ಸೋಂದಾ: ಜೈನ ಮಠದಲ್ಲಿ ನವರಾತ್ರಿ ಸಂಭ್ರಮ
Published Date: 13-Oct-2026
ಶಿರಸಿ: ಶ್ರೀಕ್ಷೇತ್ರ ಸ್ವಾದಿ ಜೈನ ಮಠದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ಶರನ್ನವರಾತ್ರಿಯ ಎರಡನೇ ದಿನದಂದು ವಿಶೇಷವಾಗಿ ಪಟ್ಟದ ದೇವಿ ಆಮ್ರಕೂಷ್ಮಾಂಡಿನಿ ಅಂಬಿಕಾ ದೇವಿಗೆ ಅಷ್ಟವಧಾನ ಪೂಜೆ, ಶೋಡಶೋಪಚಾರ ಪೂಜೆ, ಮಹಾ ನೈವೇದ್ಯ ಪೂಜೆ ಮುಂತಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಜೈನಮಠದ ಪೀಠಾಧಿಪತಿಗಳಾದ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ದಿನದ ಪೂಜಾ ಸೇವಾಕರ್ತರಾಗಿ ಸವಳ್ನಾಡು ಸೀಮೆ ಕೋಗಾರು ಜೈನ ಶ್ರಾವಕ ಶ್ರಾವಕಿಯರು ಹಾಗೂ ಭಕ್ತರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು.