Article Image

ದಶಲಕ್ಷಣ ಪರ್ವ

Article Image

ದಶಲಕ್ಷಣ ಪರ್ವ

ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ (ರಿ.) ಹಿರಿಯಂಗಡಿ, ಕಾರ್ಕಳದಲ್ಲಿ ದಿನಾಂಕ 28.08.2025ನೇ ಗುರುವಾರದಿಂದ 06.09.2025ನೇ ಶನಿವಾರದ ಪರ್ಯಂತ ಆಶ್ರಮದ ಜಿನ ಮಂದಿರದ ಪ್ರಾಂಗಣದಲ್ಲಿ ಪ್ರತಿನಿತ್ಯ ಸಂಜೆ ಗಂಟೆ 6.00ರಿಂದ ಪರಮಪೂಜ್ಯ 108 ಮುನಿಶ್ರೀ ಮಹಿಮಾಸಾಗರ ಮುನಿ ಮಹಾರಾಜರ ಆಶೀರ್ವಾದ ಪೂರ್ವಕ ಹಾಗೂ ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವ ಸಮಾರಂಭವು ಪೂಜೆ, ಭಜನೆ ಉಪನ್ಯಾಸ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಿ.ಸೂ. ಈ ಪುಣ್ಯ ದಿನಗಳಲ್ಲಿ ತಾವು ನೀಡಿದ ಅಮೂಲ್ಯ ದಾನವನ್ನು ಸ್ವೀಕರಿಸಲಾಗುವುದು.

ಕಾರ್ಕಳ ಸೀಮೆಯ ಜೈನ ಸಮಾಜದಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ

Article Image

ಕಾರ್ಕಳ ಸೀಮೆಯ ಜೈನ ಸಮಾಜದಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ

ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳ ಚರ್ತುವಿಧ ದಾನ ಪರಂಪರೆಯೊಂದಿಗೆ ಇಂದು ವಿಶ್ವವಿಖ್ಯಾತವಾಗಿದೆ. ಕ್ಷುಲ್ಲಕ ಕಾರಣದಿಂದ, ಮಾಧ್ಯಮಗಳಲ್ಲಿ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖವಾಗಿದೆ. ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಹೆಗ್ಗಡೆಯವರ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಕ್ರಿಯ ಸಹಕಾರ ನೀಡುವುದು ಸಮಗ್ರ ಜೈನಸಮಾಜದ ಕರ್ತವ್ಯವಾಗಿದೆ ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಕಾರ್ಕಳ ಸೀಮೆಯ ಜೈನ ಬಾಂಧವರೊಂದಿಗೆ ಶನಿವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರನ್ನು ಗೌರವಿಸಿ ಶುಭ ಹಾರೈಸಿದರು. ಕೆಸರಾದ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಪಪ್ರಚಾರ, ಆರೋಪಗಳಲೆಲ್ಲ ದೂರವಾಗಲಿ. ಹೆಗ್ಗಡೆಯವರಿಗೆ ಎಲ್ಲಾ ದೈವ-ದೇವರುಗಳು ದೀರ್ಘಾಯುರಾರೋಗ್ಯವನ್ನಿತ್ತು ಇನ್ನಷ್ಟು ಲೋಕಕಲ್ಯಾಣ ಕಾರ್ಯಗಳನ್ನು ಮಾಡುವಂತೆ ಹರಸಲೆಂದು ಸ್ವಾಮೀಜಿ ಪ್ರಾರ್ಥಿಸಿದರು. ಕಾರ್ಕಳ ಸೀಮೆಯ ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸ್ವಾಮೀಜಿಯವರು ಕಾರ್ಕಳ ಮಠದ ಬಸದಿಯ ವಿಶೇಷ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿ ಶುಭ ಹಾರೈಸಿದರು. ಕಾರ್ಕಳದ ಡಾ. ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಹೆಗ್ಗಡೆಯವರ ಜೊತೆ ನಾವೆಲ್ಲ ಸದಾ ಪೂರ್ಣ ಬೆಂಬಲ ನೀಡಲು ಸಿದ್ಧರು, ಬದ್ಧರು ಎಂದು ಅವರು ಭರವಸೆ ನೀಡಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಶಿರ್ತಾಡಿಯ ಎಸ್.ಡಿ. ಸಂಪತ್ ಸಾಮ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್, ಮಂಗಳೂರು, ಕುಲದೀಪ್, ಚೌಟರ ಅರಮನೆ, ಮೂಡಬಿದ್ರೆ, ಅಂಡಾರು ಮಹಾವೀರ ಹೆಗ್ಡೆ, ಅನಂತ್ರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್, ಕಾರ್ಕಳ, ನೇಮಿರಾಜ ಆರಿಗಾ ಮೊದಲಾದವರು ಇದ್ದರು. ತಮ್ಮ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಮಾಜ ಬಾಂಧವರ ಭಕ್ತಿ-ಗೌರವ, ಅಭಿಮಾನ ಸದಾ ಇದೇ ರೀತಿ ಇರಲೆಂದು ಹಾರೈಸಿ, ಹೆಗ್ಗಡೆಯವರು ಎಲ್ಲರಿಗೂ ಶುಭ ಹಾರೈಸಿದರು. ಕಾರ್ಕಳ ಸೀಮೆಯಿಂದ ಸುಮಾರು ಮುನ್ನೂರು ಮಂದಿ ಶ್ರಾವಕರು-ಶ್ರಾವಕಿಯರು ಆಗಮಿಸಿದರು.

ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಪದಗ್ರಹಣ, ಆಟಿಡೊರ ತಮ್ಮನದ ಲೇಸ್

Article Image

ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಪದಗ್ರಹಣ, ಆಟಿಡೊರ ತಮ್ಮನದ ಲೇಸ್

ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ವತಿಯಿಂದ ಜೈನ್ ಮಿಲನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಆಟಿಡೂರ ತಮ್ಮನದ ಲೇಸ್ ಕಾರ್ಯಕ್ರಮ ಭಾನುವಾರ ಸಂಜೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಸುಮಾರು 65ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಅತಿಥಿಗಳು ಹಾಗೂ ಜೈನಬಾಂಧವರು ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್ ಉದ್ಘಾಟಿಸಿದರು. ಪದಪ್ರದಾನದ ಪೌರೋಹಿತ್ಯವನ್ನು ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ ಜೈನ್ ಪಂಜಿಕಲ್ಲು ವಹಿಸಿದ್ದರು. ಅಧ್ಯಕ್ಷತೆಯನ್ನು ಜೈನ್ ಮಿಲನ್ ಬಂಟ್ವಾಳ ಅಧ್ಯಕ್ಷ ಮಧ್ವರಾಜ್ ಜೈನ್ ಪಂಜಾಲು ವಹಿಸಿದ್ದರು. ನೂತನ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಾಜೇಂದ್ರ ಜೈನ್, ಕಾರ್ಯದರ್ಶಿಯಾಗಿ ಜಯಕೀರ್ತಿ ವೈ.ಎಸ್., ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಬಸ್ತಿಪಡ್ಡು, ಉಪಾಧ್ಯಕ್ಷರಾಗಿ ತೇಜ್ ಪಾಲ್ ಜೈನ್, ಡಾ. ಸೀಮಾ ಸುದೀಪ್, ಅರ್ಕಕೀರ್ತಿ ಹೆಗ್ಡೆ, ಹರ್ಷರಾಜ್ ಬಲ್ಲಾಳ್, ವಿನಯಚಂದ್ರ ಜೈನ್, ಜೊತೆ ಕಾರ್ಯದರ್ಶಿಗಳಾಗಿ ಹರ್ಷೇಂದ್ರ ಹೆಗ್ಡೆ, ಸಂಧ್ಯಾ ಸಿದ್ಧಕಟ್ಟೆ, ಚಂದನಾ ಬೃಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸನ್ಮತಿ ಜಯಕೀರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಾಂಸ್ ಜೈನ್ ಸಹಿತ ಸಂಚಾಲಕರ ತಂಡ, ಕಾರ್ಯಕಾರಿ ಸಮಿತಿಯ ಅಧಿಕಾರ ಸ್ವೀಕರಿಸಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಡ್ ಉಳಿಪ್ಪಾಡಿ ಮಾತನಾಡಿ, ಜೈನರು ಸಮಾಜದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುವುದರ ಮೂಲಕ ಗೌರವಾನ್ವಿತ ಸ್ಥಾನಮಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಶುಭ ಹಾರೈಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸರ್ವ ಸಮಾಜದ ಪ್ರೀತಿಗೆ ಮಾನ್ಯರಾದ ಜೈನರು ಸಾಮಾಜಿಕವಾಗಿ ಗೌರವಾನ್ವಿತರಾದ ಸ್ಥಾನದಲ್ಲಿದ್ದಾರೆ. ಜೈನ ಆಹಾರ ಪದ್ಧತಿಯಿಂದ ತೊಡಗಿ, ಮುನಿಗಳು ನೀಡಿದ ಸಂದೇಶಗಳು ಪ್ರಸ್ತುತವಾಗಿವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅಶೋಕ್ ಜೈನ್ ಮಾತನಾಡಿ, ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ಕುರಿತು ವಿವರಿಸಿದರು. ಈ ಸಂದರ್ಭ ಹಿರಿಯರನ್ನು ಗೌರವಿಸಲಾಯಿತು ನೂತನ ಅಧ್ಯಕ್ಷ ರಾಜೇಂದ್ರ ಜೈನ್ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ನಿರ್ದೇಶಕ ಪ್ರಮೋದ್ ಕುಮಾರ್ ವೇಣೂರು ಶುಭ ಹಾರೈಸಿದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜಯಕೀರ್ತಿ ವೈ.ಎಸ್. ವಂದಿಸಿದರು.

ಮೂಡುಬಿದಿರೆಯಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಯೋಜನೆ, ತರಬೇತಿ, ಚರ್ಚಾ ಗೋಷ್ಠಿ

Article Image

ಮೂಡುಬಿದಿರೆಯಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಯೋಜನೆ, ತರಬೇತಿ, ಚರ್ಚಾ ಗೋಷ್ಠಿ

ಮಂಗಳೂರು ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಜನ್ಮಯ ರೈತ ಉತ್ಪಾದಕರ ಕಂಪನಿ, ಮೂಡುಬಿದರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಗಳ ಜಂಟಿ ಸಹಭಾಗಿತ್ವದಲ್ಲಿ ತೋಟಗಾರಿಕೆ ಪಿತಾಮಹ ದಿ. ಡಾ. ಎಂ.ಎಚ್. ಮರಿಗೌಡ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಬೆಳೆಗಳಲ್ಲಿ ಸಂಸ್ಕರಣೆ, ಯೋಜನೆ, ತರಬೇತಿ ಹಾಗೂ ಚರ್ಚಾ ಗೋಷ್ಠಿ ಆಗಸ್ಟ್ 8ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲ್ಪವೃಕ್ಷ ಕ್ಕೆ ನೀರು ಎರೆದು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಕೃಷಿಕರಿಗೆ ನಮ್ಮ ಸೊಸೈಟಿ ಉತ್ತೇಜನವನ್ನು ನೀಡುತ್ತಿದೆ ಆ ಎಲ್ಲಾ ಸೌಲಭ್ಯಗಳನ್ನು ಕೃಷಿಕರು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ. ಅವರು ತೋಟಗಾರಿಮೋವಾಬಕೆ ಬೆಳೆಗಳ ಸಂಸ್ಕರಣೆ, ಯೋಜನೆಗಳ ಬಗ್ಗೆ ತರಬೇತಿಯನ್ನು ನೀಡಿದರು. ಆರಂಭದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಹಿರಿಯ ಸದಸ್ಯರಾದ ರಾಜವಮ೯ ಬೈಲಂಗಡಿಯವರು ಪ್ರಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಂಸಿಎಸ್ ಬ್ಯಾಂಕಿನ ಕಾಯ೯ನಿವಾಕರಾದ ರಘುವೀರ್ ಕಾಮತ್, ಕೃಷಿ ವಿಚಾರ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತಜನ್ಯ ಸಂಸ್ಥೆಯ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್, ಹಾಜರಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ. ಅವರು ಸ್ವಾಗತಿಸಿ ವಂದಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ವಯೋನಿವೃತಿ

Article Image

ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ವಯೋನಿವೃತಿ

ವೇಣೂರು ಪಶು ಚಿಕಿತ್ಸಾಲಯದ ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ಇವರು 39 ವರ್ಷ ಸರ್ಕಾರಿ ಸೇವೆ ನಿರ್ವಹಿಸಿ ವಯೋನಿವೃತಿಯಾದ ಸಂದರ್ಭದಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು. ‌ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಪನಿರ್ದೇಶಕರಾದ ಡಾ. ಅರುಣ ಕುಮಾರ ಶೆಟ್ಟಿ ವಹಿಸಿದ್ದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಇವರು ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ. ರವಿಕುಮಾರ್, ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಜಯಕೀರ್ತಿ ಜೈನ್, ಬೆಳ್ತಂಗಡಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್, ಪಶು ವೈದ್ಯಕೀಯ ಪರೀಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಡಾ| ಸಂತೋಷ್ ಗೌಡ, ಡಾ| ಯತೀಶ್, ಡಾ| ವಿನಯ್ ಕುಮಾರ್, ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀಧರ್ ಶೆಟ್ಟಿ, ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು., ಜಾನುವಾರು ಅಧಿಕಾರಿಗಳವರಾದ ನಾಗಶಯನ, ಪ್ರಶಾಂತ್ ಕುಮಾರ್ ಮತ್ತು ಪಶು ವೈದ್ಯ ಪರೀಕ್ಷಕ ಸದಾಶಿವ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮಹಿಳೆಯರ ಸೇವಾ ಸಾಧನೆ ಸ್ತುತ್ಯರ್ಹ- ಅನಿತಾ ಸುರೇಂದ್ರ ಕುಮಾರ್

Article Image

ಮಹಿಳೆಯರ ಸೇವಾ ಸಾಧನೆ ಸ್ತುತ್ಯರ್ಹ- ಅನಿತಾ ಸುರೇಂದ್ರ ಕುಮಾರ್

ಮೂಡುಬಿದಿರೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮತ್ತು ಸಾಧನೆಯ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ. ಇಂತಹ ಸೇವೆ, ಸಾಧನೆಗಳು ನಿರಂತರ ಮುಂದುವರಿಯಲಿ ಎಂದು ಭಾರತೀಯ ಜೈನ್ ಮಿಲನ್ ನ ಉಪಾಧ್ಯಕ್ಷೆಯೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ನುಡಿದರು. ಜು. 21ರಂದು ಸಂಜೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ನ್ಯಾಯವಾದಿ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ ಪಿ. ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮೂಡುಬಿದಿರೆಯ ಇನ್ನರ್ ವೀಲ್ ಕ್ಲಬ್ ಕಳೆದ 35 ವರ್ಷಗಳಿಂದ ಗೈದಿರುವ ಸೇವೆ ಸಾಧನೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ವಿದ್ಯಾಗಿರಿ, ನಿಶ್ಮಿತಾ ಟವರ್ ಬಳಿಯ ಬಸ್ ತಂಗುದಾಣ, ಇನ್ನರ್ ವೀಲ್ ಕ್ಲಬ್ ವೃತ್ತಗಳು ಮೂಡುಬಿದಿರೆಯಲ್ಲಿ ಕ್ಲಬ್ ಹಮ್ಮಿಕೊಂಡಿರುವ ಸೇವೆಯ ಪ್ರತೀಕವಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ಲಬ್‌ನ ಎಲ್ಲಾ ಹಿರಿಯ ಸದಸ್ಯೆಯರು ಅಭಿನಂದನೀಯರು ಎಂದು ನುಡಿದರು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಉಪಾಧ್ಯಕ್ಷೆ ರಜನಿ ಭಟ್ ಅವರು ಮಾತನಾಡಿ ಒಂದು ಹೆಜ್ಜೆ ಮುಂದೆ ಹೋಗಿ ಮಾದರಿ ನಾಯಕತ್ವ ಈ ವರ್ಷ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಕ್ಯವಾಗಿದ್ದು ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಶ್ವೇತಾ ಜೈನ್ ಒಂದು ಹೆಜ್ಜೆ ಮುಂದೆ ಹೋಗಿ 33 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹಗಡೆಯವರು ಮಾತನಾಡಿ ಸ್ನೇಹ ಮತ್ತು ಸೇವೆ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಗಿದ್ದು ಈ ಆಶಯದೊಂದಿಗೆ ನಡೆಯುವ ಕ್ಲಬ್‌ನ ಎಲ್ಲಾ ಚಟುವಟಿಕೆಗಳಿಗೆ ಪೂರ್ಣ ಬೆಂಬಲ ನೀಡುವ ಭರವಸೆಯಿತ್ತರು. ನೂತನ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ ಕ್ಲಬ್‌ನ ಹಿರಿಯ ಸದಸ್ಯೆಯರಾದ ಶಾಲಿನಿ ನಾಯಕ್, ಜಯಶ್ರೀ ಅಮರನಾಥ ಶೆಟ್ಟಿ, ಪ್ರಕಾಶಿನಿ ಹೆಗ್ಡೆ ಮುಂತಾದವರ ಪಾರದರ್ಶಕ ನಾಯಕತ್ವ ತಮಗೆ ಮಾದರಿಯಾಗಿದ್ದು, ತಮ್ಮ ಕಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ವಕೀಲ ವೃತ್ತಿಯನ್ನು ಮುಂದುವರಿಸಿ, ಕ್ಲಬ್‌ ಮುಖಾಂತರ ಹಮ್ಮಿಕೊಳ್ಳುವ ಎಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಭರವಸೆಯಿತ್ತರು. ಸೇವಾ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಕುಸುಮಾ ಅವರಿಗೆ ರೂ. 15 ಸಾವಿರ ಸಹಾಯಧನ, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರೂ. 10 ಸಾವಿರದ ಪುಸ್ತಕಗಳು, ಮೂಡುಬಿದಿರೆ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 10 ಸಾವಿರ ಕೊಡುಗೆ ಹಾಗೂ ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ಹಸಿ ಮತ್ತು ಒಣ ಕಸ ಸಂಗ್ರಹಣಾ ವ್ಯವಸ್ಥೆಗೆ ರೂ. 5ಸಾವಿರ ಮೌಲ್ಯದ ಸಾಮಗ್ರಿ ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಸಂಪಾದಕಿ ದೀಪಾ ಭಂಡಾರಿ, ಐ.ಎಸ್.ಒ. ಸಹನಾ ಭಟ್ ಉಪಸ್ಥಿತರಿದ್ದರು. ಬಿಂದಿಯಾ ಶೆಟ್ಟಿ ಸ್ವಾಗತಿಸಿದರು. ಅನಿತಾ ಪ. ಶೆಟ್ಟಿ ಸೇವಾ ಕಾರ್ಯಗಳ ವಿವರ ನೀಡಿದರು. ಅಪೇಕ್ಷಾ ಪೂರ್ಣಚಂದ್ರ ಜೈನ್ ಪ್ರಾರ್ಥಿಸಿದರು. ತರೀನಾ ಪಿಂಟೋ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿಶ್ಮಿತಾ ನಾಗರಾಜ್ ವಂದಿಸಿದರು.

ಮೂಡುಬಿದಿರೆ: ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ

Article Image

ಮೂಡುಬಿದಿರೆ: ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ

ಧರ್ಮ ಬಂಧು, ಶ್ರೀ ದಿಗಂಬರ ಜೈನ ಮಠದಲ್ಲಿ ಪ.ಪೂ ಆಚಾರ್ಯ ೧0೮ ಗುಲಾಬ್ ಭೂಷಣ ಮುನಿ ಮಹಾರಾಜ್ ಉಪಸ್ಥಿತಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ ಗಂಟೆ 2.00 ರಿಂದ 20.07.2025 ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ ಜರುಗಿತು. ಆಚಾರ್ಯರ ಉಪಸ್ಥಿತಿಯಲ್ಲಿ ಪ್ರವಚನ ನೀಡಿದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಪ್ರತಿ ಸಂಸಾರಿ ಜೀವಿಗಳು ದರ್ಶನಾವರಣಿಯ ಜ್ಞಾನಾವರಣಿಯ ವೇದನಿಯ, ಮೋಹನೀಯ, ಆಯು, ನಾಮ,ಗೋತ್ರ ಅಂತರಾಯ ಎಂಬ ಎಂಟು ಕರ್ಮಗಳನ್ನು ನಾಶ ಮಾಡ ದ ಹೊರತು ಮುಕ್ತಿ ಸಿಗದು ಮುಕ್ತಿ ಸಿಗಲು ಉತ್ತಮ ಮನಸ್ಸು ರತ್ನತ್ರಯ ಅವಲಂಬನೆ ಮುಖ್ಯ ಇಂದಿನ ಆರಾಧನೆ ಮೂಲ ಎಂಟು ಕರ್ಮ ದ ಭೇದ ಗಳಾದ 148 ಕರ್ಮ ನಾಶ ಪಡಿಸಿದ ಸಿದ್ದ ಭಗವಂತರ ಗುಣಗಾನ ಎಂದು ಆಶೀರ್ವಾದ ನೀಡಿದರು ಬಳಿಕ ಆಚಾರ್ಯರ ಸ್ವಾಮೀಜಿ, ಗಳ ಪಾದಪೂಜೆ, ಆರತಿ ಜರುಗಿತು.

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

Article Image

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

ಮೂಡಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ನಾಳೆ (ಜು.20) ಪ.ಪೂ ಆಚಾರ್ಯ ೧0೮ ಗುಲಾಬ್ ಭೂಷಣ ಮುನಿ ಮಹಾರಾಜ್‌ರ ಸಾನ್ನಿಧ್ಯದಲ್ಲಿ, ಜಗದ್ಗುರು ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 2.00 ರಿಂದ ವಿಶೇಷ ಅಭಿಷೇಕ ಕರ್ಮ ದಹನ ಆರಾಧನೆ, ಆಚಾರ್ಯರ ಪ್ರವಚನ, ಸ್ವಾಮೀಜಿಗಳವರ ಆಶೀರ್ವಚನ ಆಚಾರ್ಯರ ಪಾದಪೂಜೆ, ಆರತಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಲಿದೆ.

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

Article Image

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಜು. 13ರಂದು ನಡೆಯಿತು. ಸಭಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಭ| ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಮನಾಜಿ ಡಿ. ಅಧಿಕಾರಿ ಹಾಗೂ ಮೂಡಬಿದ್ರಿ ಸರ್ವಮಂಗಳ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಮಂಜುಳಾ ಯಶೋಧರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷರಾಗಿ ಸುನೀತಾ ಶಾಂತಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ದೀಪಶ್ರೀ ಜೈನ್ ಮತ್ತು ಕೋಶಾಧಿಕಾರಿಯಾಗಿ ಸುಕನ್ಯ ಬಲ್ಲಾಳ್ ಆಯ್ಕೆಯಾದರು. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ನಿರ್ದೇಶಕರಾದ ಸರೋಜ ಗುಣಪಾಲ್ ಜೈನ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್. ಹೆಗ್ಡೆ ಹಾಗೂ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು. ವಾರ್ಷಿಕ ಗತ ಸಭೆಯ ವರದಿಯನ್ನು ನಿರ್ಗಮಿತ ಕಾರ್ಯದರ್ಶಿಗಳಾದ ಆಶಾಲತಾ ಮಂಡಿಸಿದರು. ಹಾಗೆಯೇ ನಿರ್ಗಮಿತ ಕೋಶಾಧಿಕಾರಿ ವಾಣಿ ವೃಷಭರಾಜ್ ಲೆಕ್ಕ ಪತ್ರ ಮಂಡಿಸಿದರು. ನಿರ್ಗಮಿತ ಅಧ್ಯಕ್ಷರಾದ ಸರೋಜಾ ಗುಣಪಾಲ್ ಜೈನ್ ನೂತನ ಅಧ್ಯಕ್ಷರಾದ ಸುನೀತಾ ಶಾಂತಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದ್ಮಲತಾ ಮತ್ತು ಸುನೀತಾ ಬಲ್ಲಾಳ್ ಪ್ರಾರ್ಥಿಸಿ, ನಿರ್ಗಮಿತ ಜತೆ ಕಾರ್ಯದಶಿಗಳಾದ ಮಮತಾ ಪ್ರಸಾದ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಗಳಾದ ದೀಪಶ್ರೀ ಜೈನ್ ಧನ್ಯವಾದವಿತ್ತರು. ಸಂಧ್ಯಾ ಸುಕುಮಾರ್, ಆಶಾಲತಾ ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

Article Image

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

ತೋವಿನಕೆರೆ: ಗ್ರಾಮದ ಚಂದ್ರನಾಥ ದೇವಾಲಯದಲ್ಲಿ ದಿಗಂಬರ ಜೈನ ಮುನಿ ಪಾಯಸಾಗರ ಮುನಿ ಚಾತುರ್ಮಾಸ ಕೈಗೊಂಡಿದ್ದು, ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಜುಲೈ 14ರಿಂದ ಇಲ್ಲಿ ಚಾತುರ್ಮಾಸ ಆಚರಣೆ ಕೈಗೊಂಡಿದ್ದಾರೆ. ಅಕ್ಟೋಬರ್ 21ರವರೆಗೆ ಮುಂದುವರೆಯುತ್ತದೆ. 20ರಂದು ಮಂಗಳ ಕಳಸ ಪ್ರತಿಷ್ಠಾಪನೆ ಸಲುವಾಗಿ ವಿಶೇಷ ಸಮಾರಂಭ ದೇವಾಲಯದ ಅವರಣದಲ್ಲಿ ನಡೆಯುತ್ತದೆ ಎಂದು ಚಂದ್ರನಾಥ ಸ್ವಾಮಿ ದಿಗಂಬರ ಜೈನ ಸಂಘದವರು ತಿಳಿಸಿದ್ದಾರೆ. ಪ್ರತಿ ದಿನ ಸಂಜೆ 6ರಿಂದ ಮುನಿಗಳಿಂದ ಉಪನ್ಯಾಸ ಹಾಗೂ ಭಕ್ತರಿಂದ ಅರತಿ ಕಾರ್ಯಕ್ರಮ ನಡೆಯುತ್ತದೆ.

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

ಚಿಕ್ಕಮಗಳೂರು: ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರ ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತೀ ಭಾನುವಾರ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಪೂಜಾ ವಿವರ ಬೆಳಿಗ್ಗೆ 8-00 ಕ್ಕೆ : ಜಿನೇಶ್ವರರ ಪಂಚಾಮೃತ ಅಭಿಷೇಕ, 09-30 ಕ್ಕೆ : ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪಂಚಾಮೃತ ಅಭಿಷೇಕ ಮತ್ತು ಆರಾಧನೆ, ಸಂಜೆ 6-30 ಕ್ಕೆ : ಅಷ್ಠಾವದಾನ ಸೇವೆ, ಷೋಡಶೋಪಚಾರ ಪೂಜೆ, 7-30 ಕ್ಕೆ : ಮಹಾಮಂಗಳಾರತಿ ನಡೆಯಲಿದೆ.

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

Article Image

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

ಕುಪ್ಪೆ ಪದವು:- ಅನಂತ ಪಾರ್ಶ್ವ ಜೈನ್ ಮಿಲನಿನ ಪದಗ್ರಹಣ ಮತ್ತು ನಮ್ಮ ಮಿಲನ ಸದಸ್ಯರಾದ ಅಜಿತ್ ಕುಮಾರ್ ಜೈನ್ ರವರು ಸಾರ್ವಜನಿಕರಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿದರು, ಮಂಗಳೂರು ವಲಯ -8 ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್‌ ಜೈನ್‌ರವರು ಉದ್ಘಾಟಿಸಿದರು. ಅನಂತ್ ರಾಜ ಸಭಾಭವನದಲ್ಲಿ ದಿನಾಂಕ 29-6-2025 ಸಂಜೆ 3 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಿತು. ಜಯರಾಜ್ ಕಂಬಳಿ, ವಲಯ ನಿರ್ದೇಶಕರು ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಮಾಡಿದರು. ಸುದರ್ಶನ್ ಜೈನ್, ಉಪಾಧ್ಯಕ್ಷರು ಮಂಗಳೂರು ವಲಯ-8. ಕುಪ್ಪೆಪದ ಜೈನ್ ಮಿಲನ್ ಸಣ್ಣದಾದರು ಅಚ್ಚುಕಟ್ಟಾಗಿ ಎಲ್ಲಾ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಾ ಒಳ್ಳೆ ಹೆಸರನ್ನು ಗಳಿಸಿದ್ದಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪುಷ್ಪರಾಜ್ ಜೈನ್, ಸುಭಾಷ್ ಚಂದ್ರ ಜೈನ್, ಶ್ವೇತಾ ಜೈನ್, ಡಾ। ಸುದೀಪ್ ಜೈನ್, ಭೋಜರಾಜ್ ಜೈನ್, ಅಧ್ಯಕ್ಷ ಸ್ವರ್ಣ ಲತಾ ಅಜಿತ್, ಹರ್ಷ ಲತಾ, ವನಿತಾ ಭೋಜರಾಜ ಜೈನ ಹಾಗೂ ಪದಗ್ರಹಣ ಸ್ವೀಕರಿಸಿದ ಧೀರಜ್ ಜೈನ ಮತ್ತು ಕಾರ್ತಿಕ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಿತಾ ಪ್ರಾರ್ಥನೆ ಮಾಡಿದರು. ಅನ್ವಿತ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಅದ್ವಿತ ಮತ್ತು ಅಶ್ವಿತ ಶಾಂತಿ ಮಂತ್ರವನ್ನು ಪಟಿಸಿ ಸಭೆಯನ್ನು ಮುಕ್ತಾಯ ಗೊಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

