Article Image

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

Article Image

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

ಜೈನ ಯುವ ಗೆಳೆಯರ ಬಳಗ (ಯೂತ್ ವಿಂಗ್, ಜೈನ ಗೆಳೆಯರ ಬಳಗ) ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಜುಲೈ 13ರಂದು ಭಾನುವಾರ, ಬೆಳಿಗ್ಗೆ 9:30 ರಿಂದ ಸಂಜೆ 5:00ರವರೆಗೆ ಮಂಜುಷಾ ಸ್ಪೋರ್ಟ್ಸ್ ಕ್ಲಬ್ ಪಟೇಲ್ ಚಿನ್ನಪ್ಪ ರೋಡ್, ಆದಿತ್ಯ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರಿನಲ್ಲಿ ಆಯೋಜಿಸಿದೆ. ಕೇವಲ ದಿಗಂಬರ ಜೈನರಿಗೆ ಮಾತ್ರ, ಸ್ಪರ್ಧೆಯ ವಿಭಾಗಗಳು: ಪುರುಷರ ಡಬಲ್ಸ್: 40 ವರ್ಷಕ್ಕಿಂತ ಕಡಿಮೆ, 40 ವರ್ಷಕ್ಕಿಂತ ಹೆಚ್ಚು ಮಹಿಳೆಯರ ಡಬಲ್ಸ್: 35 ವರ್ಷಕ್ಕಿಂತ ಕಡಿಮೆ, 35 ವರ್ಷಕ್ಕಿಂತ ಹೆಚ್ಚು ಪ್ರವೇಶ ಶುಲ್ಕ: ₹ 800/- (ಪ್ರತಿ ತಂಡಕ್ಕೆ), ಸೀಮಿತ ಸ್ಥಾನಗಳು ಮಾತ್ರ ನಿರಾಶೆಯಾಗದಂತೆ ಮುಂಚಿತವಾಗಿ ನೋಂದಾಯಿಸಿ. ಗಮನಿಸಬೇಕಾದ ಸಂಗತಿಗಳು: - ವಯಸ್ಸಿನ ಪುರಾವೆಗಾಗಿ ಆಧಾರ್ ಪ್ರತಿ ಅಗತ್ಯ - ರಾಜ್ಯ/ರಾಷ್ಟ್ರೀಯ ಶ್ರೇಣಿಯ ಆಟಗಾರರಿಗೆ ಅನುಮತಿಯಿಲ್ಲ - ಯೋನೆಕ್ಸ್ ಮಾವಿಸ್ 350 ಶಟಲ್ ಬಳಸಲಾಗುವುದು - ಅಂಪೈರ್ ನಿರ್ಧಾರ ಅಂತಿಮ - ಆಟಕ್ಕೆ ಮಾರ್ಕ್ ಇಲ್ಲದ ಶೂಗಳು ಮಾತ್ರ ಅನುಮತಿ - ಎಲ್ಲಾ ಭಾಗವಹಿಸುವವರಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು - ಎಲ್ಲರಿಗೂ ಮಧ್ಯಾಹ್ನದ ಊಟ ಒದಗಿಸಲಾಗುವುದು ಪ್ರಶಸ್ತಿಗಳು: ವಿಜೇತರು, ಉಪವಿಜೇತರಿಗೆ ಟ್ರೋಫಿಗಳು ನೋಂದಣಿಗಾಗಿ ಸಂಪರ್ಕಿಸಿ: ಸನ್ಮತಿ - 91 98453 28203 ಮಹಾವೀರ್ ರಾಜಕೀರ್ತಿ- 91 97427 09709 ವಿದ್ಯಾನಂದ - 91 98450 81162 ಚಿರಂತ್ - 91 72046 96475

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

Article Image

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

ಜೈನ ಧರ್ಮದ ಸಂಪ್ರದಾಯದಲ್ಲಿ ಶೋಭಾನೆಗೆ ಬಹಳ ಮಹತ್ವವಿದೆ ಈ ಶೋಭಾನೆಗಳನ್ನು ಪಂಚಕಲ್ಯಾಣದ ವಿಧಿ-ವಿಧಾನಗಳಲ್ಲಿಯೂ ಕೂಡಾ ಹಾಡುತ್ತಾರೆ ಮದುವೆ, ಸೀಮಂತ, ನಾಮಕರಣ, ಉಪನಯನದ ಕಾರ್ಯಕ್ರಮಗಳಲ್ಲಿ ಶೋಭಾನೆ ಹಾಡುಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎಂದು ಮೂಡಬಿದಿರೆಯ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರು ಪುಸ್ತಕವನ್ನು ಶ್ರುತ ಪಂಚಮಿಯ ದಿನದಂದು ಶ್ರೀ ಜೈನ ಮಠ ಮೂಡಬಿದಿರೆಯಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಶೋಭಾನೆ ಹಾಡುಗಳ ಪುಸ್ತಕವನ್ನು ರಚಿಸಿದ ವಾಣಿಶ್ರೀ ಅಭಯ ಕುಮಾರ್ ಮೂಡಬಿದಿರೆ ಇವರನ್ನು ಶಾಲು ಹೊದಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಪಟ್ನ ಶೆಟ್ಟಿ ಸುಧೇಶ್ ಕುಮಾರ್, ಬಾಹುಬಲಿ ಪ್ರಸಾದ್, ಅಭಯ ಕುಮಾರ್, ವೀಣಾ ರಘ ಚಂದ್ರ, ವೃಂದಾ ರಾಜೇಂದ್ರ, ರೇಖಾ ಸುಧೇಶ್ ಕುಮಾರ್, ಮಂಜುಳ ಅಭಯ ಚಂದ್ರ, ಶ್ಚೇತಾ ಜೈನ್, ಉಷಾ ಜಯ ವೀರ್, ಮಂಜುಳ ಯಶೋಧರ್, ರಾಜೇಶ್ವರಿ ಶಂಭವ ಕುಮಾರ್, ಸುಧಾ ಪೃಥ್ವಿರಾಜ್ ಶಕುಂತಳಾ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

Article Image

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ಮೂಡುಬಿದಿರೆ, ದ.ಕ ಇಲ್ಲಿಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ 02-06-2025ನೇ ಸೋಮವಾರದಂದು ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನಡೆಸಲಾಯಿತು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ನೊಂದಿಗೆ ಮೆರವಣಿಗೆಯ ಮೂಲಕ ಶಾಲಾ ಸಭಾಭವನಕ್ಕೆ ಕರೆತರಲಾಯಿತು. ಸಮಾರಂಭದ ಉದ್ಘಾಟನೆಯನ್ನು ಪುರಸಭೆಯ ಸದಸ್ಯರಾದ ಶ್ವೇತಾ ಪ್ರವೀಣ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶಾಲೆಯ ಕೀರ್ತಿಯನ್ನು ಹೆಚ್ಚಿಸುವ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿಯ ಅಧ್ಯಕ್ಷರಾದ ಪವನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿದರು. ಶಾಲೆಯ ಎಲ್ಲಾ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನಾಡಿದರು. ತಾಯಂದಿರ ಸಮಿತಿಯ ಅಧ್ಯಕ್ಷರಾದ ಆರತಿ ಜೈನ್ ಉಪಸ್ಥಿತರಿದ್ದರು. 2025-26ನೆ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಶಾಲೆಯ ಹಿರಿಯ ಶಿಕ್ಷಕಿಯಾದ ಮಂಜುಳ ಜೈನ್ ಕಾರ್ಯಕ್ರಮದ ಅದ್ಯಕ್ಷಸ್ಥಾನವನ್ನು ವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಸ್ವಾಗತಿಸಿ ತಮ್ಮ ಪ್ರಾಸ್ತವಿಕ ನುಡಿಯಲ್ಲಿ 2025-26ನೇ ಸಾಲಿನ ಯೋಜನೆಯ ಬಗ್ಗೆ ತಿಳಿಸಿದರು. 1 ರಿಂದ 7ನೇ ತರಗತಿಯವರೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಸ್ವ-ಪರಿಚಯ ಮಾಡಿಕೊಂಡರು ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳ ಶಶೀಂದ್ರರವರು ನೆರವೇರಿಸಿದರು ಸಂದ್ಯಾರವರು ಧನ್ಯವಾದ ಗೈದರು.

