ರತ್ನತ್ರಯ ಜೈನ ಮಿಲನ್ ಸಭೆ
Published Date: 07-Mar-2026
ದಿನಾಂಕ 06-03-2026ಶುಕ್ರವಾರದಂದು ರತ್ನತ್ರಯ ಜೈನ ಮಿಲನ್ ಆನ್‌ಲೈನ್ ಸಭೆ ಜರುಗಿತು. ಮುಖ್ಯ ಅತಿಥಿಗಳಾಗಿ ತ್ರಿಶಲಾ ಬ್ರಹ್ಮಯ್ಯ ಹಾಗೂ ರತ್ನತ್ರಯ ಜೈನ್ ಮಿಲನ್ ಅಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು. ಸಾಮೂಹಿಕ ಪಂಚ ನಮಸ್ಕಾರ ಪಠಣೆ, ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಭಾಮಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಣಿ ಪ್ರಫುಲ್ಲ ಅವರು ಸ್ವಾಗತ ಭಾಷಣ ಮಾಡಿದರು. ಸುನೀತಾ ಸುಂದರರಾಜ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮ ಸೂರಿ ಅವರು ಪರ್ವವಾಚನ ಮಾಡಿದರು. ಶ್ವೇತಾ ನವೀನ್ ಅವರು ಹಿಂದಿನ ಸಭೆಯ ವರದಿಯನ್ನು ಪ್ರಸ್ತುತಪಡಿಸಿದರು. ಶೋಭಿತಾ ನವೀನ್ ಅವರು ಮಾರ್ಚ್ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ್ ಸದಸ್ಯರಿಗೆ ಶುಭ ಕೋರಿದರು. ಚಂದನ ಸುರೇಂದ್ರ ಅವರು ಜಿನ ಭಕ್ತಿ ಗೀತೆಯನ್ನು ಹಾಡಿದರು. ಮಹಾವೀರ ಕುಮಾರ್ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತ್ರಿಶಲಾ ಬ್ರಹ್ಮಯ್ಯ ಅವರು ‘ಬದಲಾಗುತ್ತಿರುವ ಸಮಾಜದಲ್ಲಿ ಜೈನ ಧರ್ಮ’ ಈ ಕುರಿತು ಅತ್ಯಂತ ಉಪಯುಕ್ತ ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತರವರು ನಡೆಸಿಕೊಟ್ಟರು. ಉಷಾ ರಾಣಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.