ಪ್ರಜ್ಞಾಶ್ರೀ ಜೈನ್‌ರವರಿಗೆ ದ್ವಿತೀಯ ರ‍್ಯಾಂಕ್
Published Date: 30-Sep-2026
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 2025-26ನೇ ಶೈಕ್ಷಣಿಕ ವರ್ಷದ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾಶ್ರೀ ಜೈನ್‌ರವರು ದ್ವಿತೀಯ ರ‍್ಯಾಂಕನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆ, ಜಯನಿವಾಸದ ಜಯದೇವ್ ಕೆ ಮತ್ತು ಪ್ರಭಾವತಿ ದಂಪತಿಗಳ ಪುತ್ರಿ.