Article Image

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

ತಾ. 22.06.2025ನೇ ಭಾನುವಾರ ಜೈನ್ ಮಿಲನ್ ಪುತ್ತೂರು ಶಾಖೆ ಮತ್ತು ಜೈನ್ ಮಿಲನ್ ಇಚ್ಲಂಪಾಡಿ ಶಾಖೆ ಜಂಟಿಯಾಗಿ ಪುತ್ತೂರು ಭ. ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪುತ್ತೂರು ಮಿಲನ್ ಅತಿಥೇಯತ್ವದಲ್ಲಿ ಜರಗಿತು. ಜಂಟಿ ಮಿಲನ್ ಸಭೆಯು ಸತೀಶ್ ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ವಲಯ ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ, ಮುಖ್ಯ ಅತಿಥಿಯಾಗಿ ಡಾ| ಮಹಾವೀರ್ ಜೈನ್, ಡಾ| ಅಶೋಕ್ ಪಡಿವಾಳ್, ಅಜಿತ್ ಪ್ರಸಾದ್ ರೈ, ಕಾರ‍್ಯದರ್ಶಿ ರಾಜೇಶ್ ಕುಮಾರ್ ವಿ. ಇಚ್ಲಂಪಾಡಿ ಜೈನ್ ಮಿಲನ್ ಅಧ್ಯಕ್ಷರು ಹೇಮಾವತಿ ಮಹವೀರ್, ಕಾರ‍್ಯದರ್ಶಿ ದೀವಿಕ ರವೀಂದ್ರ ಜೈನ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಬಸದಿ ದರ್ಶನ ಕ್ರಮ ಮತ್ತು ಮಹತ್ವವನ್ನು ಅರ್ಥಪೂರ್ಣವಾಗಿ ಸಭೆಗೆ ತಿಳಿಸಿದರು. ಪುತ್ತೂರು ಜೈನ ಮಿಲನ್ ವತಿಯಿಂದ ಡಾಕ್ಟರೇಟ್ ಪದವಿ ಮಹಾವೀರ್ ಜೈನ್ ಇಚ್ಲಂಪಾಡಿ ಹಾಗೂ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು. ಪುತ್ತೂರು ಹಾಗೂ ಇಚ್ಲಂಪಾಡಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮದುವೆ ದಿನ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ‍್ಯಕ್ರಮವು ಬೆಳಿಗ್ಗೆ 10ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮದ್ಯಾಹ್ನ 2.00 ಗಂಟೆಗೆ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

Article Image

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಹುಬ್ಬಳ್ಳಿ- ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠ ಸಲಹಾ ಸಮಿತಿ ಇವುಗಳ ಸಂಯುಕ್ತ ಸಹಯೋಗದಲ್ಲಿ ಮಾಸಿಕ ಉಪನ್ಯಾಸ ಮಾಲಿಕೆ ದಿವ್ಯವಾಣಿ ೪ ಜೈನ ದರ್ಶನದಲ್ಲಿ ಅನೇಕಾಂತವಾದಕುರಿತು ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಚಾರ್ಯ ಡಾ. ಭರಮಪ್ಪ ಭಾವಿ ಇವರಿಂದ ಉಪನ್ಯಾಸ ಜರುಗಿತು. ಇದೇ ಸಂಧರ್ಭದಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಗೆ ನೂತನವಾಗಿ ಇತ್ತೀಚಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಹಾಗೂ ಧಾರವಾಡ ಜೈನ ಮಿಲನ್ ಅಧ್ಯಕ್ಷರಾಗಿ ಆಯ್ಕೆಯಾದ ಜಿನ್ನಪ್ಪ ಕುಂದಗೋಳ ಇವರನ್ನು ನವನಗರದ ನವಗ್ರಹ ಸಭಾ ಭವನದಲ್ಲಿ ಗೌರವ ಸನ್ಮಾನಮಾಡಿ ಅಭಿನಂದಿಸಲಾಯಿತು. ನವನಗರದ ಅಲ್ಪಸಂಖ್ಯಾತ ಜೈನ ಸೇವಾ ಸಂಘ ಈ ಸಂಸ್ಥೆಯೂ ಕೂಡಾ ಸನ್ಮಾನಿಸಿ ಗೌರವಿಸಿದರು. ಐದು ದಶಕಗಳಿಂದ ಹುಬ್ಬಳ್ಳಿಯಲ್ಲಿ ಸಮಾಜದ ಪ್ರತಿಷ್ಠಿತ ಈ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದೆ, ಪ್ರಸಕ್ತ ಅವಧಿಯಲ್ಲಿ ಅಧ್ಯಕ್ಷರಾದ ಆರ್ ಟಿ ತವನಪ್ಪನವರ, ಉಪಾಧ್ಯಕ್ಷರಾದ ಆರ್ ಟಿ ಅಣ್ಣಿಗೇರಿ ಕಾರ್ಯದರ್ಶಿ ವಿಮಲ ತಾಳಿಕೋಟಿ ಹಾಗೂ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದು ಇವರ ಅವಧಿಯಲ್ಲಿ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಇನ್ನು ಹೆಚ್ಚು ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿ ಮತ್ತು ಧಾರವಾಡ ಜೈನ ಮಿಲನ್ ಜೈನ ಸಂಸ್ಕೃತಿ ಪರಂಪರೆಗೆ ಧರ್ಮಪ್ರಭಾವನೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿ ಸತ್ಕರಿಸಲಾಯಿತು. ಸತ್ಕಾರ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಜಿನದತ್ತ ಹಡಗಲಿ, ಉಪಾಧ್ಯಕ್ಷ ಡಾ. ಭರಮಪ್ಪ ಭಾವಿ, ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ, ನಿರ್ದೇಶಕರಾದ ಧರಣೇoದ್ರ ಜವಳಿ, ಡಾ ಆರ್ ಎ ಬಾಳಿಕಾಯಿ, ತನುಜಾ ರೋಖಡೆ, ಶ್ರೀಧರ ಬಸ್ತಿ, ಡಾ. ಪ್ರತಿಭಾ ಹಳಿಂಗಳಿ, ಸಂಘಟನಾ ಕಾರ್ಯದರ್ಶಿಗಳಾದ ಶಾಂತರಾಜ ಹದಳಗಿ, ಸುಜಾತಾ ಹಡಗಲಿ, ಅಜಿತ್ ಹವಳಣ್ಣವರ, ನವನಗರ ಜೈನ ಸೇವಾ ಸಂಘದ ಉಪಾಧ್ಯಕ್ಷ ಅಜಿತ್ ಉಪಾಧ್ಯ ಕಾರ್ಯದರ್ಶಿ ಜೆ ಎ ಪಾಟೀಲ್ ಖಜಾಂಚಿ ರವಿ ರಾಯಪ್ಪನವರ ಸದಸ್ಯರಾದ ಬಿ ಎಸ್ ವರೂರ, ಡಿ ಆರ್ ಚೌದರಿ ಪ್ರಭು ಹಜಾರೆ, ಶುಭಮ್ ಬಸ್ತಿ, ಬಾಹುಬಲಿ ಹೊಂಬಣ್ಣವರ, ಆಂಬೊಜಿ, ರತ್ನಾಕರ ಪಾಟೀಲ ಮತ್ತು ಬಹುರೂಪಿಣಿ ಮಹಿಳಾ ಮಂಡಳದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನವನಗರದ ಬಹುರೂಪಿಣಿ ಮಹಿಳಾಮಂಡಲದ ಮತ್ತು ಗೋಕುಲ ರಸ್ತೆಯ ಸನ್ಮತಿ ಮಹಿಳಾ ಮಂಡಳದ ತಂಡಗಳಿಂದ ಜಿನಭಜನೆ ಜರುಗಿತು ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಪಾಲ ಬೋಗಾರ ಇವರು ತಾವು ರಚಿಸಿದ "ಪಿಂಛಿ" ಕವನ ಸಂಕಲದ ಪುಸ್ತಕದ ವಿತರಿಸಿದರು. ಪ್ರಾರಂಭದಲ್ಲಿ ಶೋಭಾ ವರೂರ ಇವರಿಂದ ಪ್ರಾರ್ಥನೆ ಶಾಂತರಾಜ ಮಲ್ಲಸಮುದ್ರ ಇವರಿಂದ ಸ್ವಾಗತ ಕೊನೆಯಲ್ಲಿ ಮಹಾವೀರ ದೊದ್ದಮನಿ ಇವರು ವಂದಿಸಿದರು ತನುಜಾ ರೋಖಡೆ ಕಾರ್ಯಕ್ರಮ ನಿರೂಪಿಸಿದರು. ವರದಿ : ಶಾಂತರಾಜ ಮಲ್ಲಸಮುದ್ರ

ನಾರಾವಿ: ಸನ್ಮಾನ ಕಾರ್ಯಕ್ರಮ

Article Image

ನಾರಾವಿ: ಸನ್ಮಾನ ಕಾರ್ಯಕ್ರಮ

ನಾರಾವಿ ಜೈನ್‌ ಮಿಲನ್‌ ವತಿಯಿಂದ ಹೊಸ್ಮಾರು ಸಿದ್ಧರವನ ಕೂಟ ಬಸದಿಯಲ್ಲಿ ಕರಿಮಣೇಲು ಗುತ್ತು, ಕೆ. ಸನತ್‌ ಕುಮಾರ್‌ ಸೇಮಿತ, ಮರೋಡಿ ಗಾಳಿವನ ಎನ್.‌ ಕೆ. ಆರಿಗ, ರತ್ನರಾಜ್‌ ಆರಿಗ ಮತ್ತು ಲಲಿತಮ್ಮ (ಹೊಸ್ಮಾರು ಪ್ರೇಮ್‌ ಕುಮಾರ್‌ರವರ ತಾಯಿ) ಹಾಗೂ ಅಳಿಯೂರಿನ 102 ವರ್ಷದ ಹಿರಿಯ ಜೈನ ಮಹಿಳೆ, ನಾರಾವಿ ನಿರೀಕ್ಷಾ ಜಯವರ್ಮ ಇವರುಗಳನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಕಳ: ಪೂಜಾ ಕಾರ್ಯಕ್ರಮ

Article Image

ಕಾರ್ಕಳ: ಪೂಜಾ ಕಾರ್ಯಕ್ರಮ

ಕಾರ್ಕಳ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನ ಭ| 1008 ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ನಾಳೆ (ಜೂ.24) ಮಂಗಳವಾರದಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮಯಕ್ಷ ದೇವರ ಸ್ಥಂಭಾರೋಹನ ಪೂಜಾ ಕಾರ್ಯಕ್ರಮವು ಜರಗಲಿರುವುದು ಕಾರ್ಯಕ್ರಮ: ದಿನಾಂಕ 24-06-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.15ರಿಂದ ವಿಮಾನಶುದ್ಧಿ ಬೆಳಿಗ್ಗೆ ಗಂಟೆ 11.55ರಿಂದ ಶ್ರೀ ಬ್ರಹ್ಮಯಕ್ಷ ದೇವರಿಗೆ ಕಲಾರೋಪಣೆ ಮಧ್ಯಾಹ್ನ ಗಂಟೆ 12.30ಕ್ಕೆ ಲಕ್ಷ ಹೂವಿನ ಪೂಜೆ ಮಧ್ಯಾಹ್ನ ಗಂಟೆ 1.00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ರಾತ್ರಿ ಗಂಟೆ 9.00ಕ್ಕೆ ವಿಶೇಷ ಮಂಗಳಾರತಿ, ಸ್ಥಂಭಾರೋಹಣ.

