ವೇಣೂರು ಬಾಹುಬಲಿ ಕ್ಷೇತ್ರಕ್ಕೆ SP ರಿಷ್ಯಂತ್ ಕುಮಾರ್ ಮತ್ತು ವಿವಿಧ ಅಧಿಕಾರಿಗಳ ಭೇಟಿ


Logo

Published Date: 13-Feb-2024

ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಬೆಟ್ಟಕ್ಕೆ ಇಂದು (ಫೆ. 13) SP ರಿಷ್ಯಂತ್ ಕುಮಾರ್ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಜೊತೆಗೆ ಇದ್ದು, ಮಹಾಮಸ್ತಕಾಭಿಷೇಕದ ಸಮಯದಲ್ಲಿನ ಪಾರ್ಕಿಂಗ್‌ ವ್ಯವಸ್ಥೆ, ತುರ್ತು ಸೇವಾ ಕಛೇರಿಗಳು, ವಸ್ತು ಪ್ರದರ್ಶನ ಮಳಿಗೆಗಳ ಬಗ್ಗೆ ಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪದಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪುತ್ತೂರು ವಿಭಾಗದ ಸಹಾಯಕ ಕಮಿಷನರ್‌ ಜುಬಿನ್‌ ಮೊಹಾಪಾತ್ರ, ಬಂಟ್ವಾಳ ಡಿ.ವೈ.ಎಸ್.ಪಿ. ಎಸ್.‌ ವಿಜಯ ಪ್ರಸಾದ್‌, ಬೆಳ್ತಂಗಡಿ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಜಿಲ್ಲಾ ನೋಡಲ್‌ ಅಧಿಕಾರಿ ಮಾಣಿಕ್ಯ ಎಂ., ಬೆಳ್ತಂಗಡಿ ತಾಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ, ವೇಣೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ನೇಮಯ್ಯ ಕುಲಾಲ್‌, ವೇಣೂರು ಪೊಲೀಸ್‌ ಉಪನಿರೀಕ್ಷಕರಾದ ಶ್ರೀಶೈಲ, ಕಂದಾಯ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕಾರ್ಯದರ್ಶಿ ಕೆ. ಪ್ರವೀಣ್‌ ಅಜ್ರಿ, ಪಾರ್ಕಿಂಗ್‌ ಸಮಿತಿಯ ಸಂಚಾಲಕ ಮನ್ಮಥರಾಜ್‌ ಕಾಜವ ಪೆರಿಯಾರುಗುತ್ತು, ಸಹಾಯಕ ನೋಡಲ್‌ ಅಧಿಕಾರಿ ಕೆ. ಜಯಕೀರ್ತಿ ಜೈನ್‌, ಚಂದ್ರಪ್ರಭ ಜೈನ್‌ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್‌ ಅಜಿಲ ಅವರು ಸ್ವಾಗತಿಸಿ, ಮಹಾವೀರ ಜೈನ್‌ ಮೂಡುಕೋಡಿ ಇವರು ವಂದಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img