ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ
Published Date: 08-Jul-2025
ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎ ಎಮ್ ಖಾನ್ ಇವರನ್ನು ಇಂದು ಕ ವಿ ವಿ ಜೈನ ಅಧ್ಯಯನ ಪೀಠ ಮತ್ತು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ವತಿಯಿಂದ ಅಭಿನಂದಿಸಿ ಸತ್ಕರಿಸಲಾಯಿತು. ಪೀಠದ ಸಂಯೋಜಕರು ಹಾಗೂ ಟ್ರಸ್ಟಿನ ಅಧ್ಯಕ್ಷರೂ ಆದ ಡಾ. ಜಿನದತ್ತ ಹಡಗಲಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ,ದನಪಾಲ ಜೆ ಮುನ್ನೊಳ್ಳಿ, ಧರಣೇoದ್ರ ಜವಳಿ, ಡಾ. ಆರ್.ಎ. ಬಾಳಿಕಾಯಿ ಮುಂತಾದವರು ಭಾಗವಹಿಸಿದ್ದರು. ಕುಲಪತಿಗಳು ಜೈನ ಅಧ್ಯಯನ ಪೀಠದ ಅಭಿವೃದ್ಧಿಗೆ ಮತ್ತು ಕಾರ್ಯಾಚಟುವಟಿಕೆಗೆ ನನ್ನ ಸಹಾಯ ಸಹಕಾರ ನೀಡುವುದಾಗಿ ಹೇಳಿದರು. ವರದಿ : ಶಾಂತರಾಜ ಮಲ್ಲಸಮುದ್ರ