216 ಪಿಯುಸಿ ಪ್ರಾಚಾರ್ಯರ ಹುದ್ದೆಗೆ ಅರ್ಜಿ ಆಹ್ವಾನ


Logo

Published Date: 06-Sep-2026

ಬೆಂಗಳೂರು: ಸರಕಾರಿ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಗ್ರೂಪ್ 'ಎ' ವೃಂದದ ಪ್ರಾಂಶುಪಾಲರ ನೇರ ನೇಮಕಾತಿ ಕೋಟಾದ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲು ಇಲಾಖೆಯು (ಪದವಿ ಪೂರ್ವ) ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ. ಉಳಿಕೆ ಮೂಲ ವೃಂದದ 216 ಹುದ್ದೆಗಳಿಗೆ ನೇಮಕ ನಡೆಯಲಿದೆ. ಸಾಮಾನ್ಯ ವರ್ಗಕ್ಕೆ 108 ಹುದ್ದೆಗಳು ಮೀಸಲಾಗಿದ್ದು, ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿವಿಧ ಹಿಂ.ವರ್ಗಗಳ ಪ್ರವರ್ಗಗಳಿಗೆ ನಿಯಮಾನುಸಾರ ಅರ್ಹ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಕೆಇಎ ಮೂಲಕ ನೇಮಕಾತಿ ನಡೆಯಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮಾರ್ಗಸೂಚಿಗಳ ಕುರಿತು ವೆಬ್‌ಸೈಟ್ https://cetonline. karnataka.gov.in/kea/ನಲ್ಲಿ ಮಾಹಿತಿ ಲಭ್ಯವಿರುತ್ತದೆ. ಅರ್ಜಿ ಸಲ್ಲಿಕೆಗೆ ಸೆ.7 ರಿಂದ ಅ.10ರವರೆಗೆ ಸಮಯಾವಕಾಶವಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img