ಹುಬ್ಬಳ್ಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರ
Published Date: 07-Sep-2026
ಪ್ರಥಮಾಚಾರ್ಯ ಚಾರಿತ್ಯ ಚಕ್ರವರ್ತಿ ಪರಮಪೂಜ್ಯ 108 ಶ್ರೀ ಶಾಂತಿಸಾಗರ ಮಹಾರಾಜರ 71ನೇ ಪುಣ್ಯತಿಥಿ ಸಂದರ್ಭದಲ್ಲಿ ಆಚಾರ್ಯ ಶ್ರೀ 108 ಶಾಂತಿಸಾಗರ ಅಲ್ಪಸಂಖ್ಯಾತ ದಿಗಂಬರ ಜೈನ ಟ್ರಸ್ಟ್ ಹುಬ್ಬಳ್ಳಿ ಇವರ ವತಿಯಿಂದ ಜನಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ದಿನಾಂಕ 13-09-2026 ರವಿವಾರದಂದು ಶಾಂತಿನಾಥ ಸಾಂಸ್ಕೃತಿಕ ಭವನ, ಮಹಾವೀರ ಗಲ್ಲಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರ ಸಮಯ: ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 02-00 ರವರೆಗೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ: ಮಹಾವೀರ ಎನ್. ಗೋಂಗಡಿ: 9741197757, ಶಾಂತಿನಾಥ ಕೆ. ಹೋತಪೇಟಿ: 9980897979, ಭರತ ಎ. ಮುತ್ತಗಿ: 9845563752, ರಾಜಶ್ರೀ ಕುಸನಾಳೆ: 9972012020. ವಿ.ಸೂ : ಶಿಬಿರವು ಸರ್ವಧರ್ಮಿಯರಿಗೂ ಮುಕ್ತವಾಗಿರುತ್ತದೆ.