ಬೆಂಗಳೂರು: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024
Published Date: 25-Jan-2024
ವೇಣೂರು ಭ|| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿನ 10 ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗಳ ಪಿಕ್ಚರ್ ಪೋಸ್ಟ್ ಕಾರ್ಡ್ ಹಾಗೂ ಜೈನ ಧರ್ಮದ ಮಹತ್ವ ಸಾರುವ ವಿಶ್ವ ಶಾಂತಿ, ಬದುಕು ಮತ್ತು ಬದುಕಲು ಬಿಡು, ಸತ್ಯ ಅಹಿಂಸೆಯ ಸಂದೇಶದ ವಿಶೇಷ ಸರಕಾರಿ ಅಂಚೆ ಮುದ್ರೆಗಳನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024ನಲ್ಲಿ ಲೋಕಾರ್ಪಣೆಗೊಳಿಸಲಾಯಿತು. ನಂತರ ಕರ್ನಾಟಕದ ಐತಿಹಾಸಿಕ ಭವ್ಯ ಸಂಸ್ಕೃತಿ, ಪರಂಪರೆ ಸಾರುವ ಪ್ರಮುಖ ಸ್ಥಳಗಳ ಕುರಿತು ಭಾರತೀಯ ಅಂಚೆ ಇಲಾಖೆ ಶಾಶ್ವತ ಮುದ್ರೆಗಳನ್ನು ಲೋಕಾರ್ಪಣೆ ಮಾಡುವ ಕಾರ್ಯದಲ್ಲಿ ವಿಶೇಷ ಶ್ರಮ ವಹಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಸಂಸ್ಕಾರ ಸ್ಕೂಲ್ ಅಧ್ಯಕ್ಷ ಮಹಾವೀರ ಕುಂದೂರ ಅವರನ್ನು ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ ಅವರು ಗೌರವಿಸಿದರು.