ನವರಾತ್ರಿ ವೈಭವ
Published Date: 07-Oct-2026
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಂಜೆ ಆರು ಗಂಟೆಯಿAದ ಒಂಭತ್ತು ಗಂಟೆವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಗಳು: ಅ. 11: ಭಾನುವಾರ: ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಮತ್ತು ಆದ್ವಿ, ನಿಡಿಗಲ್ (ಭಕ್ತಿಸಂಗೀತ) ಅ. 12: ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಳ, ಮಂಗಳೂರು (ಸುಗಮ ಸಂಗೀತ) ಅ. 13: ಮಂಗಳವಾರ: ಮಾನ್ಸಿ, ಮೈಸೂರು (ಭಕ್ತಿಸಂಗೀತ) ಅ. 14: ಬುಧವಾರ: ಆಗಮ, ಪೆರ್ಲ, ಮಂಗಳೂರು (ಕರ್ನಾಟಕ ಶಾಸ್ತ್ರಿಯ ಸಂಗೀತ) ಅ. 15: ಗುರುವಾರ: ಧೃತಿ ಬಿ. ಆತ್ರೇಯಾಸ್, ಧನ್ವಿ ಬಿ. ಆತ್ರೇಯಾಸ್ ಮತ್ತು ಅಸ್ರಮೇಯ ಗುರುಪ್ರಸಾದ್, ಬೆಂಗಳೂರು (ನೃತ್ಯ, ಗಾನಲಹರಿ) ಅ. 16: ಶುಕ್ರವಾರ: ಸನತ್‌ಕುಮಾರ್, ಬೆಂಗಳೂರು (ವಯಲಿನ್ ವಾದನ) ಅ. 17: ಶನಿವಾರ: ಮಯೂರಿ ಭಟ್ ಪೊಳಲಿ, ಬಂಟ್ವಾಳ (ಕರ್ನಾಟಕ ಶಾಸ್ತ್ರಿಯ ಸಂಗೀತ) ಅ. 18: ಆದಿತ್ಯವಾರ: ಐಶ್ವರ್ಯ ಜೋಗಿ ಮತ್ತು ತಂಡ, ಕುಂದಾಪುರ (ಸುಮಧುರ ಗಾನವೈಭವ) ಅ. 19: ಸೋಮವಾರ: ಅರ್ಚಿಷಾ ರಾವ್ ಮತ್ತು ಬಳಗ, ಬೆಂಗಳೂರು (ಸಂಜೆ ಗಂಟೆ 6.30 ರಿಂದ 8.30) ಮಲ್ಲಿಕಾಮಟ್ಟಿ ಮತ್ತು ಬಳಗ, ಪೊಳಲಿ (ರಾತ್ರಿ ಗಂಟೆ 9 ರಿಂದ 11.30) ಭಕ್ತಿ ಸಂಗೀತ