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

Article Image

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

ಪಾಣೆಮಂಗಳೂರು: ಶ್ರೀ ಕ್ಷೇತ್ರ ಪಾಣೇರ್ ಭ। ೧೦೦೮ ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯ, ಭ। ೧೦೦೮ ಶ್ರೀ ಚಂದ್ರನಾಥ ತೀರ್ಥಂಕರ ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ ಜಿನ ಚೈತ್ಯಾಲಯದಲ್ಲಿ ಪರಮಪೂಜ್ಯ ಮುನಿಶ್ರೀ ೧೦೮ ಚಂದ್ರ ಸಾಗರ ಮುನಿ ಮಹಾರಾಜರ ಪುಣ್ಯಸ್ಮರಣೆಯೊಂದಿಗೆ, ಪರಮಪೂಜ್ಯ ಆಚಾರ್ಯ ೧೦೮ ಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರ ಪರಮಶಿಷ್ಯರಾದ ಯುವಸಂತ ಪರಮಪೂಜ್ಯ ಮುನಿಶ್ರೀ ೧೦೮ ವೀರ ಸಾಗರ ಮುನಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಪರಮ ಸಾಗರ ಮುನಿ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಪರಮಪೂಜ್ಯ ಭಾರತಭೂಷಣ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಜೈನ ಮಠ ಮೂಡಬಿದಿರೆ ಇವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಕಾರ್ಯಕಾರಿ ಸಮಿತಿಯ ಗೌರವಾದ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವ ಹಾಗೂ ಸಹಕಾರದೊಂದಿಗೆ ತ್ಯಾಗಿ ನಿವಾಸ, ಸಭಾಭವನ, ಭೋಜನ ಶಾಲೆ, ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಪೂಜಾ ಕಾರ್ಯಕ್ರಮವು 30-5-2025ನೇ ಶುಕ್ರವಾರದಂದು ಜರಗಲಿರುವುದು.

ಉಪನ್ಯಾಸ ಕಾರ್ಯಕ್ರಮ

Article Image

ಉಪನ್ಯಾಸ ಕಾರ್ಯಕ್ರಮ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಬಹು ನಿರೀಕ್ಷಿತ ಮತ್ತು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿ ತಿಂಗಳು ಕೊನೆಯ ಶನಿವಾರ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಾಸಿಕ ಸರಣಿ ಉಪನ್ಯಾಸ ಮಾಲಿಕೆ ದಿವ್ಯ ವಾಣಿ ಯು ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈಗಾಗಲೇ ಎರಡು ಉಪನ್ಯಾಸಗಳು ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಮೂರನೇ ಉಪನ್ಯಾಸ ಕಾರ್ಯಕ್ರಮವನ್ನು ಹುಬ್ಬಳ್ಳಿ ಗೋಕುಲ ರಸ್ತೆ ಮಾನಸಗಿರಿ ಇಲ್ಲಿನ ಮಹಾವೀರ ಭವನದಲ್ಲಿ ದಿನಾಂಕ 31-5-2025ರಂದು ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರು ಜೈನ ಅಧ್ಯಯನ ಪೀಠದ ಸಂಯೋಜಕರೂ ಆದ ಡಾ. ಜಿನದತ್ತ ಹಡಗಲಿ ಇವರು ವಹಿಸಲಿದ್ದು ಹಿರಿಯ ಉಪನ್ಯಾಸಕ ಡಾ. ವೈ ಎಮ್ ಭಜಂತ್ರಿ ಇವರು ಶೃತ ಪಂಚಮಿ ಮತ್ತು ಅದರ ಮಹತ್ವ ಕುರಿತಾಗಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಇಲ್ಲಿನ ತ್ರಿಕೂಟ ಬಸದಿಯ ಭ. ಮಹಾವೀರ ಜೈನ ಹಿತವರ್ಧಕ ಸಂಘದ ಮತ್ತು ಸನ್ಮತಿ ಮಹಿಳಾ ಮಂಡಳದ ಪದಾಧಿಕಾರಿಗಳ ಗೌರವ ಉಪಸ್ಥಿತಿ ಇರಲಿದೆ. ಟ್ರಸ್ಟಿನ ಗೌರವಾಧ್ಯಕ್ಷ ಡಾ. ಅಜಿತ್ ಪ್ರಸಾದ, ಹುಬ್ಬಳ್ಳಿ ಜೈನ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ್ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ್ ಸೇರಿದಂತ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಹಾಗೂ ಉಪನ್ಯಾಸ ಮಾಲಿಕೆಯ ಪ್ರೇರಕರೂ ಆದ ಎಸ್.ಆರ್. ಮಲ್ಲಸಮುದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತದೆ. ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಭಾಗವಹಿಸಿ ಮಂಗಲ ಪ್ರವಚನ ನೀಡಿದರು. ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ. ಪೂಜೆಯಲ್ಲಿ ದ್ರವ್ಯಪೂಜೆ ಮತ್ತು ಭಾವಪೂಜೆ ಎಂಬ ಎರಡು ವಿಧಗಳಿದ್ದು ದ್ರವ್ಯಪೂಜೆಯು ಭಾವಪೂಜೆಗೆ ನಾಂದಿಯಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ಮೂಲಕ ದಾನವೇ ಧರ್ಮವಾಗಿ ಧರ್ಮಸ್ಥಳದಲ್ಲಿ ನೆಲೆನಿಂತಿದೆ. ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೂಡಾ ತಮ್ಮ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲಾ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಧರ್ಮಸ್ಥಳಕ್ಕೆ ಬಂದಾಗ ತವರು ಮನೆಗೆ ಬಂದ ಅನುಭವ ತಮಗಾಗಿದೆ. ಹೆಗ್ಗಡೆಯವರು ಮತ್ತು ಕುಟುಂಬದವರ ಸೇವಾವೈಖರಿ ಶ್ಲಾಘಿಸಿ ಅಭಿನಂದಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯೆಯೊಂದಿಗೆ ತಮಗೆ ದೊರೆತ ಸಂಸ್ಕಾರ, ಶಿಸ್ತು ಮತ್ತು ಮಾರ್ಗದರ್ಶನದಿಂದ ತಮ್ಮ ಇಂದಿನ ಸ್ಥಾನಕ್ಕೆ ಶೋಭೆ ತಂದಿದೆ ಎಂದರು. ಸಿದ್ಧವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣೀಜಿಯವರ ಸ್ಮಾರಕವನ್ನು ನಿರ್ಮಿಸಬೇಕೆಂದು ಸ್ವಾಮೀಜಿ ಹೆಗ್ಗಡೆಯವರಿಗೆ ಸಲಹೆ ನೀಡಿದರು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಂಚನಮಸ್ಕಾರ ಮಂತ್ರ ಪಠಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿದರು. ಉಭಯ ಸ್ವಾಮೀಜಿಯವರ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು. ಹೇಮಾವತಿ ವೀ. ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್, ಸೋನಿಯಾವರ್ಮ ಉಪಸ್ಥಿತರಿದ್ದರು. ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿಯವರು ಸಿದ್ಧವನ ಗುರುಕುಲಕ್ಕೂ ಭೇಟಿ ನೀಡಿದರು.

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

Article Image

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

ಭಾರತ ದೇಶ ಮೂಲತಃ ಅಹಿಂಸೆಯನ್ನು ಬಯಸುತ್ತಿದೆ. ಈ ಅಹಿಂಸೆಗೆ ತೊಡಕಾಗಿರುವ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನೆ ತೊಡಕಾಗಿದೆ. ಭಗವಾನ್ ಮಹಾವೀರ, ಬುದ್ಧ, ಶ್ರೀರಾಮಚಂದ್ರ ಇವರೆಲ್ಲ ಅಹಿಂಸೆಯ ಪ್ರತಿಪಾದಕರಾಗಿದ್ದರೂ ಹಿಂಸೆಗೆ ಕಾರಣವಾಗುವ ವಿಚಾರಗಳನ್ನು ವಿರೋಧಿಸಿದವರಾಗಿದ್ದಾರೆ. ಪಾಕಿಸ್ಥಾನಕ್ಕೆ ತನ್ನ ಪ್ರಜೆಗಳ ಹಿತಕ್ಕಿಂತ ನೆರೆಯ ರಾಷ್ಟ್ರ ಭಾರತಕ್ಕೆ ಕಿರುಕುಳ ನೀಡುವ ಮಾನಸಿಕ ವಿಕೃತಿಯಲ್ಲಿ ಸಂತೋಷವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತದ ಆಪರೇಷನ್ ಸಿಂಧೂರ ಸರಿಯಾದ ಕ್ರಮವಾಗಿದೆ. ಇದರಿಂದಾಗಿ ಭಯೋತ್ಪಾದಕ ಮನಸ್ಸುಗಳು ನಿರ್ನಾಮವಾಗಿ ಶಾಂತಿ ನೆಲೆಸಲಿ. ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರವಾಗಿಯೇ ಇರಲಿದೆ. ಜೈ ಹಿಂದ್

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Article Image

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ನರೇಂದ್ರಮೋದಿಯವರ ದಕ್ಷ ಮಾರ್ಗದರ್ಶನದಲ್ಲಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೈನಿಕರನ್ನು ಅಭಿನಂದಿಸಿ, ಅವರಿಗೆ ಮುಂದೆಯೂ ಸರ್ವರೀತಿಯ ಯಶಸ್ಸನ್ನು ಕೋರಿ ಗುರುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿದರು. ಸೈನಿಕರಿಂದ ದೇಶದ ರಕ್ಷಣಾಕಾರ್ಯ ಯಶಸ್ವಿಯಾಗಲಿ ಹಾಗೂ ಭಯ ಮತ್ತು ಆತಂಕ ನಿವಾರಣೆಯಾಗಿ ಎಲ್ಲೆಲ್ಲೂ ಸದಾ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಗೊಳ್ಳಲಿ ಎಂದು ಹೆಗ್ಗಡೆಯವರು ಹಾರೈಸಿದ್ದಾರೆ.

