ವೇಣೂರಿನಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ
Published Date: 09-Sep-2026
ಇತಿಹಾಸ ಪ್ರಸಿದ್ಧ ವೇಣೂರು ಭಗವಾನ್ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವತಿಯಿಂದ ದಶಲಕ್ಷಣ ಮಹಾಪರ್ವ ಆಚರಣೆಯು ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ 'ಪದ್ಮವಿಭೂಷಣ' ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ತಾ. 16-09-2026ನೇ ಬುಧವಾರದಿಂದ ತಾ. 25-09-2026ನೇ ಶುಕ್ರವಾರದವರೆಗೆ ಪ್ರತಿದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ಜರಗಿಸಲಾಗುವುದು. ಪ್ರತೀ ದಿನ ಅಪರಾಹ್ನ ಗಂಟೆ 4-30ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ, ಬಳಿಕ ಉಪಹಾರ ಜರಗಲಿದೆ.