ಜೈನ್ ಮಿಲನ್ ಮಾಸಿಕ ಸಭೆ ಹಾಗೂ “ಗುರುವಂದನಾ” ಕಾರ್ಯಕ್ರಮ
Published Date: 06-Oct-2026
ಮಂಗಳೂರು: ಜೈನ್ ಮಿಲನ್ ಮಾಸಿಕ ಸಭೆಯನ್ನು “ಗುರುವಂದನಾ” ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ವರ್ಧಮಾನ ಸಿದ್ಧಾರ್ಥ ಭವನ, ಮಹಾವೀರ್ ಜೈನ್ ಬೋರ್ಡಿಂಗ್‌ನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಗುರುವಂದನಾ ಕಾರ್ಯಕ್ರಮದಲ್ಲಿ 46ಕ್ಕೂ ಹೆಚ್ಚು ಶಿಕ್ಷಕರನ್ನು ಆಹ್ವಾನಿಸಿ, ಫಲ ಹಾಗೂ ತಂಬೊಲ ನೀಡಿ ಗೌರವಿಸಲಾಯಿತು. ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ಅವರ ಸಮಾಜ ಮತ್ತು ವಿದ್ಯಾರ್ಥಿಗಳ ಜೀವನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ವೈವಾಹಿಕ ದಿನಾಚರಣೆ ,ಹುಟ್ಟುಹಬ್ಬದ ಆಚರಣೆ ಹಾಗೂ ಉಡುಗೊರೆ ಸಮಾರಂಭವನ್ನು ಅನ್ವಿತಾ ಅವರು ನಡೆಸಿಕೊಟ್ಟರು. ಸಂಘಟನೆಯ ಸದಸ್ಯರು ಹಾಗೂ ಸದಸ್ಯೆಯರ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು ಹಾಗೂ ಹೊಸ 8 ಸದಸ್ಯರನ್ನು ಸೇರ್ಪಡೆಗೋಳಿಸಲಾಯಿತು. ಸಭೆಯಲ್ಲಿ ಇತ್ತೀಚೆಗೆ ಅಗಲಿದ ಐ. ಆ. ಬಲ್ಲಾಳ್ ಅವರಿಗೆ ಪಂಚ ನಮಸ್ಕಾರದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಮಕ್ಕಳೇ ನಿರ್ವಹಿಸಿದರು. ನಂತರ ಮಕ್ಕಳ ತಂಡದಿಂದ ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಕುಮಾರ್ ಜೈನ್, ಅಧ್ಯಕ್ಷರು, ಭಾರತೀಯ ಜೈನ ಮಿಲನ್, ಮಂಗಳೂರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶ್ರುತಿಕೀರ್ತಿ ರಾಜಾ, ನಿರ್ದೇಶಕರು, ಶೃತ ಅಕಾಡೆಮಿ, ಮಂಗಳೂರು ಹಾಗೂ ವಿಶೇಷ ಅತಿಥಿಗಳಾಗಿ ಪುಷ್ಪರಾಜ್ ಜೈನ್, ರಾಷ್ಟ್ರೀಯ ಉಪಾಧ್ಯಕ್ಷರು, ಭಾರತೀಯ ಜೈನ ಮಿಲನ್, ನವದೆಹಲಿ ಮತ್ತು ರಾಜೇಶ್ ಎಂ., ರಾಷ್ಟ್ರೀಯಸಂಯೋಜಕರು, ಭಾರತೀಯ ಜೈನ ಮಿಲನ್, ನವದೆಹಲಿ ಉಪಸ್ಥಿತರಿದ್ದರು. ಸನ್ನಿದಿ ಮತ್ತು ತಂಡದವರು ಸ್ವಾಗತಿಸಿದರು. ಶ್ರವಣ್‌ರವರು ಸ್ವಾಗತ ಭಾಷಣ ಮಾಡಿದರು. ಅಕ್ಷಯ ಕುಮಾರ್‌ರವರು ಮಾಸಿಕ ವರದಿಯನ್ನು ಮಂಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಸಮ್ಮೇದ್ ಜೈನ್‌ರವರು ನೆರವೇರಿಸಿದರು. ಬಳಿಕ ನಡೆದÀ ಲಕ್ಕಿ ಗೇಮ್ ಕಾರ್ಯಕ್ರಮವನ್ನು ಶಾಶ್ವತಿ ಜೈನ್ ನಡೆಸಿಕೊಟ್ಟರು. ಗಹನ ಜೈನ್‌ರವರು ಕಾರ್ಯಕ್ರಮವನ್ನು ನಿರ್ವಹಿಸಿದರು ಸಮರ್ಥ್ ಜೈನ್‌ರವರು ವಂದನಾರ್ಪಣೆ ಸಲ್ಲಿಸಿದರು. ಡಾ. ಸೌಮ್ಯರವರು ಶಾಂತಿ ಮಂತ್ರವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.