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

Article Image

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖಾ ಅಧಿಕಾರಿಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ರಾಜೇಶ್ ಎಮ್.ರವರು ಪ್ರಸ್ತುತ ಮಂಗಳೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾರ್ಷಿಕೋತ್ಸವ ಸಮಾರಂಭ

Article Image

ವಾರ್ಷಿಕೋತ್ಸವ ಸಮಾರಂಭ

ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಮಾರಂಭವು ಮೇ. 10, 11 ಮತ್ತು 12ರಂದು ನಡೆಯಲಿದೆ. ಮೇ, 10 : ಶನಿವಾರ: ಬೆಳಿಗ್ಗೆ ಗಂಟೆ 8.45ಕ್ಕೆ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನವಕಲಶ ಅಭಿಷೇಕ. ಸಂಜೆ ಗಂಟೆ 4 ರಿಂದ ನಾಂದಿಮಂಗಲ, ಪೂಜಾವಿಧಾನ, ಮಹಾಮಂಗಳಾರತಿ ಮೇ, 11 : ಭಾನುವಾರ : ಬೆಳಿಗ್ಗೆ ಗಂಟೆ 8.30 ರಿಂದ ವಾಸ್ತುಪೂಜಾ ವಿಧಾನ, ಋಷಿಮಂಡಲ ಯಂತ್ರಾರಾಧನೆ, 16 ಕಲಶಾಭಿಷೇಕ. ಸಂಜೆ ಗಂಟೆ 4 ರಿಂದ ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮಹಾಮಂಗಳಾರತಿ ಮೇ, 12: ಸೋಮವಾರ: ಬೆಳಿಗ್ಗೆ ಗಂಟೆ 9 ರಿಂದ ಕಲಿಕುಂಡ ಯಂತ್ರಾರಾಧನೆ ಸಂಜೆ ಗಂಟೆ 5.30ರಿಂದ ಭವ್ಯ ಅಗ್ರೋದಕ ಮೆರವಣಿಗೆ, 108 ಕಲಶ ಮಹಾಭಿಷೇಕ, ಮಹೋತ್ಸವ, ಮಹಾಮಂಗಳಾರತಿ

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

Article Image

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜ ಗ್ರಾಮದಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಪ್ರತಿಷ್ಠಾ ಮಹೋತ್ಸವದ 39ನೆ ವಾರ್ಷಿಕೋತ್ಸವದ ಅಂಗವಾಗಿ ಮೇ. 3ರಂದು ಶನಿವಾರ ಬೆಳಿಗ್ಗೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 24 ಕಲಶಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಿನಭಜನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ. ರಾಜವೀರ ಇಂದ್ರ ತಿಳಿಸಿದ್ದಾರೆ. ಅಳಿಯೂರು ಆದಿರಾಜ ಜೈನ್ ನೇತೃತ್ವದಲ್ಲಿ ಸಂಗೀತ ಮತ್ತು ಭಜನೆಯೊಂದಿಗೆ ಶ್ರಾವಕರು ಮತ್ತು ಶ್ರಾವಕಿಯರಿಂದ ಹನ್ನೆರಡು ವೃತಗಳ ಪೂಜೆ ನಡೆಯಲಿದೆ. ಧಾರ್ಮಿಕ ಸಭೆ: ಭಾರತೀಯ ಜೈನ್ ಮಿಲನ್, ಮಂಗಳೂರು ವಲಯದ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಾರಾವಿ ಅಜಿತ್ ಕುಮಾರ್ ಜೈನ್ ಧಾರ್ಮಿಕ ಉಪಾನ್ಯಾಸ ನೀಡುವರು.

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

Article Image

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

ತುಮಕೂರು: ಚಿಕ್ಕಪೇಟೆಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಹೃದಯ ಸಂಬಂಧಿತ ರೋಗದ ಬಗ್ಗೆ ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರವು 27.04.2025ನೇ ಭಾನುವಾರ ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಟಸ್ಟ್ ವೆಲ್ ಹಾಸ್ಪಿಟಲ್ ವತಿಯಿಂದ ಡಾಕ್ಟರ್ ಅಮಿತ್ ಕುಮಾರ್ ಎಂ. ಒಸ್ವಾಲ್ ರವರು ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮುನ್ನೆಚ್ಚರಿಕೆಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಮಧುಮೇಹ,ರಕ್ತದೊತ್ತಡ, ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿಕೊಟ್ಟ ಟ್ರಸ್ಟ್ ಆಸ್ಪತ್ರೆಯ ಡಾ. ಅಮಿತ್ ಕುಮಾರ್ ಎಂ ಒಸ್ಪಾಲ್ ರವರು ಮತ್ತು ಅವರ ತಂಡಕ್ಕೆ ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

Article Image

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಗವಾನ್ ಮಹಾವೀರರ 2624 ನೆಯ ಜನ್ಮ ಜಯಂತಿಯನ್ನು ತುಮಕೂರು ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ವತಿಯಿಂದ ವೈಭವದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ನಂತರ ನಗರದ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದ ತ್ರಿಲೋಕ್ ಭವನದಿಂದ ಮೆರವಣಿಗೆ ಸಾಗಿದ ಭಕ್ತರು, ಗ್ರಾಮ ದೇವತೆ ವೃತ್ತ, ಚಿಕ್ಕಪೇಟೆ ವೃತ್ತ, ಚಿಕ್ಕಪೇಟೆಯ ಮುಖ್ಯರಸ್ತೆ, ಕೋಟೆ ಆಂಜನೇಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಜೈನ ಭವನದಲ್ಲಿ ಸಮಾವೇಶಗೊಂಡರು. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸಭೆಯನ್ನ ಉದ್ದೇಶಿಸಿ ಮಾತನಾಡಿ ಭಗವಾನ್ ಶ್ರೀ ಮಹಾವೀರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶಾಂತಿ, ಅಹಿಂಸೆಗೆ ಸಹಕರಿಸಬೇಕೆಂದರು. ಸವಿತಾ, ಸುಭೋದ್ ಕುಮಾರ್ ಜೈನ್ ಇಂದ್ರ ಇಂದ್ರಾಣಿಯರಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಗರದ ಸುರೇಶ್ ಬಾಂಡ್ ಟೀ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಯಿತು. ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ. ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷ ಕೆ.ಪಿ. ವೀರೇಂದ್ರ, ಡೈರಿ ರಾಜೇಂದ್ರ ಪ್ರಸಾದ್, ಟಿ.ಜೆ. ನಾಗರಾಜ್, ಎ. ಆರ್. ಬ್ರಹ್ಮಪ್ರಕಾಶ್, ಜ್ವಾಲಾಮಾಲಿನಿ, (ಎಂ.ಎಲ್.ಎ. ಮಾಲಮ್ಮ)ಮಂಜುಳಾ ಚಂದ್ರಪ್ರಭ, ಎಸ್‌.ವಿ. ಜಿನೇಶ್, ಬಿ .ಎಸ್ ಪಾರ್ಶ್ವನಾಥ, ವಿನಯ್ ಸೇರಿದ್ದಂತೆ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಸದಸ್ಯರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ. ರoಗನಾಥ - ತುಮಕೂರು.

ಮಹಾವೀರ ಜನ್ಮ ಕಲ್ಯಾಣೋತ್ಸವ

Article Image

ಮಹಾವೀರ ಜನ್ಮ ಕಲ್ಯಾಣೋತ್ಸವ

ಧರ್ಮಸ್ಥಳ, ಏಪ್ರಿಲ್ 10: ಇಂದು ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ, ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ತೀರ್ಥಂಕರರಿಗೆ ವಿಶೇಷ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆಗಳನ್ನು ಸಲ್ಲಿಸಲಾಯಿತು. ಬಳಿಕ, ಬಾಲ ತೀರ್ಥಂಕರನಿಗೆ ವೈಭವಯುತವಾದ ನಾಮಕರಣೋತ್ಸವವನ್ನು ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಸ್ಪರ್ಧೆಗಳು

Article Image

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಕರಾವಳಿ ಮತ್ತು ಮಲೆನಾಡಿನ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ ಪ್ರಯುಕ್ತ ಸರ್ವಧರ್ಮೀಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 20ರ ಭಾನುವಾರದಂದು ಬೆಳಿಗ್ಗೆ 09.30ರಿಂದ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳ ವಿವರ: ೧) ಚಿತ್ರಕಲಾ ಸ್ಪರ್ಧೆ: • ಪ್ರಾಥಮಿಕ ಶಾಲಾ ವಿಭಾಗ: ವಿಷಯ: ಸುಂದರ ಪ್ರಕೃತಿ • ಪ್ರೌಢಶಾಲಾ ವಿಭಾಗ: ವಿಷಯ: ರಥೋತ್ಸವ ಸಮಯ: 1 ಗಂಟೆ ೨) ಭಾಷಣ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ವಿಶ್ವಶಾಂತಿ ಮತ್ತು ಜೈನಧರ್ಮ ಸಮಯ: 4+1 ನಿಮಿಷ ೩) ಭಾಷಣ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ಜಾಗತಿಕ ಶಾಂತಿ ಹಾಗೂ ಜೈನಧರ್ಮ ಸಮಯ: 4+1 ನಿಮಿಷ ೪) ಪ್ರಬಂಧ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಮತ್ತು ಬದುಕಲು ಬಿಡು ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ-ಜೈನಧರ್ಮದ ಕೊಡುಗೆ ಸಮಯ: 45 ನಿಮಿಷಗಳು ೫) ಪ್ರಬಂಧ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಹಾಗೂ ಬದುಕಲು ಬಿಡಿ ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಸಮಯ: 45 ನಿಮಿಷಗಳು ಸ್ಪರ್ಧೆಗಳಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಪ್ರತಿಯೊಂದು ವಿಭಾಗದ ಸ್ಪರ್ಧೆಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿರುತ್ತವೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಬರುವಾಗ ತಪ್ಪದೇ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು. ಒಬ್ಬರು ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಏಪ್ರಿಲ್15ರ ಒಳಗೆ ತಮ್ಮ ಹೆಸರನ್ನು ಈ ವಾಟ್ಸಾಪ್ ನಂಬರ್ ಮೂಲಕ- 9448625888/ 9480600507 ತಿಳಿಸುವಂತೆ ಕೋರಲಾಗಿದೆ.

ತುಮಕೂರು: ಉಚಿತ ಬೇಸಿಗೆ ಶಿಬಿರ

Article Image

ತುಮಕೂರು: ಉಚಿತ ಬೇಸಿಗೆ ಶಿಬಿರ

ತುಮಕೂರು: ಇಲ್ಲಿಯ ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜವು ಹಲವಾರು ವರ್ಷಗಳಿಂದ ಬೇಸಿಗೆ ಶಿಬಿರ ಏರ್ಪಡಿಸುತ್ತಿದ್ದು, ಈ ವರ್ಷವು ಸಹ ಉಚಿತ ಬೇಸಿಗೆ ಶಿಬಿರ ಆಯೋಜಿಸಿರುತ್ತಾರೆ ರಜಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಸಂಸ್ಕಾರ ಶಿಬಿರದಲ್ಲಿ ನಿರ್ಯಾಪಕ ಮುನಿಗಳಾದ ಪರಮ ಪೂಜ್ಯ 108 ನಿಯಮಸಾಗರ ಮಹಾರಾಜರಿಂದ ತರಬೇತಿ ಹೊಂದಿ, ಅನೇಕ ಧಾರ್ಮಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಬೆಳಗಾವಿಯ ಸಂಪನ್ಮೂಲ ವ್ಯಕ್ತಿ ಸುಮನ್‌ಪತ್ರಾವಳಿಯವರು 5 ದಿನಗಳ ಕಾಲ ಮಕ್ಕಳ ಜೊತೆಯಲ್ಲಿದ್ದು ಅವರುಗಳ ಶ್ರೇಯೋಭಿವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವರು. ಇದರೊಂದಿಗೆ ಚಿತ್ರಕಲೆ, ಆಟೋಟ, ನಾಟಕ ವಿವಿಧ ಮನೋರಂಜನೆಯಿಂದಲೂ ಸಹ ಹಲವು ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರು. ಈ ವರ್ಷ ದಿನಾಂಕ: 11/04/2025 ರಿಂದ 20/04/2025ರ ವರೆಗೆ 10 ದಿನಗಳ ಶಿಬಿರದಲ್ಲಿ ಉಚಿತ ಊಟ, ವಸತಿ ಸೌಕರ್ಯ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕವಿತಾ ಅತ್ತಿಮಬ್ಬೆ ವಿದ್ಯಾಮಂದಿರ, ಚಿಕ್ಕಪೇಟೆ, ತುಮಕೂರು. ಮೊ. 8618408638

ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭ

Article Image

ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭ

ವೇಣೂರು: ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭವು ಯಾತ್ರಿ ನಿವಾಸದಲ್ಲಿ ಮಾ.3೦ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರರವರು ನೆರವೇರಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷರಾದ ಪ್ರಸನ್ನ ಆರ್.ಹೆಗ್ಡೆ , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ದ.ಕ. ಜಿಲ್ಲಾ ವಿಭಾಗದ ನಿರ್ದೇಶಕಿ ಮತ್ತು ಬ್ರಾಹ್ಮೀ ಜೈನ ಮಹಿಳಾ ಸಂಘದ ಅಧ್ಯಕ್ಷರು ಆದ ಸರೋಜಾ ಗುಣಪಾಲ್‌ ಜೈನ್‌ ಅಗಮಿಸಿ, ಶುಭ ಹಾರೈಸಿದರು. ಸಂಗೀತಾ ಶಿಕ್ಷಕರಾದ ಮೂಡುಬಿದಿರೆಯ ಭಗೀರಥ ಮಣಕೋಣ್‌ ರವರು ಸಂಗೀತ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಸುಮಧುರ ಗಾಯನವನ್ನು ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ಸುನೀತಾ ಎನ್.ಸಿ.ಬಲ್ಲಾಳ್‌ ಉಪಸ್ಥಿತರಿದ್ದರು. ಸುನೀತಾ ಎನ್.ಸಿ. ಬಲ್ಲಾಳ್‌, ಸುಜಯಭರತ್‌, ದೀಪಶ್ರಿ ಪ್ರಾರ್ಥಿಸಿದರು. ಚಂದ್ರಪ್ರಭ‌ ಜೈನ್ ರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಶ್ರಾವಕ- ಶ್ರಾವಕಿಯರು , ಮಕ್ಕಳು ಭಾಗವಹಿಸಿದ್ದರು. .ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

Article Image

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

ಮೈಸೂರು ಜಿಲ್ಲೆ, ಸರಗೂರು ತಾಲೂಕಿನ ಶ್ರೀಕ್ಷೇತ್ರ ಕನಕಗಿರಿ, ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ, ಭಾರತೀಯ ಜೈನ್ ಮಿಲನ್, ಮೈಸೂರು ವಿಭಾಗದ ನಿರ್ದೇಶಕರಾದ ಸರಗೂರಿನ ಎಸ್‌. ಎಸ್. ಸೋಮಪ್ರಭರವರು, ಅವರ ಸ್ವಗೃಹ "ಕನಕಾದ್ರಿ" ಯಲ್ಲಿ ಹಿಂದಿನ ವರ್ಷಗಳಂತೆ ಯಥಾಪ್ರಕಾರವಾಗಿ ಮಕ್ಕಳಿಗೆ ಬೇಸಿಗೆ ಧಾರ್ಮಿಕ ಶಿಬಿರವನ್ನು ಆಯೋಜಿಸಿದ್ದಾರೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳು ಉತ್ತಮ ಸಂಸ್ಕಾರ ಪಡೆಯಲು ಈ ಧಾರ್ಮಿಕ ಶಿಬಿರ ಅತ್ಯಂತ ಉಪಯುಕ್ತವಾಗಿದೆ. ದಿ:01-04-2025 ರ ಮಂಗಳವಾರದಿಂದ 8.ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅನುಭವಿ ಹಾಗೂ ಪ್ರಬುದ್ಧ ವಿದ್ವಾಂಸರು, ಉಪನ್ಯಾಸಕರುಗಳು, ಪಂಡಿತರುಗಳಿಂದ ಮಕ್ಕಳ ಅಭಿರುಚಿಗೆ ತಕ್ಕಂತೆ, ಅತ್ಯಂತ ಸರಳವಾಗಿ ಹಾಗೂ ಆಕರ್ಷಣೀಯವಾಗಿ ಧಾರ್ಮಿಕ ಪಾಠ ಪ್ರವಚನಗಳ ಜೊತೆಗೆ ಮನರಂಜನಾತ್ಮಕ ಹಾಗೂ ಭಕ್ತಿರಸ ಪ್ರಧಾನವಾದ ಭಕಿಗೀತೆಗಳು, ರೂಪಕಗಳು, ಕಥೆಗಳು, ಇತ್ಯಾದಿ ಜ್ಞಾನವರ್ಧನೆಯ ಪೂರಕ ಅಂಶಗಳು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಕೆಯಾಗಲಿದೆ. ಶಿಬಿರದ ಉದ್ಘಾಟನೆ ದಿ:: 01-04-2025ರ ಮಂಗಳವಾರ ಬೆಳಿಗ್ಗೆ 9-30 ಕ್ಕೆ ಶುಭಾಶೀರ್ವಾದ, ಮಾರ್ಗದರ್ಶನ: ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ಕನಕಗಿರಿ. ಗೌರವ ಉಪಸ್ಥಿತಿ : ಶ್ರೀ ಬಾಹುಬಲಿ ಬಯ್ಯಾಜಿ ತ್ಯಾಗಿಗಳು/ಬಾಲ ಬ್ರಹ್ಮಚಾರಿಗಳು,ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಶಿಷ್ಯರು, 5ನೇ ಪ್ರತಿಮಾಧಾರಿಗಳು. ಮುಖ್ಯ ಅತಿಥಿಗಳು: ಶೀಲಾ ಅನಂತರಾಜ್,ಮೈಸೂರು. ಗೌರವ ಉಪಾಧ್ಯಕ್ಷರು, ಭಾರತೀಯ ಜೈನ್ ಮಿಲನ್, ಕರ್ನಾಟಕ ರಾಜ್ಯ. ಬ್ರಹ್ಮದೇವಯ್ಯ ಜೈನ ಸಮಾಜದ ಹಿರಿಯ ಮುಖಂಡರು ಸರಗೂರು. ಪ್ರಥಮ ದಿನದ ಬೆಳಗ್ಗೆ ಅವಧಿ: ಪಾಠ ಪ್ರವಚನಗಳ ಬೋಧನೆ: ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಉಪನ್ಯಾಸಕರಾದ ಡಾ. ಅರುಣಾಪ್ರಕಾಶ್ ರವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಅವಧಿ: ಶ್ರೀ ಬಾಹುಬಲಿ ಬಯ್ಯಾಜಿ ರವರಿಂದ, 5.ನೇ ತರಗತಿಯಿಂದ ಪಿ.ಯೂ.ಸಿ ತನಕ ಓದುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ10-00 ಗಂಟೆಗೆ ಪ್ರಾರಂಭವಾಗಿ ಸಂಜೆ 4-00 ಗಂಟೆಗೆ ಮುಕ್ತಾಯವಾಗುತ್ತದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳ ಜೊತೆಗೆ ಬಹುಮಾನಗಳನ್ನು ನೀಡಲಾಗುತ್ತದೆ. ಪಾಲಕರು/ಪೋಷಕರು ಮಕ್ಕಳನ್ನು ಬೆಳಿಗ್ಗೆ 9-30 ಗಂಟೆಗೆ ಶಿಬಿರಕ್ಕೆ ಕರೆತಂದು ಬಿಟ್ಟು, ಸಂಜೆ 4-00 ಗಂಟೆ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗೆ ಸೇರಿರುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಬೆಳಿಗ್ಗೆ 11-00 ಗಂಟೆಗೆ ಕಾಫಿ/ ಟೀ/ ಬಿಸ್ಕತ್ತು, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಸ್ನಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಸರಗೂರು ಹಾಗೂ ಹೆಚ್.ಡಿ.ಕೋಟೆ ತಾ. ವ್ಯಾಪ್ತಿಯ ಗ್ರಾಮಾಂತರದ ಮಕ್ಕಳುಗಳು ಈ ಸದಾವಕಾಶವನ್ನು ಬಳಸಿಕೊಳ್ಳಬೇಕೆಂದು ಎಸ್‌. ಎಸ್. ಸೋಮಪ್ರಭರವರು ತಿಳಿಸಿರುತ್ತಾರೆ. .ರಜಾ-ಮಜಾ ಜೊತೆಗೆ ಉತ್ತಮ ಸಂಸ್ಕಾರ, ಜ್ಞಾನಾರ್ಜನೆಯ, ಸದಭಿರುಚಿಯ ಬಾಲ್ಯದ ಶಿಕ್ಷಣ ಮಕ್ಕಳ ಪ್ರತಿಭಾ ಅನಾವರಣಕ್ಕೆ ಪೂರಕವಾಗಲಿದೆ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ. ಎಸ್.ಎಸ್. ಸೋಮಪ್ರಭ, ಸರಗೂರು: ಮೊ: 94487 93649 ಸಿ.ಎಸ್. ನಾಗರಾಜು, ಚಕ್ಕೂರು: ಮೊ: 94489 58024 ಜಿ. ಬಿ.ಚಂದ್ರಪ್ರಕಾಶ್, ಗುಜ್ಜಪ್ಪನಹುಂಡಿ: ಮೊ: 99452 59709

ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು

Article Image

ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು

ಭಗವಾನ್ ಶ್ರೀ 1008 ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಜೈನ್ ಪೇಟೆ ಮೂಡುಬಿದಿರೆ, ಜೈನ್ ಮಿಲನ್, ಶ್ರೀ ಮಹಾವೀರ ಸಂಘ (ರಿ.), ತೌಳವ ಇಂದ್ರ ಸಮಾಜ (ರಿ.), ತ್ರಿಭುವನ್ ಯೂತ್ ಅಸೋಸಿಯೆಶನ್, ರೋಟರಿ ಕ್ಲಬ್ ಟೆಂಪಲ್ ಟೌನ್, ಡಿ.ಜೆ.ಐ.ಐ ಸಂಘ (ನಿ.), ತ್ರಿಭುವನ್ ಹಾಗೂ ಬೆದ್ರ ಅಟೋ ಸ್ಪೋರ್ಟ್ಸ್ ಕ್ಲಬ್ (TASC-BAC), ತ್ರಿಭುವನ್ ಟ್ರಸ್ಟ್ (ರಿ.) ಬಸದಿ ಸ್ವಚ್ಚತಾ ತಂಡ, ಸರ್ವಮಂಗಳಾ ಮಹಿಳಾ ಸಂಘ, ಜೈನ್ ಮೆಡಿಕಲ್ ಸೆಂಟರ್‌ ಅಸ್ಪತ್ರೆ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಭ| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಎ. ಜೆ ಆಸ್ಪತ್ರೆ, ದಂತ ಕಾಲೇಜು, ಬ್ಲಡ್ ಬ್ಯಾಂಕ್, ಮಂಗಳೂರು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು ದಿನಾಂಕ: 10-04-2025 ಗುರುವಾರ, ಬೆಳಗ್ಗೆ ಗಂಟೆ 9.30ರಿಂದ 1.00ರವರೆಗೆ, ಶ್ರೀ ಧವಳಾ ಕಾಲೇಜು, ಜೈನ್ ಪೇಟೆ, ಮೂಡುಬಿದಿರೆಯಲ್ಲಿ ನಡೆಯಲಿದೆ. ವಿಭಾಗಗಳು • ಬಿಪಿ/ ಬ್ಲಡ್ ಶುಗರ್ (BP ECG, BLOOD SUGAR) • ಕಿವಿ, ಮೂಗು, ಗಂಟಲು (ENT) • ಸಾಮಾನ್ಯ ಅರೋಗ್ಯ ವಿಭಾಗ (GRL MEDICINE) • ನೇತ್ರ ಚಿಕಿತ್ಸೆ (Eye) • ಸ್ತ್ರೀ ರೋಗ (OBG) ಎಲುಬು / ಕೀಲು(ARTHO) • ಚರ್ಮ (SKIN) • ದಂತ ಚಿಕಿತ್ಸೆ (DENTAL) ಮಾಹಿತಿಗಾಗಿ ಸಂಪರ್ಕಿಸಿ : ಡಾ| ಮಹಾವೀರ್ ಜೈನ್, ಮೊ: 9008384865 ಯತಿರಾಜ್ ಶೆಟ್ಟ, ಮೊ: 9448625888 ಪ್ರವೀಣ್ ಜೈನ್ ಬೆಳುವಾಯಿ, ಮೊ: 9886474143

ಬಂಟ್ವಾಳ: 33ನೇ ವರ್ಧಂತ್ಯುತ್ಸವ

Article Image

ಬಂಟ್ವಾಳ: 33ನೇ ವರ್ಧಂತ್ಯುತ್ಸವ

ಬಂಟ್ವಾಳ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ಅಜ್ಜಿಬೆಟ್ಟು ಬಸದಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಜಿಂಬ ಪ್ರತಿಷ್ಠಾ ಮಹೋತ್ಸವದ 33ನೇ ವರ್ಧಂತ್ಯುತ್ಸವವು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 02-04-2025ನೇ ಬುಧವಾರ ಜರಗಲಿರುವುದು.

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

Article Image

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

ರಾಜ್ಯದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆಯಲ್ಲಿ ಸಮುದಾಯದ ಪರವಾಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರಾಜ್ಯದ 44 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಜೈನರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಮೀಸಲಿಡಬೇಕು, ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ನಿಗಮದಲ್ಲಿ ಜೈನ ನಿರ್ದೇಶಕರು ಆಗಿಲ್ಲ ಸರ್ಕಾರ ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ಸರ್ಕಾರ ಹಿಂತೆಗೆದ್ದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ ವರೂರು ಶ್ರೀ ಕ್ಷೇತ್ರದ ಗುಣದರ ನoದಿ ಮಹಾರಾಜರು ಸರ್ಕಾರ ಮೂರು ಬೇಡಿಕೆಗಳ ಈಡೇರಿಕೆಗೆ ತಿಳಿಸಿದ್ದು , ಈ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲು ತಿಳಿಸಿದ್ದು, ಈ ಕಾರ್ಯಕ್ಕೆ ಸಚಿವರು ಉತ್ಸುಕರಾಗಿದ್ದಾರೆ ಎಂದರು. ಬೇರೆ ಸರ್ಕಾರಗಳಿಂದ ಉತ್ತರ ಸಿಗುತ್ತಿತ್ತು ಆದರೆ ಕಾರ್ಯಗತವಾಗುತ್ತಿರಲಿಲ್ಲ ಆದರೆ ಸಚಿವರಾದ ಜಮೀರ್ ಅಹಮದ್ ರವರಿಂದ ಇಂದು ಕಾರ್ಯಾಗತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೂಅಧಿವೇಶನಕ್ಕೆ ಮುನ್ನ ಒಂದು ಪ್ರಾಯೋಗಿಕ ಶಾಲೆ ಜೈನರಿಗಾಗಿ ನಿರ್ಮಿಸಲು ತಿಳಿಸಲಾಗಿತ್ತು ಆದರೆ ಪ್ರಾಯೋಗಿಕವಾಗಿ ಎರಡು ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರು ಪಾವನ ಸಾನ್ನಿಧ್ಯ ಆಶೀರ್ವಚನ ನೀಡಿದರು. ಪುರೋಹಿತ ರತ್ನ ದಿವ್ಯ ಪಂಡಿತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ಹಾಗೂ ಸಂಖ್ಯೆಕ ಸಚಿವರಾದ ಡಿ. ಸುಧಾಕರ್, ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್, ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಜಕೀರ್ತಿ ಕಲಾ ಗೌಡ, ಶೀತಲ್ ಗೌಡ ಪಾಟೀಲ್, ಆಶಾ ಪ್ರಭು, ಡಾ ನೀರಜಾ ನಾಗೇಂದ್ರ ಕುಮಾರ್, ಧರಣಿಂದ್ರ ಕುಮಾರ್ ಪ್ರಶಾಂತ್, ಎಂ. ಎಂ. ಜಿನೇಂದ್ರ, ಶೀತಲ ಕುಮಾರ್, ಮಾಳ ಹರ್ಷೇಂದ್ರ ಜೈನ್, ವಿ ಜೇ. ಬ್ರಹ್ಮಯ್ಯ, ಪದ್ಮಶ್ರೀ, ಪದ್ಮಿನಿ, ಅಜಿತ್ ಕುಮಾರ್, ಮಹಾವೀರ್, ಸ್ವರೂಪ್, ಜಿನೇಂದ್ರ, ಅನಿಲ್ ಕುಮಾರ್, ಕೋಮಲ ಬ್ರಹ್ಮದೇವಯ್ಯ, ಪ್ರಕಾಶ್ ಜೆ. ಪಿ. ರಾಜೇಶ್, ಅಶೋಕ್ ಕುಮಾರ್ ಸೇರಿದoತೆ ಕರ್ನಾಟಕದ ವಿವಿಧ ಭಾಗಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ಸಹಕಾರ್ಯದರ್ಶಿ, ರತ್ನತ್ರಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು .

ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ

Article Image

ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ

ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿಯಲ್ಲಿರುವ ಶ್ರೀ ಮದ್ದೇವಾಧಿದೇವ ಭ| ಶ್ರೀ ೧೦೦೮ ಮುನಿಸುವೃತನಾಥ ತೀರ್ಥಂಕರ ಜಿನಮಂದಿರದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ, ಶ್ರೀ ಜ್ವಾಲಮಾಲಿನಿ ದೇವಿ ಹಾಗೂ ಶ್ರೀ ಪದ್ಮಾವತಿ ದೇವಿಯವರ ಪೂಜಾ, ಶೃಂಗಾರ, ಉಡಿತುಂಬುವ ಕಾರ್ಯಕ್ರಮವು ಪ. ಪೂ. ಆಚಾರ್ಯ ಶ್ರೀ ೧೦೮ ಜಿನಸೇನ ಮಹಾರಾಜರು ಹಾಗೂ ಪ. ಪೂ. ೧೦೮ ಸಂಯಮ ಸಾಗರ ಮುನಿಮಹಾರಾಜರುಗಳ ಮಂಗಳ ಆಶೀರ್ವಾದಗಳೊಂದಿಗೆ ಮತ್ತು ನಾಂದಣಿ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕೊಲ್ಹಾಪುರ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯಸಾನ್ನಿಧ್ಯದಲ್ಲಿ ಮಾ. 29ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಡ್ಯ: ಮೂಲ ನಕ್ಷತ್ರ ಪೂಜಾ ಮಹೋತ್ಸವ

Article Image

ಮಂಡ್ಯ: ಮೂಲ ನಕ್ಷತ್ರ ಪೂಜಾ ಮಹೋತ್ಸವ

ಮಂಡ್ಯ: ಶ್ರೀ ಅತಿಶಯ ಕ್ಷೇತ್ರವಾದ ಶ್ರೀ ರಂಗಪಟ್ಟಣ ಕಾವೇರಿ ನದಿಯ ದ್ವೀಪದಲ್ಲಿರುವ ಭ| ಶ್ರೀ ೧೦೦೮ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಶ್ರೀ ಮೂಲ ನಕ್ಷತ್ರ ಪೂಜಾ ಮಹೋತ್ಸವ, ಶ್ರೀ 1008 ವೃಷಭ ತೀರ್ಥಂಕರರಿಗೆ ಮಹಾಭಿಷೇಕ ಪೂಜೆ 8-30 ಗಂಟೆಗೆ ಹಾಗೂ ಧರಣೇಂದ್ರ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜೆ, ಲಕ್ಷ ಹೂವಿನ ಅಲಂಕಾರ ಪೂಜೆ ಮತ್ತು ಮಧ್ಯಾಹ್ನ 12-00 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಮಹಾ ಮಂಗಳಾರತಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾ. 22ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಯಲಹಂಕದಲ್ಲಿ ನೂತನ ಜೈನ್ ಮಿಲನ್ ಶಾಖೆ ಪ್ರಾರಂಭ

Article Image

ಬೆಂಗಳೂರಿನ ಯಲಹಂಕದಲ್ಲಿ ನೂತನ ಜೈನ್ ಮಿಲನ್ ಶಾಖೆ ಪ್ರಾರಂಭ

ಬೆಂಗಳೂರು ಭಾರತೀಯ ಜೈನ್ ಮಿಲನ್ ವಲಯ ಎಂಟರ ಅಡಿಯಲ್ಲಿ ನೂತನವಾಗಿ ಬೆಂಗಳೂರಿನ ಯಲಹಂಕದಲ್ಲಿ ಜೈನ್ ಮಿಲನ್ ಶಾಖೆ ಪ್ರಾರಂಭಿಸಲಾಗಿದೆ. ಯಲಹಂಕ ಜೈನ್ ಮಿಲನ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಕ್ಕ ರಾಣಿ ಪ್ರಶಸ್ತಿ ಪುರಸ್ಕೃತರು, ಬೆಂಗಳೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಆದ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು, ರತ್ಮಾತ್ರಯ ಧಾರವಾಹಿಯ ನಿರ್ದೇಶಕರಾದ ಡಾ. ನೀರಜಾ ನಾಗೇಂದ್ರ ಕುಮಾರ್ ಉಪನ್ಯಾಸ ನೀಡಿದರು. ಪ್ರೇಮ ಸುಖಾನಂದ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8 ರ ಪ್ರದೀಪ್, ಶ್ಯಾಮಲಾ ಪ್ರಸಾದ್, ವಿಲಾಸ್ ಪಾಸಣ್ಣನವರ್, ಪಿ.ಚರಣ್, ವೃಷಭರಾಜು, ರೇಷ್ಮಾ, ಚಂದ್ರನಾಥ ಟ್ರಸ್ಟ್ ಭೀಮಣ್ಣ ಕೋಟೆ, ಜೈನ್ ಮಿಲನ್ ವಲಯ 8 ರ ಜoಟಿ ಕಾರ್ಯದರ್ಶಿ ಸುಖಾನಂದ, ಇನ್ನಿತರರು ಭಾಗವಹಿಸಿದ್ದರು.

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

ವೇಣೂರು: ರಥೋತ್ಸವದಂತಹ ಪುಣ್ಯ ಕಾರ್ಯ ಗಳಲ್ಲಿ ನಿಷ್ಠೆ ಯಿಂದ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಲ್ಲಿ ಜಿನೇಂದ್ರ ಭಗವಂತರ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಸಮ್ಯಕ್ ಜ್ಞಾನ, ಸಮ್ತಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯದ ಪ್ರತೀಕವೇ ರಥೋತ್ಸವ. ಇದರಿಂದ ಶ್ರಾವಕ-ಶ್ರಾವಕಿಯರಾದ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯು ಜಾಗೃತವಾಗುತ್ತದೆ ಎಂದು ಮೂಡಬಿದ್ರೆ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನುಡಿದರು. ಅವರು ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿ, ಮಾತನಾಡಿ ಈ ವರ್ಷದಿಂದ ವೇಣೂರು ಯಾತ್ರಿ ನಿವಾಸದಲ್ಲಿ “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರ ಪ್ರಾರಂಭಿಸಿದ್ದು, ಶ್ರಾವಕ-ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ ಇವರು “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಬಾರಿಯ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ವೇಣೂರು ತೀರ್ಥಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ರಥೋತ್ಸವದ ಧಾರ್ಮಿಕ ಸಭೆಯಲ್ಲಿ 90ವರ್ಷ ದಾಟಿದ ಹಿರಿಯ ಶ್ರಾವಕಿ ಗುಣಾವತಿ ಪಿ.ಎ. ಆಳ್ವ ಪಂಜಾಲ್‌ಬೈಲು, ಹಿರಿಯ ಶ್ರಾವಕ ಜಗತ್ಪಾಲ ಮುದ್ಯ ಕತ್ತೋಡಿ ಹಾಗೂ ಹಿರಿಯ ಶ್ರಾವಕಿ ಗುಣಾವತಿ ಅಮ್ಮ ಬರಮೇಲು ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪಡೆದ ಮಾಂಡೋವಿ ಮೋಟರ್ಸ್‌ನ ಚೀಫ್ ಜನರಲ್ ಮೇನೆಜರ್ ನೇರೆಂಕಿ ಪಾರ್ಶ್ವನಾಥ ಜೈನ್, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ದ್ವಿಶಾನ್ ಜೈನ್ ಕಂಚ ಇವರನ್ನು ಗೌರವಿಸಲಾಯಿತು. 2024ರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ಪ್ರಾಯೋಜಕರುಗಳಾದ ದಿ. ಅಂತಪ್ಪ ಆಳ್ವರು, ಬಡಕೋಡಿ ದಿ. ಆದಿರಾಜ ಶೆಟ್ಟಿ, ಮಾರಗುತ್ತು ದಿ. ವಿಜಯರಾಜ ಅಧಿಕಾರಿ ಕುಟುಂಬಸ್ಥರನ್ನು ಹಾಗೂ ಅಕ್ಷಯ ಕುಮಾರ್ ಕಂಬಳಿ ಉಜಿರೆ ಮೂಡುಬಿದಿರೆಯ ಎಮ್. ವಿ. ಶೆಟ್ಟಿ ಇವರನ್ನು ಗೌರವಿಸಲಾಯಿತು. ಚಾರ್ವಿ ಪ್ರಾರ್ಥಿಸಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ, ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇಣೂರು, ಮೂಡುಬಿದಿರೆ, ಪರುಷಗುಡ್ಡೆ ಜಿನಭಜನಾ ತಂಡಗಳಿಂದ ಜಿನಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಉತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ, ದ್ವಜಾವರೋಹಣದೊಂದಿಗೆ ರಥಯಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಪೂಜಾ ಕಾರ್ಯಕ್ರಮ

Article Image

ಪೂಜಾ ಕಾರ್ಯಕ್ರಮ

ಮೂಡುಬಿದಿರೆ: ದರೆಗುಡ್ಡೆಯಲ್ಲಿರುವ ಶ್ರೀ 1008 ಅನಂತನಾಥ ಸ್ವಾಮಿ ಬಸದಿಯಲ್ಲಿ ಬೆಳಗ್ಗೆ ಗಂಟೆ 9ರಿಂದ ಶ್ರೀ 1008 ಅನಂತನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಷ್ಟಮ ನಂದೀಶ್ವರದ 52 ಜಿನಬಿಂಬಗಳಿಗೆ 54 ಕಲಶಗಳಿಂದ ಮಹಾಭಿಷೇಕವು ಮೂಡುಬಿದಿರೆ ಶ್ರಿ ಜೈನ ಮಠದ ಪ. ಪೂ. ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆ‌ಶೀರ್ವಚನದೊಂದಿಗೆ ಮಾ. 22ರಂದು ನೆರವೇರಲಿರುವುದು.

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

Article Image

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

ವೇಣೂರು ಭಗವಾನ್ ಶ್ರೀ ಬಾಹುಬಲಿ ಬೆಟ್ಟದ ಬಲ ಭಾಗದಲ್ಲಿರುವ ಬಿನ್ನಾಣಿ ಬಸದಿ ಭ| ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ, ಎಡ ಭಾಗದಲ್ಲಿರುವ ಅಕ್ಕಂಗಳ ಬಸದಿ ಭ| ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ ಪರಮಪೂಜ್ಯ ಮುನಿಶ್ರೀ ೧೦೮ ಶ್ರೀ ಆದಿತ್ಯ ಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ದಾನವಾಗಿ ನೀಡಿದ 24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಳೆ (ಮಾ. 14) ಬೆಳಿಗ್ಗೆ 9.00 ಗಂಟೆಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ ನೆರವೇರಲಿರುವುದು.

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

Article Image

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಚಿಕ್ಕನಕೊಡಿಗೆ ದೇವಗಿರಿ ಕ್ಷೇತ್ರದ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರ ಮತ್ತು ಚತುರ್ವಿಂಶತಿ ತೀರ್ಥಂಕರರ ಭವ್ಯ ಸಮವಸರಣದ ಮುಂಭಾಗದಲ್ಲಿ ನೂತನ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಂಗಳ ಆಶೀರ್ವಾದ ಮತ್ತು ದಿವ್ಯ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದಿನಾಂಕ : 15-3-2025ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ : 17-03-2025ನೇ ಸೋಮವಾರದ ಪರ್ಯಂತ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪನಾ ಪೂರ್ವಕವಾಗಿ ಜರುಗಲಿದೆ. ಧಾರ್ಮಿಕ ವಿಧಿ-ವಿಧಾನಗಳು: ದಿನಾಂಕ : 15-03-2025ನೇ ಶನಿವಾರ ಬೆಳಿಗ್ಗೆ ಗಂಟೆ 7-45ರಿಂದ ನಿತ್ಯವಿಧಿ ಸಹಿತ ಇಂದ್ರ ಪ್ರತಿಷ್ಠೆ, ಬೆಳಿಗ್ಗೆ 8-55ರ ಮೇಷ ಲಗ್ನ ಸುಮುಹೂರ್ತದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 11-45ರ ವೃಷಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ಗಂಟೆ 2-00ರಿಂದ ನಾಂದಿಮಂಗಲ ವಿಧಾನ, ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಸಂಜೆ ಗಂಟೆ 4-15ರ ಕರ್ಕಾಟಕ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಸ್ವಾಮಿ ಪ್ರತಿಷ್ಠೆ, ಸಂಜೆ ಗಂಟೆ 5-25ರ ಸಿಂಹಲಗ್ನದಲ್ಲಿ ನಾಗಾರಾಧನಾ ಪೂರ್ವಕ ನಾಗಪ್ರತಿಷ್ಠೆ, ನವಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 7-00ರಿಂದ ಮಲೆನಾಡು ಪ್ರಾಂತ್ಯದ ಆಯ್ದ ಜಿನಭಜನಾ ತಂಡಗಳಿಂದ “ಜಿನಗಾನ ಪ್ರಸ್ತುತಿ” ದಿನಾಂಕ : 16-03-2025ನೇ ಭಾನುವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಗಂಟೆ 8-30ರಿಂದ ೮೧ ಕಲಶಗಳಿಂದ ಮಾನಸ್ತಂಭ ನವಪದ ಶುದ್ಧಿ ವಿಧಾನ, ಮಾನಸ್ತಂಭದ ಆವರಣದಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಬೆಳಿಗ್ಗೆ ಗಂಟೆ 9-00ರಿಂದ ಸಾಮೂಹಿಕ ವೃತೋಪದೇಶ, ಬೆಳಿಗ್ಗೆ ಗಂಟೆ 10-00ರಿಂದ ವೃಷಭಾದಿ ಚತುರ್ವಿಂಶತಿ ತೀರ್ಥಂಕರರಿಗೆ ಮಹಾಭಿಷೇಕ, ಮಧ್ಯಾಹ್ನ ಗಂಟೆ 2-00ರಿಂದ ಚತುರ್ವಿಂಶತಿ ತೀರ್ಥಂಕರರ ಆರಾಧನೆ. ಸಂಜೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 6-00ರಿಂದ ಸುದೇಶ್ ಜೈನ್ ಮತ್ತು ಬಳಗ, ಮಕ್ಕಿಮನೆ ಕಲಾವೃಂದ, ಮಂಗಳೂರು ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ವೈಭವ - ಪ್ರಸಿದ್ಧ ಜಿನಭಜನಾ ತಂಡಗಳಿಂದ ಜಿನಗಾನ ಪ್ರಸ್ತುತಿ ದಿನಾಂಕ : 17-03-2025ನೇ ಸೋಮವಾರ ನಿತ್ಯವಿಧಿಯೊಂದಿಗೆ ಗಂಧಯಂತ್ರಾರಾಧನಾ ಸಹಿತ ದಿವಾಗಂಟೆ 10-25ರಿಂದ 10-35ರ ಸುಮುಹೂರ್ತದಲ್ಲಿ ಚತುರ್ಮುಖ ಜಿನಬಿಂಬ ಶುದ್ದಿ, ಮಂತ್ರನ್ಯಾಸಪೂರ್ವಕ ನಯನೋನ್ಮಿಲನ, ದಿವಾಗಂಟೆ 11-15ರಿಂದ 11-45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಾನಸ್ತಂಭೋಪರಿ ಶ್ರೀ ಜಿನಬಿಂಬ ಪ್ರತಿಷ್ಠಾಪನೆ, ಅಭಿಷೇಕ, ಮಧ್ಯಾಹ್ನ 12-25ರ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನಾಪೂರ್ವಕ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 2-00ರಿಂದ ಮಾನಸ್ತಂಭೋಪರಿ ಜಿನಬಿಂಬಗಳಿಗೆ ೧೦೮ ಕಲಶಗಳ ಮಹಾಭಿಷೇಕ, ಸಮವಸರಣದಲ್ಲಿ ಕಲಿಕುಂಡ ಯಂತ್ರಾರಾಧನೆ, ೨೪ ಕಲಶಗಳ ಅಭಿಷೇಕ, ರಾತ್ರಿ 7-30ರಿಂದ ಸರ್ವಾಷ್ಣಯಕ್ಷ ಉತ್ಸವ, ಗುರುಗಳ ಪಾದಪೂಜೆ, ಕಂಕಣ ವಿಸರ್ಜನೆ, ತೋರಣ ವಿಸರ್ಜನೆ. ಧಾರ್ಮಿಕ ಸಭಾ ಕಾರ್ಯಕ್ರಮ: ಸಂಜೆ 6-00ರಿಂದ ಪೂಜ್ಯ ಭಟ್ಟಾರಕ ಶ್ರೀಗಳಿಂದ ಮಂಗಲ ಪ್ರವಚನ, ಸನ್ಮಾನ ಸಮಾರಂಭ.

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

Article Image

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರ ಮಹೋತ್ಸವವು ದಿನಾಂಕ 14.03.2025ನೇ ಶುಕ್ರವಾರ ಜರುಗಲಿರುವುದು. ಅದರ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಗಂಟೆ 10:00ಕ್ಕೆ ಬೆಟ್ಟದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಶಾಂತಿಚಕ್ರ ಆರಾಧನೆ ನೆರವೇರಲಿದೆ. ಇಂದು ಸಾಯಂಕಾಲ ಗಂಟೆ 6:30 ರಿಂದ ರಥಯಾತ್ರ ಮಹೋತ್ಸವದ ಪ್ರಯುಕ್ತ ಶ್ರೀ ರಕ್ಷಾ ಯಂತ್ರಾರಾಧನೆ, ಶ್ರೀ ಬಲಿಪೂಜೆ, ವಸಂತಕಟ್ಟೆ ಪೂಜೆ, ಶ್ರೀ ವಿಹಾರ, ಶ್ರೀ ದೇವರ ಉತ್ಸವ ಹಾಗೂ ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ಜರಗಲಿರುವುದು.

ಶಿಶಿಲ ವಾರ್ಷಿಕೋತ್ಸವ

Article Image

ಶಿಶಿಲ ವಾರ್ಷಿಕೋತ್ಸವ

ಬೆಳ್ತಂಗಡಿ: ತಾಲೂಕಿನ, ಶಿಶಿಲ, ಶ್ರೀ ಕ್ಷೇತ್ರ ಚಂದ್ರಪುರದಲ್ಲಿರುವ ಭ| ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾ. 11ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಪೂಜಾ ಕಾರ್ಯಕ್ರಮಗಳು: ತಾ. 11-03-2025ನೇ ಮಂಗಳವಾರ ಬೆಳಿಗ್ಗೆ 7.45ರ ಶುಭ ಲಗ್ನದಲ್ಲಿ ತೋರಣ ಮುಹೂರ್ತ ನಂತರ ವಿಮಾನ ಶುದ್ಧಿ ಪ್ರಾರಂಭ, ಬೆಳಿಗ್ಗೆ 9.19ರ ಶುಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಬೆಳಿಗ್ಗೆ 9.30ರಿಂದ ಶಾಂತಿ ಚಕ್ರ ಆರಾಧನೆ ಮತ್ತು ಪದ್ಮಾವತಿ ಆರಾಧನೆ, ಮಧ್ಯಾಹ್ನ 12ರಿಂದ 24 ಕಲಶ ಅಭಿಷೇಕ ಮಹೋತ್ಸವ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪಾದಪೂಜೆ, ಶ್ರೀ ಜಿನಗಂಧೋದಕ ವಿತರಣೆ. ವಿ.ಸೂ.: ಪೂಜ್ಯ ಸ್ವಾಮೀಜಿಯವರಿಂದ ಶ್ರೀಕ್ಷೇತ್ರ ಚಂದ್ರಪುರ-ಶಿಶಿಲದ ಸ್ಥಳ ಪರಿಚಯ ಪುಸ್ತಕ ಬಿಡುಗಡೆ

First Previous

Showing 5 of 12 pages

Next Last