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

Article Image

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ದಿಗಂಬರ ಜೈನ ಮಠ ಮೂಡುಬಿದ್ರೆ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರವು ಮೂಡಬಿದ್ರೆ ಜೈನ್ ಮಠದ ಶ್ರೀ ಭಟ್ಟಾರಕರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಿದರು. ಶಿಬಿರದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಅವರು ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಜಿನೇಂದ್ರ ಕೋಟ್ಯಾನ್, ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಬಸದಿಯ ಆಡಳಿತ ಮಂಡಳಿಯ ಸಂಚಾಲಕರು ಡಾ. ಕೆ. ಜಯಕೀರ್ತಿ ಜೈನ್, ಶ್ರೀ ಜೈನ್ ಮಠದ ಸಲಹಾ ಸಮಿತಿ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭಾಗವಸಿದ್ದರು. ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳರವರನ್ನು ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿದರು, ಜಿನೇಂದ್ರ ಕೋಟ್ಯಾನ್, ಡಾ. ಕೆ. ಜಯಕೀರ್ತಿ ಜೈನ್ ರವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪುರೋಹಿತರುಗಳಿಗೆ ಧಾರ್ಮಿಕ ಪ್ರಮಾಣ ಪತ್ರವನ್ನು ನೀಡಲಾಯಿತು. ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ, ಬಾಹುಬಲಿ ಪ್ರಸಾದ್ ವಂದನಾರ್ಪಣೆ ಸಲ್ಲಿಸಿ, ಸೌಮ್ಯಶ್ರೀ ಪ್ರಾoಶುಪಾಲರು ಸ್ವಸ್ತಿಶ್ರೀ ಪದವಿ ಪೂರ್ವ ವಸತಿ ಕಾಲೇಜು ಮೂಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ವೇಣೂರು: ವಾರ್ಷಿಕ ಮಹೋತ್ಸವ

Article Image

ವೇಣೂರು: ವಾರ್ಷಿಕ ಮಹೋತ್ಸವ

ವೇಣೂರು: ಭಗವಾನ್‌ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಪರಮ ಪೂಜ್ಯ "ಭಾರತಭೂಷಣ" ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ದಿನಾಂಕ 1-06-2025ನೇ ಆದಿತ್ಯವಾರದಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಲಿರುವುದು.

ವಿಮಲ ತಾಳಿಕೋಟಿ -ಸೇವಾರತ್ನ

Article Image

ವಿಮಲ ತಾಳಿಕೋಟಿ -ಸೇವಾರತ್ನ

ಸಿಂಗಾಪುರ: ಬೆಂಗಳೂರಿನ ಸುಹಾಸ್ತಿ ಯುವ ಜೈನ ಮಿಲನ್ ಸಂಘಟನೆಯು ಸಿಂಗಾಪುರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಜೈನ ಮಿಲನ್ ಸದಸ್ಯರ ಸಮಾವೇಶ "ಜಿನ ಸಮ್ಮಿಲನ"ದಲ್ಲಿ ಹುಬ್ಬಳ್ಳಿಯ ಸಮಾಜ ಸೇವಾಕರ್ತ ವಿಮಲ್ ತಾಳಿಕೋಟಿ ಅವರಿಗೆ, ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸೇವೆಗಾಗಿ "ಸೇವಾರತ್ನ" ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಗೌರವಿಸಲಾಯಿತು. ನವಗ್ರಹ ತೀರ್ಥ, ವರೂರಿನ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರು, ಅಖಿಲ ಭಾರತ ಜೈನ ಮಿಲನ್ ಕಾರ್ಯಧ್ಯಕ್ಷ ಡಿ. ಸುರೇಂದ್ರಕುಮಾರ, ಅನಿತಾ ಸುರೇಂದ್ರಕುಮಾರ್, ಸುಹಾಸ್ತಿ ಜೈನ ಮಿಲನ್ ನ ಚಿತ್ತ ಜಿನೇಂದ್ರ ವಜ್ರ ಕುಮಾರ್, ಜಿನೇಂದ್ರ ಕಣಗಾವಿ ಯುವರಾಜ್ ಜೈನ್, ಮಾಳ ಹರ್ಷೇಂದ್ರ ಉಪಸ್ಥಿತರಿದ್ದರು. ಕರ್ನಾಟಕದಿಂದ 250ಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಿಂಗಪುರದ ಜೈನ್ ಸಮಾಜ ಅತ್ಯುತ್ತಮ ಸಹಕಾರ ನೀಡಿದರು. ಶಾಂತಿನಾಥ ಕೆ ಹೋತಪೇಟಿ

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

Article Image

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

ಸಹ್ಯಾದ್ರಿಯ ತಪ್ಪಲಿನಲ್ಲಿರುವ ಮಲೆನಾಡಿನ ಸುಂದರ ನಗರ ಶಿವಮೊಗ್ಗದ ಮಹಾವೀರ ನಗರದಲ್ಲಿರುವ ‌ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಮಾನ ಸ್ಥಂಭೋಪರಿ 24 ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆ, ನೂತನ ಶಿಲಾಮಯ ಗರ್ಭಗುಡಿಯಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ದೇವಿ ಮತ್ತು ಕ್ಷೇತ್ರಪಾಲ ಪ್ರತಿಷ್ಠಾಪನೆ, ನಾಗ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನ ಹಾಗೂ ನೇತೃತ್ವ ಮತ್ತು ನಾಡಿನ ಸಮಸ್ತ ಭಟ್ಟಾರಕ ಶ್ರೀಗಳವರ ಪಾವನ ಸಾನ್ನಿಧ್ಯದಲ್ಲಿ ಇಂದಿನಿಂದ (ಮೇ. 28) ಮೊದಲ್ಗೊಂಡು ಮೇ. 30ರವರೆಗೆ ಮೂರು ದಿನಗಳ ಕಾಲ ವೈಭವಪೂರ್ಣವಾಗಿ ಜರುಗಲಿದೆ.

ವೀರೇಂದ್ರ ಕುಮಾರ್ ಬೇಗೂರ್ ಅವರಿಗೆ ಗೌರವ ಸನ್ಮಾನ

Article Image

ವೀರೇಂದ್ರ ಕುಮಾರ್ ಬೇಗೂರ್ ಅವರಿಗೆ ಗೌರವ ಸನ್ಮಾನ

ಜೈನಧರ್ಮ ಸಿದ್ಧಾಂತದ ಬಗ್ಗೆ ವೀರೇಂದ್ರ ಕುಮಾರ್ ಬೇಗೂರ್ ರವರು ಶಾಸನೋಕ್ತ ಮಾಹಿತಿಯ ಉಪನ್ಯಾಸವನ್ನು ದಿನಾಂಕ 10 -5- 2025 ಶನಿವಾರ ಹಾಗೂ 11-5-2025 ರ ಭಾನುವಾರ ನೀಡಿದರು. ಐತಿಹಾಸಿಕ ಜ್ಞಾನವನ್ನು ಪ್ರಶಂಸಿಸಿ ತ್ರಿಲೋಕ ಜೈನ್ ಮಿಲನ್ ಹಾಗೂ ಹಾಸನದ ಜೈನ ಸಮಾಜದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ತ್ರಿಲೋಕ್ ಜೈನ್ ಮಿಲನ್ ಹಾಸನದವರು ಈಎರಡೂ ದಿನದ ಕಾರ್ಯಕ್ರಮವನ್ನು ಹಿರಿಯ ಶ್ರಾವಕ ಶ್ರಾವಕೀಯರಿಗಾಗಿ ಹಾಸನ ಜೈನ್ ಭವನದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಾಣಿ ರತ್ನಾಕರ್ ರವರು ನಿರ್ವಹಿಸಿದರು. ವೀರೇಂದ್ರ ಕುಮಾರ್ ಬೇಗೂರ್ ಮಿಲನ್ ವತಿಯಿಂದ ಡಾ. ಅಶ್ವಿನ್ ಕುಮಾರ್ ರವರು ಗೌರವಿಸಿದರು.

ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮ

Article Image

ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸಸ್ ವಿಭಾಗದವರಿಂದ “ಪರ್ವ 2025” ಅನ್ನು “ದಿ ಫ್ರಾಸ್ಟಿವಲ್ - ವಿಂಟರ್ಸ್ ಸಿಂಫನಿ” ಎಂಬ ಧ್ಯೇಯೆಯೊಂದಿಗೆ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಪದ್ಮಲತಾ ನಿರಂಜನ್ ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ, ವಿದ್ಯಾರ್ಥಿಗಳು ಸೃಜನಶೀಲತೆಯಿಂದ ಏನು ಬೇಕಾದರೂ ಸಾಧಿಸಬಹುದು. ಎಲ್ಲಾ ಆರೋಗ್ಯ ವೃತ್ತಿಪರರು ರೋಗಿಗಳನ್ನು ನೋಡಿಕೊಳ್ಳಲು ಉತ್ತಮ ಮನಸ್ಸಿನಿಂದ ಕೆಲಸ ಮಾಡಬೇಕು ಪೂರ್ಣ ಸಮರ್ಪಣೆ ಮತ್ತು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ನಿಮ್ಮ ಜ್ಞಾನ ಮತ್ತು ನವೀನ ಕೌಶಲ್ಯಗಳನ್ನು ನವೀಕರಿಸುತ್ತಿರಬೇಕು. ಅಭಿವೃದ್ಧಿ ಒಳ್ಳೆಯ ಉದ್ದೇಶಕ್ಕಾಗಿ ನಡೆಯಬೇಕು. ಶಿಸ್ತಿನಿಂದ ಎಸ್.ಡಿ.ಎಂ. ಹೆಸರು ಮತ್ತು ಖ್ಯಾತಿಯನ್ನು ಜಾಗತಿಕವಾಗಿ ಮುಂದೆ ತರಬೇಕು. ರೋಗಿಯ ಸುರಕ್ಷತೆ ಮತ್ತು ಉತ್ತಮ ಅಭ್ಯಾಸಗಳು ವಿದ್ಯಾರ್ಥಿಗಳ ಮೂಲ ಉದ್ದೇಶ. ಬುದ್ಧಿವಂತ ವ್ಯಕ್ತಿಯಾಗುವುದಕ್ಕಿಂತ ಜ್ಞಾನವುಳ್ಳ ವ್ಯಕ್ತಿಯಾಗುವುದು ಹೆಚ್ಚು ಮುಖ್ಯ ಎಂದು ಹೇಳಿದರು. ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ಅಲೈಡ್ ಹೆಲ್ತ್ ಸೈನ್ಸಸ್‌ನ ಸಂಯೋಜಕರಾದ ಡಾ. ವಿದ್ಯಾ ಎಸ್. ಪಾಟೀಲ್ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೂರಜ್ ಮತ್ತು ಎಲ್ಹಾಮ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಆಂಜೆಲ್ ಬ್ಲಿಸ್ಸಿ ವಂದನಾರ್ಪಣೆ ಸಲ್ಲಿಸಿದರು.

