ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ
Published Date: 09-Mar-2025
ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ಪಟ್ಟಣದ ಪಾರ್ಶ್ವನಾಥ ಜಿನ ಮಂದಿರದ ಶ್ರೀ ಪಾರ್ಶ್ವನಾಥ ಸಭಾ ಮಂಟಪದಲ್ಲಿ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮಾ. 08ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನಿಯ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಎಂ.ಡಿ. ಪದ್ಮಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಾಧಕೀಯರಾದ ಮಹಾವೀರ ಅಲ್ಪಸಂಖ್ಯಾತರ ಪತಿನ ಸಹಕಾರ ಸಂಘದ ಪುಷ್ಪವತಿ ಪಾರ್ಶ್ವನಾಥ ರೇವಡಿ, ಶಿಲ್ಪ ಸಂತೋಷ ಸೂಗುರು, ನಾಗ ಮಂಜುಳಾ ಜೈನ್‌ರನ್ನು ಸನ್ಮಾನಿಸಲಾಯಿತು. ಚಂಪರಾಯಪ್ಪ ಹೊಳಲು ಸ್ವಾಗತಿಸಿದರು. ಅನುಷಾ ಮಯೂರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೇಘ ಭಾಗೇಶ್ ಜೈನರ್ ವಂದಿಸಿದರು.