ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ
Published Date: 02-Jul-2026
ಲಕ್ನೋ ಬಳಿಯ ಕಾಕೋರಿ ದಿಗಂಬರ ಜೈನ ಅತಿಶಯ ಕ್ಷೇತ್ರದಲ್ಲಿ ಭಗವಾನ್ ಅಧಿನಾಥ ಸ್ವಾಮಿ ಪಂಚ ಕಲ್ಯಾಣ, ಕರ‍್ಕಳ ಶಿಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಡಿಯ ಪದ್ಮಾವತಿದೇವಿ ಮೂರ್ತಿಯ ಪ್ರತಿಷ್ಠಾಪನೆಯು ಆಚಾರ್ಯ 108 ವಿಶುದ್ಧ ಸಾಗರ, ಆಚಾರ್ಯ ಸುಬಲ ಸಾಗರ, ವಿವಿಕ್ತ ಶ್ರೀ ಮಾತಾಜಿಗಳವರುಗಳ ಪಾವನ ಸಾನಿಧ್ಯದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜಿನ ಆಗ ಮೊಕ್ತ ರೀತಿಯಲ್ಲಿ ನೆರವೇರಿತು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರು ಜ್ಞಾನವೇ ಸರ್ವರಿಗೂ ಹಿತವನ್ನು ಉಂಟು ಮಾಡುವುದು ಸಮಾನತೆ-ಸಭ್ಯತೆಯ ಪ್ರತೀಕ ಸಮವ ಸರಣ. ಉ.ಪ್ರ ಅವಧ್ಯ ಪ್ರಾಂತ್ಯದಲ್ಲಿ ಅತೀ ಹೆಚ್ಚು 18 ತೀರ್ಥಂಕರರು ಜನ್ಮ ಪಡೆದ ಪವಿತ್ರ ಭೂಮಿ ಭಗವಂತರ ಭಕ್ತಿ ಮುಕ್ತಿಗೆ ಸೋಪಾನ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಕೀರ್ತಿ ಸ್ವಾಮೀಜಿ ಹಸ್ತಿ ನಾಪುರ, ನರೇಶ್ ಪಂಡಿತ್,ಪ್ರವೀಣ್ ಶಾಸ್ತ್ರೀ, ಭೂಪಾಲ್, ಚಂದೇರಿ ಬ್ರ. ಬನಾರಸಿ ದಾಸ್ ಕ್ಷೇತ್ರದ ಅಧ್ಯಕ್ಷ ಕೈಲಾಶ್, ಸಂದೀಪ್, ಸನ್ಮತ್, ಸಜಲ್ ಜೈನ್, ಪಣಿರಾಜ್, ಅನುರಾಗ ಮಿಶ್ರ ಜಿಲ್ಲಾ ನ್ಯಾಯಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ 21 ಅಡಿಯ ಭಗವಾನ್ ಅಧಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕದಿಂದ ಮಹಾ ಮಸ್ತಕಾಭಿಷೇಕ ನೆರವೇರಿತು.