ಭಾರತೀಯ ಜೈನ್ ಮಿಲನ್ ವಲಯ-8 ಸಭೆ
Published Date: 12-Jul-2025
ತಾ. 22.06.2025ನೇ ಭಾನುವಾರ ಜೈನ್ ಮಿಲನ್ ಪುತ್ತೂರು ಶಾಖೆ ಮತ್ತು ಜೈನ್ ಮಿಲನ್ ಇಚ್ಲಂಪಾಡಿ ಶಾಖೆ ಜಂಟಿಯಾಗಿ ಪುತ್ತೂರು ಭ. ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪುತ್ತೂರು ಮಿಲನ್ ಅತಿಥೇಯತ್ವದಲ್ಲಿ ಜರಗಿತು. ಜಂಟಿ ಮಿಲನ್ ಸಭೆಯು ಸತೀಶ್ ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ವಲಯ ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ, ಮುಖ್ಯ ಅತಿಥಿಯಾಗಿ ಡಾ| ಮಹಾವೀರ್ ಜೈನ್, ಡಾ| ಅಶೋಕ್ ಪಡಿವಾಳ್, ಅಜಿತ್ ಪ್ರಸಾದ್ ರೈ, ಕಾರ‍್ಯದರ್ಶಿ ರಾಜೇಶ್ ಕುಮಾರ್ ವಿ. ಇಚ್ಲಂಪಾಡಿ ಜೈನ್ ಮಿಲನ್ ಅಧ್ಯಕ್ಷರು ಹೇಮಾವತಿ ಮಹವೀರ್, ಕಾರ‍್ಯದರ್ಶಿ ದೀವಿಕ ರವೀಂದ್ರ ಜೈನ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಬಸದಿ ದರ್ಶನ ಕ್ರಮ ಮತ್ತು ಮಹತ್ವವನ್ನು ಅರ್ಥಪೂರ್ಣವಾಗಿ ಸಭೆಗೆ ತಿಳಿಸಿದರು. ಪುತ್ತೂರು ಜೈನ ಮಿಲನ್ ವತಿಯಿಂದ ಡಾಕ್ಟರೇಟ್ ಪದವಿ ಮಹಾವೀರ್ ಜೈನ್ ಇಚ್ಲಂಪಾಡಿ ಹಾಗೂ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು. ಪುತ್ತೂರು ಹಾಗೂ ಇಚ್ಲಂಪಾಡಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮದುವೆ ದಿನ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ‍್ಯಕ್ರಮವು ಬೆಳಿಗ್ಗೆ 10ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮದ್ಯಾಹ್ನ 2.00 ಗಂಟೆಗೆ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.