ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ


Logo

Published Date: 02-Jul-2025

ದಿಗಂಬರ ಪಾರ್ಶ್ವನಾಥ ಜೈನ ಬಸದಿಯ ಜೀರ್ಣೋದ್ಧಾರದ 17ನೇ ವರ್ಷದ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು ಧರ್ಮ, ರಾಜಕೀಯ, ಸಂಸ್ಕೃತಿಗೆ ಚಾಮರಾಜನಗರ ಪ್ರಸಿದ್ಧಿಯಾಗಿದ್ದು ಕರ್ನಾಟಕಕ್ಕೆ ಅದರ್ಶಪ್ರಾಯವಾಗಿದೆ. ಇಲ್ಲಿರುವ ಹರಳುಕೋಟೆ ಹಾಗೂ ಹರದವಹಳ್ಳಿಯಲ್ಲಿರುವ ದೇವಸ್ಥಾನಗಳು ಪುರಾತನವಾಗಿವೆ. ವಿಜಯ ಪಾರ್ಶ್ವನಾಥ ಸ್ವಾಮಿ ದೇವಸ್ಥಾನ 1116ರಲ್ಲಿ ನಿರ್ಮಾಣವಾಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಜನಪದ ಕಲೆಗೂ ಜಿಲ್ಲೆ ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಿ. ಆರ್. ಆಶ್ವಥ್ ನಾರಾಯಣ್ ಮತ್ತು ವೆಂಕಟನಾಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಜೈಶಾಮಾದೇವಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬ್ರಹ್ಮೇಶ್ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img