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

Article Image

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

ಉಜಿರೆ: ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಂ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ರಾಗ-ದ್ವೇಷ ರಹಿತನಾದ ವೀತರಾಗ ಭಗವಂತನ ಶ್ರದ್ಧಾ-ಭಕ್ತಿಯ ಧ್ಯಾನದಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಬಾಹುಬಲಿ ಯುವಜನ ಸಂಘ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಹಾಗೂ ಬ್ರಾಹ್ಮಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಾಮೂಹಿಕ ವೃತೋಪದೇಶ ಸಮಾರಂಭದಲ್ಲಿ 53 ಮಂದಿ ಬಾಲಕರು ಮತ್ತು ಬಾಲಕಿಯರಗೆ ವೃತೋಪದೇಶ ನೀಡಿ ಆಶೀರ್ವದಿಸಿದರು. ವೃತ ಸ್ವೀಕಾರದಿಂದ ವರ್ತನೆಗಳ ಪರಿವರ್ತನೆ ಹಾಗೂ ಸುಧಾರಣೆಯಾಗುತ್ತದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ದೇವರು, ಗುರುಗಳು ಮತ್ತು ಶಾಸ್ತçದಲ್ಲಿ ಅಚಲ ನಂಬಿಕೆ ಇಟ್ಟು ನಿತ್ಯವೂ ಜಪ, ತಪ, ಧ್ಯಾನದ ಮೂಲಕ ಆತ್ಮನಿಗಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದುಕೊಂಡಾಗ ಮೋಕ್ಷ ಪ್ರಾಫ್ತಿಯಾಗುತ್ತದೆ. ನಿತ್ಯವೂ ಪಂಚಾಣುವೃತಗಳ ಪಾಲನೆ ಮಾಡಬೇಕು. ನೀರನ್ನು ಸೋಸಿ ಕುಡಿಯಬೇಕು ಹಾಗೂ ರಾತ್ರಿ ಭೋಜನ ತ್ಯಾಗ ಮಾಡಿ “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದೊಂದಿಗೆ ಸಾತ್ವಿಕ ಜೀವನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಜನಿವಾರ ಎಂಬುದು ರತ್ನತ್ರಯ ಧರ್ಮ ಧಾರಣೆಯ ಸಂಕೇತ. ಬೀಗದ ಕೀ ಹಾಕಲು ಅಥವಾ ಬೆನ್ನು ತುರಿಸಲು ಅದನ್ನು ಬಳಸಬಾರದು ಎಂದು ಅವರು ಕಿವಿಮಾತು ಹೇಳಿದರು. ಮಾತಾ-ಪಿತರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸಿ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದೊಂದಿಗೆ ಆದರ್ಶ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು. ಎಲ್ಲರಿಗೂ ಜನಿವಾರ ವಿತರಿಸಿ, ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರ ಪಠಣ ನಡೆಸಲಾಯಿತು.

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

Article Image

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

ನಾರಾವಿ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರೆವೇರಿತು. ಜಿನ ಭಗವಂತರಿಗೆ ಶ್ರಾವಕ ಬಂಧುಗಳು ಹಾಗೂ ಮಕ್ಕಳು ಜಿನಭಿಷೇಕ ಮಾಡುವುದರ ಮೂಲಕ ಪುಣ್ಯ ಪಡೆದುಕೊಂಡರು. ಜೈನ ಯುವಜನ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಆಡಳಿತ ಸಮಿತಿ ನಾರಾವಿ ಹಾಗೂ ಜೈನ್ ಮಿಲನ್ ನಾರಾವಿ ಮತ್ತು ಊರ ಹಾಗೂ ಪರವೂರ ಶ್ರಾವಕ ಬಂಧುಗಳ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

