಿ ವಿಶಾಲ ಅನುಭವವನ್ನು ಹೊಂದಿರುವ ನಾಯಕಿಯಾಗಿರುತ್ತಾರೆ.

ನಿತಿನ್ ಹೆಚ್.ಪಿ. ರವರಿಗೆ 'ಸಂಸ್ಕೃತಿ ಸಂರಕ್ಷಕ' ಗೌರವ

Article Image

ನಿತಿನ್ ಹೆಚ್.ಪಿ. ರವರಿಗೆ 'ಸಂಸ್ಕೃತಿ ಸಂರಕ್ಷಕ' ಗೌರವ

ಕೋಲ್ಕತಾ, ಡಿಸೆಂಬರ್ 30, 2024: ಐಟಿ ತಂತ್ರಜ್ಞ, ಜೈನ ಸಂಶೋಧಕ ಹಾಗೂ www.jainheritagecentres.com (ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ) ನ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತಿನ್ ಹೆಚ್.ಪಿ. ರವರ "ಜೈನಧರ್ಮದ ಸಂರಕ್ಷಣೆ ಮತ್ತು ಸಂವರ್ಧನೆ"ಯ ಕಾರ್ಯವನ್ನು ಗುರುತಿಸಿ, ಶ್ರೀ ಭಾರತವಾರ್ಷೀಯ ದಿಗಂಬರ ಜೈನ ತೀರ್ಥಸಂರಕ್ಷಿಣಿ ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗವು "ಸಂಸ್ಕೃತಿ ಸಂರಕ್ಷಕ" ಎಂಬ ಬಿರುದನ್ನು ನೀಡಿ ಗೌರವಿಸಿದೆ. ಕೋಲ್ಕತ್ತಾದ ಬಡಾ ಬಜಾರ್ ನ ಜೈನಭವನದಲ್ಲಿ 30 ಡಿಸೆಂಬರ್ 2024ರಂದು ನಡೆದ ವಿಶೇಷ ಸಮಾರಂಭದಲ್ಲಿ ಇವರನ್ನು ಸತ್ಕರಿಸಿ ಸನ್ಮಾನಿಸಲಾಯಿತು. ನಿತಿನ್ ರವರು ಕರ್ನಾಟಕ ವಲ್ಲದೇ ಭಾರತದ ಇತರ ರಾಜ್ಯಗಳ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ರಾಜ್ಯದ ಜೈನ ಪರಂಪರೆ ಕೇಂದ್ರಗಳಿಗೆ ಕ್ಷೇತ್ರಕಾರ್ಯವನ್ನು ಕೈಗೊಂಡು ಪಶ್ಚಿಮ ಬಂಗಾಳದಲ್ಲಿ ಜೈನಧರ್ಮದ ಕುರಿತು ಕಳೆದ ಎರಡು ವರ್ಷಗಳಿಂದ ವಿಶೇಷ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ದಿಗಂಬರ ಜೈನ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ರಾಜ್ ಕುಮಾರ್ ಸೇಠಿ, ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗದ ಪದಾಧಿಕಾರಿಗಳು ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯುವರಾಜ ಜೈನ್ ಅವರಿಗೆ ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ

Article Image

ಯುವರಾಜ ಜೈನ್ ಅವರಿಗೆ ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ

ಯುವರಾಜ ಜೈನ್ ಅವರಿಗೆ ಮಾನ್ಯತೆ ಪಡೆದ ಅನುದಾನ ರಹಿತ ಸಂಘ ಕರ್ನಾಟಕ (RECOGNISED UNAIDED PRIVAT SCHOOLS ASSOCIATION OF KARNATAKA) ರುಪ್ಸಾ ಇವರು ಕೊಡಮಾಡುವ 2024-25 ನೇ ಸಾಲಿನ 'ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ' ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಇವರಿಗೆ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ರಾಜ್ಯ, ರಾಷ್ಟ್ರದಲ್ಲಿ ಗುರುತಿಸುವಂತೆ ಅಮೋಘವಾದ ಸಾಧನೆಯನ್ನು ಶ್ರೀಯುತರು ಮಾಡಿದ್ದಾರೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕ್ರತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪ್ರಮಯಿ ಜೈನ್ ಆಯ್ಕೆ

