ರಾಷ್ಟ್ರೀಯ ಚಾಂಪಿಯನ್ ತಂಡವನ್ನು ಪ್ರತಿನಿಧಿಸಿದ ಸಮಕಿತ ಸುಧೀರ ಕುರಕುರೆ
Published Date: 15-Sep-2026
ಕಾನ್ಪುರದ ಐಐಟಿ ಆವರಣದಲ್ಲಿ ನಡೆದ 55ನೇ ಕೆ.ವಿ.ಎಸ್. ರಾಷ್ಟ್ರೀಯ ಕ್ರೀಡಾಕೂಟ 2026-27ರ ಬಾಲಕರ ಬಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಎಎಸ್‌ಸಿ ಸೆಂಟರ್, ಬೆಂಗಳೂರಿನ XI-B ತರಗತಿಯ ವಿದ್ಯಾರ್ಥಿ ಸಮಕಿತ ಸುಧೀರ ಕುರಕುರೆ ರವರು ಚಾಂಪಿಯನ್ ಪಟ್ಟ ಪಡೆದ ತಂಡದ ಸದಸ್ಯರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕೇಂದ್ರೀಯ ವಿದ್ಯಾಲಯ ಸಂಘಟನೆಯ ರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ತಂಡವು ಚಾಂಪಿಯನ್ ಟ್ರೋಫಿ ಗೆದ್ದು ಕೀರ್ತಿ ತಂದಿದೆ.