Article Image

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

ಮೂಡುಬಿದಿರೆ: ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯ0ದು ನಡೆಯುವ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣ ಮಹೋತ್ಸವ ಎಕ್ಸಲೆ0ಟ್ ಮೂಡುಬಿದಿರೆಯಲ್ಲಿಸ0ಭ್ರಮದಿ0ದ ಸ0ಪನ್ನಗೊ0ಡಿತು. ಕಾರ್ಯಕ್ರಮದಲ್ಲಿ ಎಕ್ಸಲೆ0ಟ್ ಮೂಡುಬಿದಿರೆ ಈ ವರ್ಷದಿ0ದ ಕೊಡಮಾಡುವ ಸನ್ಮತಿ ಮಹಾವೀರ ಶಾ0ತಿ ಪುರಸ್ಕಾರ -2025 ನ್ನು ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮ0ಗಳೂರಿನ ವಿಶ್ರಾ0ತ ಪ್ರಾ0ಶುಪಾಲರಾದ ಪ್ರೊ ಅರಳ ರಾಜೇ0ದ್ರ ಶೆಟ್ಟಿಯವರಿಗೆ ನೀಡಿ ಅಭಿವ0ದಿಸಲಾಯಿತು. ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಅರಳ ರಾಜೇ0ದ್ರ ಶೆಟ್ಟಿಯವರು ಚೈತನ್ಯ ಈ ನೆಲದ ಕಣಕಣದಲ್ಲೂ ಅ0ತರ್ಯಾಮಿಯಾಗಿದೆ. ಅದನ್ನು ಕಾಣುವ ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ ಶಕ್ತಿಯನ್ನು ಕ0ಡ ಯುವರಾಜರು ಅದರ ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಧರ್ಮ ಪತ್ನಿ ರಶ್ಮಿತಾ ಜೈನ್ ಜೊತೆಗೂಡಿದರು. ಅಭಯಚ0ದ್ರರು ಅಭಯ ನೀಡಿದರು. ಮು0ದಿನದ್ದು ಇತಿಹಾಸ. ಈ ನೆಲದಲ್ಲಿ ಕಲ್ಲರಳಿ ಹೂವಾಯಿತು. ನನಗೆ ಕರ್ಮಸ್ಥಳವೇ ಧರ್ಮಸ್ಥಳ. ಪೂಜ್ಯ ವೀರೆ0ದ್ರ ಹೆಗ್ಗಡೆಯವರಿಗೆ ನನ್ನೆಲ್ಲಾ ಸ0ತೋಷವನ್ನು ಅರ್ಪಿಸುತ್ತಿದ್ದೇನೆ. ನಮ್ಮ ಕೆಲಸವನ್ನು ತೃಪ್ತಿಯಿ0ದ ನಿಷ್ಠೆಯಿ0ದ ಮಾಡಿದರೆ ಸ0ತೋಷ ನಮ್ಮನ್ನು ಅರಸಿಕೊ0ಡು ಬರುತ್ತದೆ. ನಿರೀಕ್ಷೆಗಳ ಹಿ0ದೆ ಓಡಕೂಡದು. ಬದುಕಿನ ಬಹಳ ದೊಡ್ಡ ಗುಟ್ಟು ಸ0ತೋಷದಲ್ಲಿದೆ. ಮನಸ್ಸು ಸ0ತೋಷದಲ್ಲಿದ್ದರೆ ಬದುಕು ಸಾರ್ಥಕ್ಯವನ್ನು ಕಾಣುತ್ತದೆ. ನಾವು ನಮ್ಮ ದೃಷ್ಟಿ ಬದಲಾಯಿಸಿದರೆ ನಮ್ಮ ಸೃಷ್ಟಿ ಬದಲಾಗುತ್ತದೆ. ಸೃಷ್ಟಿಯಲ್ಲಿ ಸೌ0ದರ್ಯವೇ ಇರುತ್ತದೆ. ನಾವು ನಮ್ಮ ಅನಾವಶ್ಯಕ ಮಾತು, ಯೋಚನೆ, ಚಿ0ತನೆಗಳಿ0ದ ಆ ಸೌ0ದರ್ಯವನ್ನು ಕಾಣದಾಗಿದ್ದೇವೆ. ಅಹಿ0ಸೆ ಎ0ಬ ಒ0ದು ಬಾಗಿಲು ಸಾಕು ಭಗವ0ತನ ಸಾಕ್ಷಾತ್ಕಾರಕ್ಕೆ. ಅಹಿ0ಸೆಯ ರಾಜ ಮಾರ್ಗದಲ್ಲಿ ಪ್ರೀತಿ ಇದೆ, ಸಹನೆ ಇದೆ, ವಿಶ್ವಾಸ, ಭರವಸೆ ಇದೆ. ಆ ಮಾರ್ಗದಲ್ಲಿ ಪಥಿಕರಾಗೋಣ. ಮಣ್ಣ ಕಣಕಣದಲ್ಲೂ ತ0ಪು ತಣಿವುಗಳಿರಲಿ. ಒಲವಿನೊರತೆಯು ಹೊಳೆಯಾಗಿ ಹರಿದು ಬರಲಿ. ಭ್ರಮೆಯ ಬದುಕನ್ನು ಕಳಚಿ ಹೊರಡೋಣ, ಪ್ರೀತಿ ಎ0ಬ ಬೆಳಕಿನ ಬಟ್ಟೆ ನಮ್ಮನ್ನು ಭಗವ0ತನ ಕಡೆ ಒಯ್ಯುತ್ತದೆ. ಈ ಎಕ್ಸಲೆ0ಟ್ ನಲ್ಲಿ ನೀವು ಕಲಿಯುವುದರೊ0ದಿಗೆ ಬೆಳೆಯಿರಿ, ಎಕ್ಸಲೆ0ಟ್ ಗಳಾಗಿ ಎ0ದರು. ಪ್ರತಿ ಮಗುವೂ ಪ್ರಪ್ರಥಮವಾಗಿ ಒಳ್ಳೆಯವರೇ. ಸುತ್ತಲಿನ ಋಣಾತ್ಮಕ ಸ0ಗತಿಗಳು ನಿಮ್ಮನ್ನು ಕೆಡಿಸದಿರಲಿ. ಆಯ್ಕೆ ನಿಮ್ಮ ಕೈಯಲ್ಲಿದೆ. ಒಳ್ಳೆಯ ಆಯ್ಕೆ ಒಳ್ಳೆಯ ಜೀವನ. ಬೆಳಕಿನ ಬಟ್ಟೆಯಲ್ಲಿ ನಡೆಯುವ ಎಕ್ಸಲೆ0ಟ್ ನ ಈ ದೀಪಗಳು ಸಮಾಜಕ್ಕೆ ಬೆಳಕಾಗಲಿ ಎ0ದರು. ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ ಅಭಯಚ0ದ್ರ ಜೈನ್ ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ ಘನತೆ, ಗೌರವ ಎಲ್ಲವನ್ನು ತ0ದುಕೊಡುತ್ತದೆ. ಭಾರತೀಯತೆ, ರಾಷ್ಟ್ರೀಯ ಚಿ0ತನೆಗಳೊ0ದಿಗೆ ಸರಳ ಬದುಕು ನಮ್ಮದಾಗಲಿ ಎ0ದರು. ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸಭೆಯ ಅಧ್ಯಕ್ಷರಾಗಿ ಬದುಕು ಮತ್ತು ಬದುಕಲು ಬಿಡಿ ಎ0ಬ ಸಿದ್ಧಾ0ತ ನಮ್ಮ ಬದುಕಿಗೆ ದಾರಿ ದೀಪಗಳಾಗಲಿ. ಭಗವತ್ ಸಾಕ್ಷಾತ್ಕಾರಕ್ಕೆ ಮುನ್ನುಡಿ ಇರುವುದೇ ಆತ್ಮತೃಪ್ತಿಯ ಸನ್ನಿಧಿಯಲ್ಲಿ. ಗುಣವ0ತರಾಗಿ, ಕಷ್ಟದಲ್ಲಿರುವವರಿಗೆ ಬಲವಾಗಿ, ಸೌಜನ್ಯ, ಸೌಶೀಲ್ಯ, ಸೌಮನಸ್ಸುಗಳು ನಮ್ಮ ಸ0ಸಾರವಾದರೆ ನಮ್ಮ ಹೃದಯದಲ್ಲಿಭಗವ0ತ ನೆರೆಗೊ0ಡು ನಮ್ಮ ಎಲ್ಲಾ ಕೆಲಸಗಳಿಗೆ ಭಗವದನುಗ್ರಹ ಇರುತ್ತದೆ. ಮಹಾತ್ಮರ, ಸ0ತರ ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ತೋರಿಸಲಿ. ನಾವು ಅದರಲ್ಲಿ ಮು0ದುವರೆಯೋಣ ಎ0ದರು. ಆಧ್ಯಾತ್ಮಿಕತೆಯ ಪರಮ ಸತ್ಯವನ್ನು ಪ್ರಾಪ0ಚಿಕರಿಗೆ ಬೋಧಿಸಿದ ಅಹಿ0ಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯದ ಮೂಲಕ ಸೈತಿಕ ನಡವಳಿಕೆಯ ಸಹೋದರ, ಸಮನ್ವತೆಯ ಉದಾತ್ತ ಧರ್ಮ ತೋರಿಕೊಟ್ಟ, ವಿಶ್ವಮಾನ್ಯ ಚೇತನವಾದ ಜೈನಧರ್ಮದ 24 ನೇ ತೀರ್ಥ0ಕರರಾದ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣೋತ್ಸವ ಶ್ರಾವಕರಾದ ಅಜಿತ್ ನಾರಾವಿಯವರ ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊ0ದಿಗೆ ಶ್ರದ್ಧೆಯಿ0ದ ಶ್ರೀಮತಿ ಪದ್ಮಪ್ರಿಯ, ಕು ಋದ್ಧಿ ಕೇರ ಅವರ ಮ0ತ್ರ ಪಠಣದೊ0ದಿಗೆ ಸ0ಪನ್ನಗೊ0ಡಿತು. ಇದೇ ಸ0ದರ್ಭದಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರ0ಕಿ ಪಾರ್ಶ್ವನಾಥ, ಸುಧಾ ಪಾರ್ಶ್ವನಾಥ ದ0ಪತಿಯನ್ನು ವಿಶೇಷ ಗೌರವ ಪುರಸ್ಕಾರಗಳೊ0ದಿಗೆ ಅಭಿನ0ದಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಅವರ ಬಹುಮುಖೀ ಪ್ರತಿಭೆಗಾಗಿ ಗೌರವಿಸಲಾಯಿತು. ಭಾರತೀಯ ಅ0ಚೆ ಇಲಾಖೆ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶ್ವನಮೋಕಾರ ಮ0ತ್ರ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶೇಷ ಗೌರವವನ್ನು ಸ0ಸ್ಥೆಯ ಗೌರವಾಧ್ಯಕ್ಷರಾದ ಅಭಯಚ0ದ್ರ ಜೈನ್ ಹಾಗೂ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಹಸ್ತಾ0ತರಿಸಲಾಯಿತು. ಸ0ಸ್ಥೆಯ ರಕ್ಷಣಾ ಸಿಬ್ಬ0ದಿಗಳಿಗೆ ಹಾಗೂ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು. ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತಿನೊ0ದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುನಾದ್ ರಾಜ್ ಜೈನ್ ವ0ದಿಸಿದರು. ಸ0ಸ್ಥೆಯ ಆಡಳಿತ ನಿರ್ದೇಶಕರಾದ ಡಾ ಬಿ.ಪಿ ಸ0ಪತ್ ಕುಮಾರ್ ನಿರೂಪಿಸಿದರು.

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆಯ ಅಂಗವಾಗಿ ಗುರುವಾರ ತೋರಣಮುಹೂರ್ತ , ವಿಮಾನಶುದ್ಧಿ, ಭಗವಾನ್ ಮಹಾವೀರ ಸ್ವಾಮಿಗೆ ನವಕಲಾಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರು ಮತ್ತು ಸಹಪುರೋಹಿತರಯ ಧಾರ್ಮಿಕ ವಿಧಿ-ವಿಧಾನಗನ್ನು ನೆರವೇರಿಸಿದರು. ಬಳಿಕ ನಡೆದ ಶಾಂತಿಚಕ್ರ ಆರಾಧನೆಯಲ್ಲಿ 26 ಮಂದಿ ಶ್ರಾವಕರು, ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು. ಭಗವಾನ್ ಮಹಾವೀರ ತೀರ್ಥಂಕರರ ಜೀವನ-ಸಾಧನೆ ಬಗ್ಯೆ ಉಪನ್ಯಾಸ ನೀಡಿದ ಅಳದಂಗಡಿ ಮಿತ್ರಸೇನ ಜೈನ್, ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಅನೇಕಾಂತವಾದ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉಪದೇಶಗಳು ಸಾರ್ವಜನಿಕ ಮೌಲ್ಯ ಹೊಂದಿವೆ. ಸಕಲ ಪ್ರಾಣಿಪಕ್ಷಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಮಹಾವೀರರು ಬೋಧಿಸಿದ ತತ್ವಗಳಿಂದ ವಿಶ್ವಶಾಂತಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಬೆಂಗಳೂರಿನ ವಕೀಲ ಕೆ.ಬಿ. ಯುವರಾಜ ಬಳ್ಳಾಲ್, ವಿಜಯಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಸುಮತಿ ಕೆ.ಆರ್. ಬಳ್ಳಾಲ್ದ, ವಿನಯಾ ಜೆ. ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್ ಮತ್ತು ಮಣಿಮಾಲ ಬಳ್ಳಾಲ್ ಹಾಗೂ ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

Article Image

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

108 ದೇಶಗಳಲ್ಲಿ ಏಕಕಾಲದಲ್ಲಿ ಬೆಳಗ್ಗೆ ಏಳರಿಂದ ಹತ್ತು ಗಂಟೆಯವರೆಗೆ ನಮೋಕಾರ ಮಂತ್ರವನ್ನು ಪಠಿಸಲಾಯಿತು. ಭಾರತದಲ್ಲಿ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯವರು ನವ ದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿರುತ್ತಾರೆ. ಒಂದು ಜಗತ್ತು, ಒಂದು ಮಂತ್ರ, ಶಾಂತಿಗಾಗಿ ಜೊತೆಯಲ್ಲಿ ಎಂಬ ಧ್ಯೇಯದೊಂದಿಗೆ ಜೀತೋ ಸಂಸ್ಥೆ ವಿಶ್ವದಾದ್ಯಂತ ಏರ್ಪಡಿಸಿದ್ದ ವಿಶ್ವ ಣಮೋಕಾರ ಮಂತ್ರ ದಿವಸ ಇದರ ಅಂಗವಾಗಿ ಭಾರತೀಯ ಜೈನ್ ಮಿಲನ್ ಮೂಡುಬಿದರೆ, ಬಸದಿ ಸ್ವಚ್ಛತಾ ತಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಮಸ್ತ ಜೈನ ಬಾಂಧವರು ಮೂಡುಬಿದರೆ ಇವರಿಂದ ಜೈನ ಕಾಶಿ ಮೂಡುಬಿದರೆಯಲ್ಲಿ ಸಾವಿರ ಕಂಬದ ಬಸದಿ ಎಂದೇ ಪ್ರಸಿದ್ಧವಾಗಿರುವ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಸಾಮೂಹಿಕವಾಗಿ ಣಮೋಕಾರ ಮಂತ್ರವನ್ನು ಪಠಿಸಲಾಯಿತು.

ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆ

Article Image

ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆ

ವೇಣೂರು: ಭಾರತೀಯ ಜೈನ್‌ ಮಿಲನ್‌ ಇವರು ಶ್ರೀ ದಿಗಂಬರ ಜೈನ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವೇಣೂರು, ಶ್ರೀ ಬಾಹುಬಲಿ ಯುವಜನ ಸಂಘ ವೇಣೂರು, ಬ್ರಾಹ್ಮಿ ಮಹಿಳಾ ಸಂಘ ವೇಣೂರು, ಕಲ್ಲುಬಸದಿ ಬ್ರಿಗೇಡಿಯರ್ಸ್‌ ವೇಣೂರು ಇವರ ಸಹಯೋಗದೊಂದಿಗೆ ಭ| ೧೦೦೮ ಶ್ರೀ ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆಯು ದಿನಾಂಕ 10-04-2025ನೇ ಗುರುವಾರ ಶ್ರೀ ಬಾಹುಬಲಿ ಸಭಾ ಭವನದಲ್ಲಿ ಜರಗಲಿರುವುದು. ಕಾರ್ಯಕ್ರಮಗಳು : ಪೂರ್ವಾಹ್ನ ಗಂಟೆ 8.30ರಿಂದ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾವೀರ ಸ್ವಾಮಿಗೆ ಕ್ಷೇರಾಭಿಷೇಕ ಪೂರ್ವಾಹ್ನ ಗಂಟೆ 9.00ರಿಂದ : ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಿಂದ ಶ್ರೀ ಬಾಹುಬಲಿ ಸಭಾಭವನಕ್ಕೆ ಜಿನ ಬಾಲಕನ ಪುರ ವಿಹಾರ ಪೂರ್ವಾಹ್ನ ಗಂಟೆ 9.30ರಿಂದ : ಶ್ರಾವಕ ಶ್ರಾವಕಿಯವರಿಂದ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ಪೂರ್ವಾಹ್ನ ಗಂಟೆ 10.45ರಿಂದ : ಪಾಂಡುಕ ಶಿಲೆಯಲ್ಲಿ ಜಿನ ಬಾಲಕನಿಗೆ ಜನ್ಮಾಭಿಷೇಕ, ನಾಮಕರಣೋತ್ಸವ ಮಧ್ಯಾಹ್ನ ಗಂಟೆ 12.00ಕ್ಕೆ : ಮಹಾಮಂಗಳಾರತಿ

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆ

Article Image

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆ

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆಯು ದಿನಾಂಕ 23.03.2025ನೇ ಭಾನುವಾರ ಶ್ರೀ ಆದಿನಾಥ ತೀರ್ಥ0ಕರ ಜಿನಚೈತ್ಯಾಲಯದ ವಾರ್ಷಿಕೋತ್ಸವದಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ ಅಧ್ಯಕ್ಷರಾದ ಮಧ್ವರಾಜ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೈನ್ ಮಿಲನ್ ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಮಂಗಳೂರು ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್,ವಲಯ ನಿರ್ದೇಶಕರಾದ ಪ್ರಮೋದ್ ಕುಮಾರ್ ಉಜಿರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ವಿಭಾಗ ನಿರ್ದೇಶಕರಾದ ಸುಕುಮಾರ ಬಲ್ಲಾಳ್ ಧಾರ್ಮಿಕ ಚೌಕಟ್ಟಿನಲ್ಲಿ ಜೈನ ಸಮಾಜದ ಸಂಘಟನೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸಮಾಜದ ಯುವ ಜನರಲ್ಲಿ ಸಂಘಟನೆ, ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಹಾಗೂ ಬೆಳೆಸುವ ಕೆಲಸಗಳು ಆಗಬೇಕು ಆಗ ಸಮಾಜ ಜಾಗೃತವಾಗುತ್ತದೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಯಾವುದೇ ಪ್ರಚಾರವಿಲ್ಲದೆ ಸಮಾಜದ ಸೇವೆಯನ್ನು ಮಾಡುತ್ತಿರುವ ಪ್ರವೀಣ್ ಕುಮಾರ್ ಬಸ್ತಿಪಡ್ಫು , ಸಪ್ನ ಚಂದ್ರಪ್ರಭ ಬೈಪಾಸ್ ಬಂಟ್ವಾಳ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜೈನ್ ಮಿಲನ್ ಕಾರ್ಯದರ್ಶಿಗಳಾದ ಭರತ್ ಕುಮಾರ್, ಕೋಶಾಧಿಕಾರಿ ಗೀತಾ ಜಿನಚಂದ್ರ ಉಪಸ್ಥಿತರಿದ್ದರು. ಕಾಂಚನಶ್ರೀಮದ್ವರಾಜ್ ಮತ್ತು ಮಮತಾ ಸುಭಾಶ್ಚಂದ್ರ ಜೈನ್ ಸನ್ಮಾನಿತರ ಪರಿಚಯವನ್ನು ಮಾಡಿದರು. ಶೈಲಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಪ್ರಕಾಶ್ ಜೈನ್ ಸ್ವಾಗತಿಸಿ, ಗೀತಾ ಜಿನಚಂದ್ರ ಧನ್ಯವಾದವಿತ್ತರು. ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ

Article Image

ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ

ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ತೊಡಗಿಸಿಕೊಂಡರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯವನ್ನು ಮಾಡುತ್ತಿರುವ ನಮ್ಮ ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜವು ಇಂದು ತಾಲೂಕಿನಲ್ಲಿ ಗುರುತಿಸುವಂತಾಗಿದೆ. ನಾವೆಲ್ಲರೂ ಆದರ್ಶ ಸಾಧಕ ಮಹಿಳೆರಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಅಂತಹ ಗುರುತರವಾದ ಕಾರ್ಯಕ್ಕೆ ನಾವೆಲ್ಲ ಜೊತೆಯಾಗಿ ಕಾರ್ಯವನ್ನು ಮಾಡಬೇಕು ಎಂದು ವಿಶ್ವ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಅಭಿಯಂತರರಾಗಿದ್ದ ಚಂದ್ರರಾಜ್ ಜೈನ್ ಇವರ ಧರ್ಮಪತ್ನಿ ಸುಜಯ ಸಿ ಜೈನ್ ರವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ನ್ಯಾಯವಾದಿ ಸ್ವರ್ಣಲತಾ ಜೈನ್ ರವರು "ಇಂದಿನ ಸಮಾಜದಲ್ಲಿ ಮಹಿಳೆಯರ ಮುಂದಿರುವ ಸವಾಲುಗಳು, ಅದನ್ನು ನಿಭಾಯಿಸಬೇಕಾದ ತಂತ್ರಗಾರಿಕೆ, ಮಹಿಳೆಯರಿಗೆ ಪರವಾಗಿರುವ ಕಾನೂನುಗಳು, ಪೋಕ್ಸೋ ಕಾಯ್ದೆಯ ಮಹತ್ವ ಇತ್ಯಾದಿ ವಿಚಾರಗಳನ್ನು ಎಳೆ ಎಳೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು. ಆಗ ಮಾತ್ರ ಸುಸ್ತಿರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು. ಈ ಕಾರ್ಯಕ್ರಮದಲ್ಲಿ ಪೂರ್ವ ಪರಂಪರೆಯಲ್ಲಿ ಸಾಧನೆಗೈದ ಹಲವಾರು ಜೈನ ಮಹಿಳಾ ಸಾಧಕೀಯರಲ್ಲಿ ಕೆಲವರ ಸಾಧನೆಯ ತುಣುಕನ್ನು ಸಭೆಯಲ್ಲಿ ಪರಿಚಯಿಸಲಾಯಿತು. ಕಾಳು ಮೆಣಸಿನ ರಾಣಿ ಚೆನ್ನಬೈರಾ ದೇವಿ ಇವರನ್ನು ಉಷಾ ಹಾಗೂ ಜೈನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜೈನ ಮಹಿಳೆ ಬಿರುದಾಂಕಿತ ರಾಧಮ್ಮ ಇವರ ಬಗ್ಗೆ ಸುರಕ್ಷಿತರವರು ಸಭೆಗೆ ಪರಿಚಯಿಸಿದರು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಶಾಂತಿಶ್ರೀ ತಂಡದಿಂದ ವಲಯ ಮಟ್ಟದ ಜಿನಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕು ತಂಡಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊಫೆಸರ್ ತ್ರಿಶಾಲ ಜೈನ್ ಕೆ ಎಸ್ ಇವರು "ಹತ್ತನೇ ಶತಮಾನದಿಂದ 21ನೇ ಶತಮಾನದವರೆಗೆ ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿರುವ ಜೈನ ರಾಣಿಯರ ಧೈರ್ಯ, ಸಾಹಸ, ಚಾಣಕ್ಯತನ, ಆಡಳಿತ ಶೈಲಿ ಮುಂತಾದ ವಿಚಾರಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಇಂದು ವಿಶ್ವದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಸಾಧನೆಗಳು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಬಾಹ್ಯಾಕಾಶ ಯಾನವನ್ನು ಮಾಡಿ ಯಶಸ್ವಿಯಾಗಿ ಧರೆಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಇವರ ಅದ್ಭುತ ಪೂರ್ವ ಸಾಧನೆಗೆ ಸಂಸ್ಥೆಯ ವತಿಯಿಂದ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು. ನಾವೆಲ್ಲರೂ ಜೊತೆಯಾಗಿದ್ದಾಗ ಸರ್ವ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯಕ್ಕೆ ತಾವೆಲ್ಲರೂ ನಮ್ಮ ಜೊತೆ ಕೈಗೂಡಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮವು ಸ್ವಪ್ನ ಬಳಗದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡರೆ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ಸಂಸ್ಥೆಯ ಕಾರ್ಯದರ್ಶಿ, ರಾಜಶ್ರೀ ಪ್ರಸ್ತಾಪಿಸಿದರೆ, ಗುಣಮ್ಮ ಪಿ ಜೈನ್ ರವರು ಸ್ವಾಗತಿಸಿ, ತ್ರಿಶಾಲ ಅತಿಕಾರಿ ವಂದಿಸಿ, ಅನುಪ ಕುಮಾರಿ ಸಂಘಟಿಸಿ, ಸಂಘದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದವಳ ಇವರ ಕಾರ್ಯಕ್ರಮ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

First Previous

Showing 2 of 5 pages

Next Last