ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ


Logo

Published Date: 06-Jun-2026

ಮೂಡುಬಿದಿರೆ, ಜೂ. 6: ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ ) ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ದಾಖಲಿಸಿದ್ದು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಬಿಎಸ್ಸಿ ಕೃಷಿ, ನರ್ಸಿಂಗ್ ಪ್ರವೇಶಕ್ಕೆ ನೂರರ ಒಳಗಿನ rankಗಳನ್ನು ಪಡೆದಿರುತ್ತಾರೆ. ಕಾಲೇಜಿನ ತನ್ಮಯಿಕೋಟಿ, ( 18 ನೇ) ತನುಶ್ರೀಎಚ್ಆರ್ ( 23 ನೇ) ಧ್ರುವಂತ್ಕೆ (41ನೇ) , ನಿಖಿಲ್ಎಸ್ಎಸ್ ( 41 ನೇ) ನಿಶ್ಚಲ್ ( 58 ನೇ ) rank ಪಡೆದು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿವಿಧ ವೃತ್ತಿಪರ ಕೋಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು rank ಗಳಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಅಧ್ಯಕ್ಷರಾದ ಯುವರಾಜಜೈನ್, ಕಾರ್ಯದರ್ಶಿ ರಶ್ಮಿತಾಜೈನ್, ಪ್ರಾಂಶುಪಾಲರಾದ ಪುಷ್ಪರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾಕ್ಟರ್ ಪ್ರಶಾಂತ್ ಹೆಗಡೆ , ಸಿಇಟಿ ಸಮನ್ವಯಕಾರ ರಂಜಿತ್ ಜೈನ್ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ನಿರಂತರ ಶೈಕ್ಷಣಿಕ ಮಾರ್ಗದರ್ಶನ, ಪರೀಕ್ಷಾ ಪೂರ್ವ ತರಬೇತಿ, ವಿಶೇಷ ಅಭ್ಯಾಸ ತರಗತಿಗಳು, ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img