ಕುಪ್ಪೆಪದವು: ಜೈನ್ ಮಿಲನ್ ವತಿಯಿಂದ ವಕೀಲೆ ಶ್ವೇತಾ ಜೈನ್ ರವರಿಗೆ ಗೌರವ
Published Date: 26-Aug-2026
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನ್ಯಾಯ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ವಕೀಲೆ ಶ್ವೇತ ಜೈನ್ ಅವರನ್ನು ಕುಪ್ಪೆಪದವು ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು. 2026-28ನೇ ಸಾಲಿಗೆ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿಯಾಗಿ ಪುನರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಕುಪ್ಪೆಪದವು ಮತ್ತು ಬೆಳುವಾಯಿ ಜೈನ್ ಮಿಲನ್‌ಗೆ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಿದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಅಧ್ಯಕ್ಷ ಧೀರೇಶ್ ಜೈನ್, ಕಾರ್ಯದರ್ಶಿ ಜಿನೇಂದ್ರ ಇಂದ್ರ, ಭೋಜರಾಜ್ ಜೈನ್, ಅಜಿತ್ ಕುಮಾರ್ ಜೈನ್, ಸ್ವರ್ಣ ಲತಾ, ಪದ್ಮಪ್ರಸಾದ್ ಇಂದ್ರ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು.