ಎಸ್.ಡಿ.ಎಂ. ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಶಿಬಿರ
Published Date: 06-Apr-2024
ಉಜಿರೆ: 2024-25ನೇ ಶೈಕ್ಷಣಿಕ ವರ್ಷದ ಎಸ್.ಡಿ.ಎಂ. ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಶಿಬಿರವು ಪದವಿ ವಿದ್ಯಾರ್ಥಿಗಳಿಗೆ ಏ.10 ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಏ.15ರಂದು ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಯ್ಕೆ ನಡೆಯುವ ಕ್ರೀಡೆಗಳು: ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಲಿಫ್ಟಿಂಗ್, ಹ್ಯಾಂಡ್ ಬಾಲ್, ಸಾಫ್ಟ್ ಬಾಲ್, ನೆಟ್ ಬಾಲ್, ಬ್ಯಾಡ್ಮಿಂಟನ್. ವಿ.ಸೂ.: ಸಂದರ್ಶನಕ್ಕೆ ಬರುವ ಕ್ರೀಡಾ ವಿದ್ಯಾರ್ಥಿಗಳು ಕ್ರೀಡಾ ಪ್ರಶಸ್ತಿ ಪತ್ರ, ಕ್ರೀಡಾ ಸಮವಸ್ತ್ರದೊಂದಿಗೆ ಹಾಜರಿರಬೇಕು ಹಾಗೂ ಆಯ್ಕೆಗೊಂಡ ಕ್ರೀಡಾಪಟುಗಳು ಒಂದು ವಾರದ ತರಬೇತಿಯಲ್ಲಿ ಭಾಗವಹಿಸತಕ್ಕದ್ದು. ಪದವಿ ವಿದ್ಯಾರ್ಥಿಗಳು (ಡಿಗ್ರಿ) ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ ಕಡ್ಡಾಯವಾಗಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 7676056892, 9481616461, 9742887411, 8970542738