Article Image

ಪ್ರಮಯಿ ಜೈನ್ ಆಯ್ಕೆ

ಪ್ರಮಯಿ ಜೈನ್, ಎಸ್‌ಡಿಎಂ ಕಾನೂನು ಕಾಲೇಜಿನ 2ನೇ ಬಿಬಿಎ, ಎಲ್‌ಎಲ್‌ಬಿ ವಿದ್ಯಾರ್ಥಿನಿ 2024-25ರ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ನೇಮಕ

Article Image

ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ನೇಮಕ

ಬೆಳ್ತಂಗಡಿ: ಕರ್ನಾಟಕ ಸರ್ಕಾರಿ ನಿವೃತ್ತರ ಸಂಘ ಬೆಂಗಳೂರು ಕೇಂದ್ರ ಸಂಘದ ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರನ್ನು ನೇಮಕಗೊಳಿಸಿದ್ದಾರೆ. ಡಾ. ಕೆ. ಜಯಕೀರ್ತಿ ಜೈನ್ ಕರ್ನಾಟಕ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ, 25 ವರ್ಷ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ಪಶು ವೈದ್ಯಕೀಯ ಪರಿವೀಕ್ಷಕರಾಗಿ, ಸಂಘದಲ್ಲಿ 35 ವರ್ಷ ಜಿಲ್ಲಾಧ್ಯಕ್ಷರಾಗಿ, ವೇಣೂರು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸರ್ಕಾರದಿಂದ ಸಮನ್ವಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಶ್ರೀಕ್ಷೇತ್ರ ಚಂದ್ರಪುರ, ಶಿಶಿಲ ಆಡಳಿತ ಮಂಡಳಿಯ ಸಂಚಾಲಕರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Article Image

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

ಮೂಡುಬಿದಿರೆ : ಮೂಡುಬಿದಿರೆ ಪೂನೆಚ್ಚಾರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಿತಿಯಿಂದ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ "ಸಿರಿಪುರ ಪ್ರಶಸ್ತಿ-2024"ನ್ನು ಎಕ್ಸಲೆಂಟ್ ವಿದ್ಯಾರ್ಥಿ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ ಅವರಿಗೆ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಅಮೋಘವಾದ ಸಾಧನೆಯನ್ನು ಶ್ರೀಯುತರು ಮಾಡಿದ್ದಾರೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

Article Image

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು ಇವರ ವತಿಯಿಂದ ಶಿಕ್ಷಕ ವೃತ್ತಿಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಸೇವೆಯನ್ನು ಪುರಸ್ಕರಿಸಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಮೊದಲು ಇವರಿಗೆ, "ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿ" "ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ", "ನಿಟ್ಟೆ ರೋಟರಿ ಸಂಸ್ಥೆಯ ನೇಶನ್ ಬಿಲ್ಡರ್ ಅವಾರ್ಡ್" ಲಭಿಸಿರುತ್ತದೆ.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

Article Image

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಶಿಕಾಂತ್ ವೈ ಆಯ್ಕೆಯಾಗಿದ್ದು ಸೆ.14 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು, ರಾಜ್ಯಾಧ್ಯಕ್ಷರಾದ ಎನ್.ಗೋಪಾಲ ಹಾಗೂ ಗಣ್ಯರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಇವರಿಗೆ 2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುತ್ತದೆ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

Article Image

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನವ ನಕ್ಷತ್ರ ಸನ್ಮಾನ 2024 ಗೌರವ ಪುರಸ್ಕಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿವಿ9 ಕನ್ನಡ ಸುದ್ದಿ ವಾಹಿನಿಯ 17ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Article Image

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಯೋಗ ಕ್ಷೇತ್ರದಲ್ಲಿ ಮಾಡಿದ ಉನ್ನತ ಸೇವೆ, ಸಾಧನೆಗಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ಏಶಿಯಾ ಪೆಸಿಫಿಕ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅ. 22 ರಂದು ಗುರುವಾರ ಕೊಲೊಂಬೊದಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

First Previous

Showing 2 of 3 pages

Next Last